Advertisement

ಬುಧವಾರದ ರಾಶಿಫಲ: ಈ ರಾಶಿಯ ಅವಿವಾಹಿತರಿಗೆ ಕೂಡಿಬರಲಿದೆ ವಿವಾಹ ಯೋಗ

07:11 AM Dec 07, 2022 | Team Udayavani |

ಮೇಷ: ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ವಿಶ್ವಾಸ ಪಾತ್ರರಾಗಿ ಜವಾಬ್ದಾರಿ ನಿರ್ವಹಿಸಿ ಪರರ ಹಣ ನಿರ್ವಹಿಸುವಾಗ ಪಾರದರ್ಶಕತೆಗೆ ಆದ್ಯತೆ ನೀಡಿ. ದೈರ್ಯ, ಹಿಂಜರಿಕೆ ಹೆದರದೇ ಕೆಲಸ ಮಾಡಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಮನೋರಂಜನೆಯಿಂದ ಕೂಡಿದ ದಿನಚರಿ.

Advertisement

ವೃಷಭ: ಗೃಹ ವಾಹನಾದಿ ಸುಖ ವೃದ್ಧಿ. ನೂತನ ಬಂಧುಮಿತ್ರರ ಸಂಗಮ. ಕೆಲಸ ಕಾರ್ಯಗಳಲ್ಲಿ ಗೌರವಾನ್ವಿತ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಜಾಣತನ ಜವಾಬ್ದಾರಿ ಪ್ರದರ್ಶಿಸಿ. ಜನಮನ್ನಣೆ ಲಭ್ಯ. ಉತ್ತಮ ಪ್ರಗತಿದಾಯಕ ಧನಾರ್ಜನೆ. ನಾನಾ ರೀತಿಯಲ್ಲಿ ಧನ ಸದ್ವಿನಿಯೋಗ.

ಮಿಥುನ: ಧಾರ್ಮಿಕ ಚಟುವಟಿಕೆಗಳಲ್ಲಿ ತಲ್ಲೀನತೆ. ದೇವತಾ ಸ್ಥಳಗಳ ಸಂದರ್ಶನ. ಮನಃ ತೃಪ್ತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಯೋಗ್ಯ ವಧು ವರ ಲಭಿಸಿದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉಳಿತಾಯದಲ್ಲಿ ಆಸಕ್ತಿ. ಗುರು ಹಿರಿಯರಿಗೆ ಉತ್ತಮ ಸ್ಥಾನ ಲಾಭ.

ಕರ್ಕ: ದೀರ್ಘ‌ ಪ್ರಯಾಣ. ಗುರುಹಿರಿಯರಿಗೆ ಸಂತೋಷಪ್ರದರಾಗಿರಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಆರೋಗ್ಯದಲ್ಲಿ ಸುದಾರಣೆ. ಸಾಮಾನ್ಯ ಧನ ವೃದ್ಧಿ.

ಸಿಂಹ: ಅನಗತ್ಯ ವಿಚಾರಗಳಲ್ಲಿ ತೊಡಗಿಸಿಕೊಂಡು ತೊಂದರೆ ಎಳೆದುಕೊಳ್ಳದಿರಿ. ದಾಕ್ಷಿಣ್ಯಕ್ಕೆ ಒಳಗಾಗದೆ ಜವಾಬ್ದಾರಿಯುತ ಮಾತುಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ದೂರದ ಮಿತ್ರರಿಂದ ಸಹಕಾರ. ಅವಿವಾಹಿತರಿಗೆ ವಿವಾಹ ಯೋಗ. ದಾಂಪತ್ಯ ತೃಪ್ತಿಕರ.

Advertisement

ಕನ್ಯಾ: ಹಠ ಮಾಡದೇ ತಾಳ್ಮೆ ಸಹನೆಯಿಂದ ಕಾರ್ಯಪ್ರವೃತ್ತರಾಗುವುದರಿಂದ ಎಲ್ಲಾ ವ್ಯವಹಾರಗಳಲ್ಲಿ ಗಣನೀಯ ಪ್ರಗತಿ. ಕೀರ್ತಿ ಶ್ಲಾಘನೆ ಲಭ್ಯ. ಜವಾಬ್ದಾರಿಯುತ ಮಾತಿನಿಂದ ಜನಪ್ರಶಂಸೆ. ವಿದ್ಯಾರ್ಥಿಗಳಿಗೆ ಜ್ಞಾನ ವಿಚಾರಗಳಿಗೆ ಸದ್‌ವ್ಯಯ.

