Advertisement
ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಘೋಷಣೆಯೊಂದಿಗೆ ಜಾಗೃತಿ ಮೂಡಿಸಲಾಯಿತು. ನಂತರ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಿತು. ಗ್ರಾಪಂ ಮಾಜಿ ಸದಸ್ಯ ಶರಣಬಸು ಡೊಣಗಿ ಮಾತನಾಡಿ, ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಮಕ್ಕಳ ಹಾಜರಾತಿ ಹೆಚ್ಚಳ ಇರುವ ಕಾರಣ ಈಗಾಗಲೆ ಉತ್ತಮ ಶಾಲೆ ಎಂದು ಹೆಸರು ಪಡೆದಿದೆ ಎಂದರು.
ಪಾಲಕರು ಗಮನ ಹರಿಸಬೇಕು. ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣ ಸಿಗುವುದರೊಂದಿಗೆ ಉತ್ತಮ ಶಾಲೆ ಎನಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪಾಲಕರ ಸಹಕಾರ ಅಗತ್ಯವಿದೆ ಎಂದು ಹೇಳಿದರು ಕಾರ್ಯ ಕ್ರಮದಲ್ಲಿ ಗುರಪ್ಪ ಪೂಜಾರಿ, ಚಂದ್ರಶೇಖರ ವಡೆಯರ್, ಎಸ್. ಬಿ. ಬಳ್ಳೊಳಿ, ಸೋಮಶೇಖರ ಮಕಣಾಪುರ, ಆರ್.ಕೆ. ಉಟ್ಟಿಗಿ, ಎಚ್. ಎಚ್. ಹೂಗಾರ, ಎಚ್.ಎಚ್. ಹುಸೇನನಾಯಕ, ಎಸ್.ಆರ್. ಕಟ್ಟಿಮನಿ, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.