Advertisement

Daily Horoscope: ಜಪ, ಧ್ಯಾನಗಳಿಂದ ಯಶಸ್ಸು ಗಳಿಕೆ ಸುಲಭ, ಉದ್ಯೋಗಸ್ಥರಿಗೆ ಶುಭ ಯೋಗ

07:29 AM Sep 05, 2023 | Team Udayavani |

ಮೇಷ: ಗಟ್ಟಿ ನಿರ್ಧಾರದಿಂದ ಒಂದೇ ಗುರಿಯ ಮೇಲೆ ಪ್ರಯತ್ನವನ್ನು ಕೇಂದ್ರೀಕರಿಸಿ. ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿ ಅನಿವಾರ್ಯವಾಗಿ ಒದಗಲಿದೆ. ಮನೆಯಲ್ಲಿ ಮಂಗಲ ಕಾರ್ಯದ ಯೋಜನೆ. ಹಿರಿಯರ ಆರೋಗ್ಯ ಸ್ಥಿರ.

Advertisement

ವೃಷಭ: ನಿಮ್ಮ ಕಾರ್ಯೋತ್ಸಾಹದ ವೇಗಕ್ಕೆ ತಡೆಯೊಡ್ಡುವ ಪ್ರಯತ್ನವನ್ನು ನಿರ್ಲಕ್ಷಿಸಿರಿ. ಹೊರಗಿನ ಒತ್ತಡಗಳಿಗೆ ಮಣಿಯದೆ ಮುನ್ನುಗ್ಗಿದರೆ ಜಯ ಖಚಿತ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರ ಸ್ವಂತ ಆದಾಯ ಗಳಿಕೆ ಪ್ರಯತ್ನಕ್ಕೆ ವಿಜಯ.

ಮಿಥುನ: ನಿಮ್ಮ ಕಾಲೆಳೆಯುವ ಪ್ರಯತ್ನಗಳು ಆಗಾಗ ನಡೆಯುತ್ತಿದ್ದರೂ ಅವುಗಳನ್ನು ಕೊಡವಿ ಮುಂದಡಿಯಿಡುವ ಚೈತನ್ಯ ನಿಮ್ಮಲ್ಲಿರುವುದರಿಂದ ವಿಜಯ ನಿಮ್ಮದಾಗಲಿದೆ. ಗೃಹೋಪಕರಣ ವ್ಯಾಪಾರಿಗಳಿಗೆ ಲಾಭ.

ಕರ್ಕಾಟಕ: ಚಿಂತೆಗಳ ಸರಪಣಿಯಿಂದ ನಿಮ್ಮ ಮನಸ್ಸನ್ನು ನೀವೇ ಕಟ್ಟಿಹಾಕಿಕೊಳ್ಳದಿರಿ. ಜಪ, ಧ್ಯಾನಗಳಿಂದ ಯಶಸ್ಸು ಗಳಿಕೆ ಸುಲಭವಾಗುವುದು. ಉತ್ತರದ ಗೆಳೆಯರಿಂದ ಶುಭ ವಾರ್ತೆ. ಉದ್ಯೋಗ ಅರಸುತ್ತಿರುವವರಿಗೆ ನೌಕರಿ ಸಿಗುವ ಯೋಗ.

ಸಿಂಹ: ನಿಮ್ಮ ಸಾಹಸ ಪ್ರವೃತ್ತಿಯೊಂದಿಗೆ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯ ಜೋಡಣೆಯಿಂದ ಯಶಸ್ಸಿನ ಜೊತೆಯಲ್ಲಿ ಜನಾದರವೂ ಪ್ರಾಪ್ತಿ. ಕಿರಿಯ ಸಹಾಯಕರನ್ನು ಪ್ರೋತ್ಸಾ ಹಿಸುವುದರಿಂದ ಲಾಭದ ಬೆಳವಣಿಗೆ ಸುಲಭ.

Advertisement

ಕನ್ಯಾ: ಅಧಿಕ ಅಪೇಕ್ಷೆಯಿಲ್ಲದೆ ಕೆಲಸ ಮಾಡುತ್ತಿರಿ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳ ಪ್ರೋತ್ಸಾಹ ದಿಂದ ಸಮಾಧಾನ. ದೀರ್ಘ‌ಕಾಲೀನ ಹೂಡಿಕೆಗಳಿಂದ ಲಾಭ ಗಳಿಕೆ. ಅವಿವಾಹಿತರಿಗೆ ಶೀಘ್ರ ವಿವಾಹ ಸಂಭವ. ಉದ್ಯೋಗಾಸಕ್ತರಿಗೆ ಶುಭ ಸೂಚನೆ.

