Advertisement

ದಿಗಂತದ ಮಸ್ತಕದಲ್ಲಿ ಹೊಸ ಚಿತ್ರ

11:12 AM Jul 14, 2021 | Team Udayavani |

ಸಸ್ಪೆನ್ಸ್‌-ಥ್ರಿಲ್ಲರ್‌ಕಥಾಹಂದರದ “ಗಡಿಯಾರ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಯುವ ನಿರ್ದೇಶಕನಾಗಿ ಪರಿಚಯವಾಗಿದ್ದ ಪ್ರಬಿಕ್‌ ಮೊಗವೀರ್‌, ಈಗ ಮತ್ತೂಂದು ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಆ ಚಿತ್ರದ ಹೆಸರು “ಹೊಸ ದಿಗಂತ’.

Advertisement

ಇನ್ನು ಪ್ರಬಿಕ್‌ ಅವರೇ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಹಾಗೂ ನಿರ್ದೇಶನ ಮಾಡುತ್ತಿರುವ ಈ ಚಿತ್ರದಕಥೆ ಮನುಷ್ಯನ ಮೆದುಳಿನ ಮೇಲಿನ ವೈಜ್ಞಾನಿಕ ಮತ್ತು ತರ್ಕಕ್ಕೆ ಸಿಲುಕದಕೆಲವು ಸಂಗತಿಗಳ ಸುತ್ತ ನಡೆಯಲಿದೆಯಂತೆ.  ತಮ್ಮ ಸಿನಿಮಾದ ಶೀರ್ಷಿಕೆಯ ಬಗ್ಗೆ ಮಾತನಾಡುವ ನಿರ್ದೇಶಕ ಪ್ರಬಿಕ್‌ ಮೊಗವೀರ್‌, “ನನ್ನ ಹಿಂದಿನ “ಗಡಿಯಾರ’ ಸಿನಿಮಾದಲ್ಲಿ ಪುಸ್ತಕ ಹೀರೋ, ಈಗಿನ “ಹೊಸದಿಗಂತ’ ಸಿನಿಮಾದಲ್ಲಿ ಮಸ್ತಕ ಹೀರೋ.

ಇದನ್ನೂ ಓದಿ: ಫ‌ಸ್ಟ್‌ಲುಕ್‌ನಲ್ಲಿ ಹೊರಬಂತು 5ಡಿ

ಕೆಲವೊಂದು ನಂಬಲು ಅಸಾಧ್ಯವಾದ ತನಿಖಾ ವರದಿಯನ್ನು ಈ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಸಸ್ಪೆನ್ಸ್‌-ಥ್ರಿಲ್ಲರ್‌ ಅಂಶಗಳ ಜೊತೆಗೆ ಮನರಂಜನೆ, ಸಾಮಾಜಿಕ ಸಂದೇಶ ಎಲ್ಲವೂ ಈ ಸಿನಿಮಾದಲ್ಲಿದೆ. ಇದೊಂದು ಬಹುತಾರಾಗಣದ ಚಿತ್ರವಾಗಿದ್ದು, ಸದ್ಯ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ’ ಎಂದಿದ್ದಾರೆ. “ಹೊಸ ದಿಗಂತ’ ಚಿತ್ರದ ಟೈಟಲ್‌ ಪೋಸ್ಟರ್‌ಇತ್ತೀಚೆಗೆ ಬಿಡುಗಡೆಯಾಗಿದ್ದು, ಟೈಟಲ್‌ಗೆ “ಸಂಥಿಂಗ್‌ ಅನೇಬಲ್‌ ಟು ಎಕ್ಸ್‌ಪ್ಲೇನ್‌’ ಎನ್ನುವ ಟ್ಯಾಗ್‌ಲೈನ್‌ ಇದೆ.

Advertisement

Udayavani is now on Telegram. Click here to join our channel and stay updated with the latest news.

Next