Advertisement
ಶುಕ್ರವಾರ ಬೆಳಗ್ಗೆ ಕಂದಾವರ ಗ್ರಾ.ಪಂ. ವ್ಯಾಪ್ತಿಯ ಅದ್ಯಪಾಡಿ ನೆರೆ ಪೀಡಿತ ಕೊಲೊಟ್ಟು ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಹಾಗೂ ನೆರೆ ಹಾವಳಿಯ ಬಗ್ಗೆ ಅಭಿಪ್ರಾಯ ಪಡೆದುಅವರು ಮಾತನಾಡಿದರು.
ಶಾಶ್ವತ ಪರಿಹಾರ : ತಜ್ಞರ ವರದಿಗೆ ಸೂಚನೆ ಅದ್ಯಪಾಡಿಯ ಅಕ್ಕ ಪಕ್ಕದ ಊರುಗಳಿಗೆ ನೆರೆ ಹಾವಳಿ ತಡೆಯಲು, ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರಿಂದ ವರದಿ ಪಡೆದುಕೊಳ್ಳಿ, ಪ್ರವಾಹ ಬಂದಿರುವ ಸಂದರ್ಭದಲ್ಲಿಯೇ ತಂತ್ರಜ್ಞರನ್ನು ಸ್ಥಳಕ್ಕೆ ಕರೆತನ್ನಿ. ಹಾಗೂ ಇಲ್ಲಿನ ವಸ್ತುಸ್ಥಿತಿ ವಿವರಿಸಿ ಎಂದು ಸಚಿವರು ಸೂಚಿಸಿದರು.
Related Articles
ಮರವೂರು ಡ್ಯಾಂ ನಿರ್ಮಾಣವಾದಾಗಿನಿಂದ ಪ್ರತೀ ವರ್ಷ ನೆರೆ ಹಾವಳಿ ಇದೆ. ಅದ್ಯಪಾಡಿ, ಕೊಳಂಬೆ, ಕಂದಾವರ, ಗುರುಪುರ ಸುತ್ತಮುತ್ತಲ ಪ್ರದೇಶದಲ್ಲಿ ಭತ್ತದ ಬೆಳೆ ಸಾಧ್ಯವಾಗುತ್ತಿಲ್ಲ. ಇದಲ್ಲದೆ ಸುಮಾರು 35 ಮನೆ ನಿವಾಸಿಗಳಿಗೆ ನಿತ್ಯ ನೆರೆ ಹಾವಳಿ ಇದೆ. ವೃದ್ಧ ದಂಪತಿ ವಾಸವಾಗಿದ್ದ ಮನೆಗೆ ನೀರು ನುಗ್ಗಿದ್ದು ಅವರನ್ನು, ಜಾನುವಾರುಗಳನ್ನು ಸ್ಥಳಾಂತರ ಮಾಡಿದ್ದೇವೆ. ಶಾಶ್ವತ ಪರಿಹಾರ ಬೇಕೆಂದು ಬೇಡಿಕೆ ಇಟ್ಟಿದ್ದೇವೆ. ನೆರೆಯ ವೇಳೆ ದೋಣಿಯನ್ನೇ ಅವಲಂಬಿಸಬೇಕಿದ್ದು, ಮುಳುಗುವ ಮುನ್ನ ಕ್ರಮ ವಹಿಸಿ.
-ಶಿವರಾಮ, ನೆರೆಪೀಡಿತ ಅದ್ಯಪಾಡಿ ನಿವಾಸಿ
Advertisement
ನೆರೆ ಪರಿಹಾರ ಪಡೆಯಲು ನಿರಾಕರಣೆಶಾಶ್ವತ ಪರಿಹಾರ ಒದಗಿಸುವಂತೆ 11 ವರ್ಷದಿಂದ ಆಗ್ರಹಿಸುತ್ತಿರುವ ಸ್ಥಳೀಯರು ನೆರೆ ಪರಿಹಾರ ಪಡೆಯಲು ನಿರಾಕರಿಸಿದರು. ಈ ವೇಳೆ ನಿವಾಸಿಗಳ ಮನವೊಲಿಸಿದ ಸಚಿವರು, ನೆರೆ ಪರಿಹಾರಕ್ಕೂ ಶಾಶ್ವತ ಪರಿಹಾರಕ್ಕೂ ಸಂಬಂಧವಿಲ್ಲ. ನೆರೆ ಪರಿಹಾರ ಪಡೆದರೆ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂಬ ಭಾವನೆ ಬೇಡ. ಒಂದಕ್ಕೊಂದು ಸಂಬಂಧವಿಲ್ಲ. ಭತ್ತದ ಗದ್ದೆ, ತೋಟ ಮುಳುಗಡೆಯಿಂದ ನಷ್ಟ ಅನುಭವಿಸಿದ್ದು, ಅದಕ್ಕೆ ಸಿಗುವ ನೆರೆ ಪರಿಹಾರ ಪಡೆದುಕೊಳ್ಳಿ. ಫಲ್ಗುಣಿ ನದಿಯಿಂದಾಗುವ ನೆರೆ ಹಾವಳಿ ತಡೆಯುವ ಶಾಶ್ವತ ಪರಿಹಾರದ ಜವಾಬ್ದಾರಿ ನಮ್ಮದು ಎಂದು ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು. ಬಳಿಕ ನೆರೆ ಪರಿಹಾರ ಪಡೆಯಲು ನಿವಾಸಿಗಳು ಒಪ್ಪಿಗೆ ಸೂಚಿಸಿದರು.