ತುಲಾ: ಜಯಾಪಜಯಗಳ ಲೆಕ್ಕಾಚಾರವಿಲ್ಲದೆ ಕಾರ್ಯಪ್ರವೃತ್ತರಾಗುವುದರಿಂದ ಮುನ್ನಡೆ. ಪರಿಸರದ ಪ್ರೋತ್ಸಾಹ ಪ್ರಗತಿಗೆ ಪೂರಕ. ದೀರ್ಘ‌ಕಾಲದಿಂದ ನಿರೀಕ್ಷಿಸುತ್ತಿದ್ದ ಧನ ಕೈಸೇರಿ ಸಮಾಧಾನ. ಗೃಹಿಣಿಯರಿಗೆ ಸ್ವಯಂ ಆದಾಯ ವೃದ್ಧಿ.

ವೃಶ್ಚಿಕ: ಧನ ಸಂಚಯ ಮಾಡುವುದರಲ್ಲಿ ವಿಶೇಷ ಆಸಕ್ತಿ. ಕಾರ್ಯರಂಗದಲ್ಲಿ ದಾಪುಗಾಲಿ ನಿಂದ ಮುನ್ನುಗ್ಗುವ ಆತುರಕ್ಕೆ ಕಡಿವಾಣ ಹಾಕಿಕೊಳ್ಳಿ. ವೈದ್ಯರ ಭೇಟಿ ಸಂಭವ. ಮನೆ ನವೀಕರಣ ಹಾಗೂ ವಿಸ್ತರಣೆಗೆ ಕಾರ್ಯಯೋಜನೆ.

ಧನು: ಹುಡುಕುತ್ತಿದ್ದ ಅವಕಾಶ ತಾನಾಗಿ ಒದಗಿ ಬಂದು ಸಂತೃಪ್ತಿ. ದೇವತಾರಾಧನೆಯತ್ತ ವಿಶೇಷ ಒಲವು. ಮಕ್ಕಳ ಆರೋಗ್ಯ ಸಮಸ್ಯೆ ನಿವಾರಣೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಾಯ. ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಲಭ್ಯ.

ಮಕರ: ಉದ್ಯೋಗಸ್ಥರಿಗೆ ಶುಭ ಯೋಗ. ಅಲ್ಪಕಾಲದ ಹಣಕಾಸು ಯೋಜನೆಗಳ ಲಾಭ ಪಡೆಯಲು ಸಿದ್ಧರಾಗಿ. ಮಾತು ಕೃತಿಗಳಲ್ಲಿ ತಾಳ್ಮೆಯಿಂದ ವಿಶೇಷ ಲಾಭ. ಯಂತ್ರೋಪಕರಣ ಉದ್ಯಮಿಗಳಿಗೆ ನಿರೀಕ್ಷೆ ಮೀರಿ ಲಾಭ. ಅನರೀಕ್ಷಿತ ಧನಾಗಮ.

ಕುಂಭ: ಮನೆಯಲ್ಲಿ ಎಲ್ಲರ ಆರೋಗ್ಯ ಸ್ಥಿರ. ಸಂಸಾರ ಸುಖ ಉತ್ತಮ. ದೇವತಾರಾಧನೆ, ದಾನ ಧರ್ಮಾದಿಗಳಲ್ಲಿ ವಿಶೇಷ ಆಸಕ್ತಿ. ದೂರ ದಲ್ಲಿರುವ ಮಕ್ಕಳಿಂದ ಶುಭ ಸಮಾಚಾರ. ಉದ್ಯೋಗಸ್ಥ ರಿಗೂ ವ್ಯವಹಾರಸ್ಥರಿಗೂ ಅಭಿವೃದ್ಧಿ ಹೊಂದುವ ಯೋಗ. ಕಿರಿಯರ ಆರೋಗ್ಯದ ಮೇಲೆ ಕಣ್ಣಿಡಿರಿ.

ಮೀನ: ಗುರು ದೇವತಾರಾಧನೆ ಮತ್ತು ಸಮಾಜಸೇವಾ ಚಟುವಟಿಕೆಗಳಲ್ಲಿ ಮಗ್ನರಾಗುವಿರಿ. ಹಳೆಯ ಗೆಳೆಯರೊಬ್ಬರಿಂದ ಹೊಸ ವ್ಯವಹಾರ ಪ್ರಸ್ತಾವ ಮಂಡನೆ. ಹೊಸ ಹೂಡಿಕೆ ಸದ್ಯ ಬೇಡ. ಔಷಧ ವ್ಯಾಪಾರಿಗಳಿಗೆ ಶುಭ ಯೋಗ. ದಂಪತಿಗಳ ನಡುವೆ ಅನುರಾಗ, ಹೊಂದಾಣಿಕೆ ವೃದ್ಧಿ. ಮಕ್ಕಳ ಪುರೋಭಿವೃದ್ಧಿ ಚಿಂತನೆ.

Advertisement

Udayavani is now on Telegram. Click here to join our channel and stay updated with the latest news.

Next