ತುಲಾ: ಉದ್ಯೋಗ ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ಮೀರಿದ ಪ್ರತಿಫ‌ಲ ದೊರಕಿದ್ದರಿಂದ ಅಧಿಕ ಸಂತೋಷ. ನಿರಂತರ ಧನಾರ್ಜನೆ. ನೂತನ ಹೂಡಿಕೆಗಳು ಸಂಭವ. ಅವಿವಾಹಿತರಿಗೆ ವಿವಾಹ ಯೋಗ. ಸಂಬಂಧ ಒದಗಿ ಬರುವುದು. ಗುರುಹಿರಿಯರಲ್ಲಿ ಸಮಾಧಾನದಿಂದಿರಿ.

ವೃಶ್ಚಿಕ: ಆರೋಗ್ಯ ಉತ್ತಮ. ಧನಾರ್ಜನೆಗೆ ಕೊರತೆ ಕಾಣದು. ಗೃಹದಲ್ಲಿ ಸಂತೋಷದ ವಾತಾವರಣ. ಬಂಧುಮಿತ್ರರ ಸಹಕಾರ ಪ್ರೋತ್ಸಾಹ. ಮಕ್ಕಳಿಂದ ಅನುಕೂಲಕರ ದಾಂಪತ್ಯ ಸುಖ ತೃಪ್ತಿದಾಯಕ. ಅವಿವಾಹಿತರಿಗೆ ವಿವಾಹ ಯೋಗ ಒದಗಿ ಬರುವುದು.

ಧನು: ಭೂಮಿ ಆಸ್ತಿ ವಾಹನಾದಿ ವಿಚಾರಗಳಲ್ಲಿ ಪ್ರಗತಿ. ನೂತನ ಮಿತ್ರರ ಭೇಟಿ. ತಾಯಿ ಸಮಾನರಿಂದ ಅಧಿಕ ಲಾಭ. ಸುಖ ಸಂತೋಷ ವೃದ್ಧಿ. ಗೃಹದಲ್ಲಿ ಮಂಗಳ ಕಾರ್ಯದ ಸಂಭ್ರಮ. ಜ್ಞಾನ ವಿದ್ಯೆ ಸಂಬಂಧ ವಿಚಾರಗಳಿಗೆ ಹೆಚ್ಚಿದ ಆದ್ಯತೆ.

ಮಕರ: ಆರೋಗ್ಯ ಸುದೃಢ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಯಶಸ್ಸು ಲಭಿಸಲಿದೆ. ಸಹೋದ್ಯೋಗಿಗಳಿಂದ ಭಾೃತೃ ಸಮಾನರಿಂದ ಉತ್ತಮ ಸಹಕಾರ. ನೂತನ ಬಂಧು ಮಿತ್ರರ ಭೇಟಿ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಆದ್ಯತೆ.

ಕುಂಭ: ದೀರ್ಘ‌ ಸಂಚಾರ. ದೂರದ ವ್ಯವಹಾರದಲ್ಲಿ ಪ್ರಗತಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ವ್ಯವಹಾರ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಅನಿರೀಕ್ಷಿತ ಧನಲಾಭ. ಸಾಂಸಾರಿಕ ಸುಖ ತೃಪ್ತಿದಾಯಕ.

ಮೀನ: ಆರೋಗ್ಯ ಉತ್ತಮ ನಾಯಕತ್ವ ಗುಣ ವೃದ್ಧಿ. ದಂಪತಿಗಳಲ್ಲಿ ಪರಸ್ಪರ ಸಹಕಾರದಿಂದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಪಾಲುದಾರಿಕಾ ಉದ್ಯೋಗದಲ್ಲಿ ಗಣನೀಯ ಪ್ರಗತಿ.

Advertisement

Udayavani is now on Telegram. Click here to join our channel and stay updated with the latest news.

Next