Advertisement
ಮೇಷ: ಒಂದರ ಮೇಲೆ ಒಂದರಂತೆ ಅಡೆತಡೆಗಳು ಕಷ್ಟಗಳು ಎದುರಾಗುತ್ತಲೇ ಇರುತ್ತದೆ. ಅವನ್ನು ಹೇಗೆ ಎದುರಿಸುತ್ತೀರಿ ಎಂಬುದು ನಿಮಗೆ ಸವಾಲಾದೀತು. ಆದರೆ ಎದೆಗುಂದದೆ ಮನಸ್ಸನ್ನು ಪ್ರಶಾಂತವಾಗಿಟ್ಟುಕೊಳ್ಳಿರಿ.
Related Articles
Advertisement
ಸಿಂಹ: ಕಗ್ಗತ್ತಲಾವರಿಸಿದ ಮನಸ್ಸು ರೋಸಿ ಹೋದೀತು. ಹೇಗೆ, ಎತ್ತ, ಏನು ಎಂಬುದು ನಿಮಗೇ ಅರಿವಿಲ್ಲದಂತಾದೀತು. ನೀವು ಕೈಗೊಳ್ಳುವ ಕಾರ್ಯದಲ್ಲಿ ಜಯ ಸಿಗಲಿದೆ. ಜನರ ಬೆಂಬಲವು, ಪ್ರಶಂಸೆಯೂ ನಿಮ್ಮೊಂದಿಗಿರುತ್ತದೆ.
ಕನ್ಯಾ: ಶುಭ ಮಂಗಲ ಕಾರ್ಯ ನಿಮಿತ್ತ ಪ್ರವಾಸವು ಕೂಡಿಬರಲಿದೆ. ಸಂಸಾರದಲ್ಲಿ ನೆಮ್ಮದಿ, ಸಂತೋಷ, ಸಮಾಧಾನ ಲಭಿಸಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯವು ಉತ್ತಮ. ಅನಿರೀಕ್ಷಿತವಾಗಿ ಅತಿಥಿಗಳ ಭೇಟಿಯಿಂದ ಸಂತಸ.
ತುಲಾ: ತಂದೆ, ಮಕ್ಕಳೊಳಗೆ ಆಸ್ತಿ ಬಗ್ಗೆ ಸ್ವಲ್ಪ ತಕರಾರು ಇದ್ದರೂ ಸಂಧಾನದಿಂದ ಸರಿಯಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯದ ಪ್ರಯತ್ನ ನಡೆದೀತು. ಮಕ್ಕಳು ವಿದ್ಯಾಭ್ಯಾಸಕ್ಕಾಗಿ ವಿದೇಶಯಾನವಿದ್ದೀತು.
ವೃಶ್ಚಿಕ: ಮಕ್ಕಳ ವಿವಾಹವು ನಡೆದೀತು. ಅನೇಕ ರೀತಿಯಲ್ಲಿ ಖರ್ಚು ಕಂಡುಬರಲಿದೆ. ಉದ್ಯೋಗ, ವ್ಯವಹಾರದಲ್ಲಿ ನಿಮ್ಮೆಣಿಕೆಯಂತೆ ಲಾಭವಿದ್ದೀತು. ಜನರು ನಿಮ್ಮ ಪ್ರಶಂಸೆ, ಏಳಿಗೆ ಕಂಡು ಹೊಟ್ಟೆ ಉರಿಸಿಕೊಂಡಾರು.
ಧನು: ವ್ಯವಹಾರ ನಿಮಿತ್ತ ಪ್ರಯಾಣ ಕೂಡಿಬರಲಿದೆ.ಆದರೂ ಮೋಜಿಗಾಗಿ ಹೆಚ್ಚು ಖರ್ಚು ಮಾಡುವುದು ಬೇಡ. ಪತ್ನಿಯ ಉದ್ಯೋಗದ ನಿಮಿತ್ತ ನಿಮಗೆ ಚಿಂತೆ ಆವರಿಸಲಿದೆ. ಉದ್ಯೋಗದಲ್ಲಿ ಭಡ್ತಿ ಸಿಗುವ ಹಾಗಿದೆ.
ಮಕರ: ಉದ್ಯೋಗರಂಗದಲ್ಲಿ ನಿಮಗೆ ತುಂಬಾ ಕಿರಿಕಿರಿ ಕಂಡುಬಂದೀತು. ಮೇಲಾಧಿಕಾರಿಗಳಿಂದ ಒತ್ತಡವು ಕಂಡುಬರುವುದು. ಮನೆಯಲ್ಲಿ ಹಿರಿಯರಿಂದ ಕಿರಿಕಿರಿ ಕಂಡುಬಂದೀತು. ಮಕ್ಕಳಿಂದ ಸಮಾಧಾನವಿದೆ.
ಕುಂಭ: ಕಾರ್ಯನಿಮಿತ್ತ ಪ್ರವಾಸ ಕಂಡುಬರುವುದು. ಆದರೂ ಅದು ವ್ಯರ್ಥವಾಗಲಿದೆ. ಮಕ್ಕಳ ಮನೆಗೆ ಪ್ರಯಾಣ ಮಾಡುವ ಅವಕಾಶ ಬರಲಿದೆ. ಆತ್ಮವಿಶ್ವಾಸ, ಧೈರ್ಯ ಹಾಗೂ ನೇರ ನುಡಿ, ನಡೆಯಿಂದ ಮುನ್ನಡೆಯಿರಿ.
ಮೀನ: ಕಾರ್ಯರಂಗದಲ್ಲಿ ವಿಲಾಸೀ ಜೀವನಕ್ಕೆ ಮಾರು ಹೋಗಿ ನಿಮ್ಮ ಬಗ್ಗೆ ಜಾಗ್ರತೆ ಮಾಡುವುದು ಅತೀ ಅಗತ್ಯವಿದೆ. ಮನೆಯಲ್ಲಿ ಮಂಗಲಕಾರ್ಯದ ಪ್ರಯತ್ನ ನಡೆದರೂ ನೀವು ಒಪ್ಪುವುದು ಅತೀ ಅಗತ್ಯ
ಎನ್.ಎಸ್. ಭಟ್