Advertisement

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ

07:34 AM Sep 15, 2023 | Team Udayavani |

ಮೇಷ: ಗುರು ಅನುಗ್ರಹದಿಂದ ಯಶಃಪಥದಲ್ಲಿ ಮುಂದುವರಿಯುವಿರಿ. ಒಂದೇ ಗುರಿಯ ಮೇಲೆ ಲಕ್ಷ್ಯವನ್ನು ಕೇಂದ್ರೀಕರಿಸುವುದರಿಂದ ಉತ್ತಮ ಫ‌ಲಪ್ರಾಪ್ತಿ ಸುನಿಶ್ಚಿತ. ಮನೆಯಲ್ಲಿ ಸಮಾಧಾನದ ವಾತಾವರಣ. ಉದ್ಯೋಗ ಕ್ಷೇತ್ರದಲ್ಲಿ ಕೀರ್ತಿ, ವ್ಯವಹಾರದಲ್ಲಿ ಅಭೂತಪೂರ್ವ ಯಶಸ್ಸು.

Advertisement

ವೃಷಭ: ಪೂರ್ವಾಪರಗಳನ್ನು ಸರಿಯಾಗಿ ವಿಮರ್ಶಿಸಿ ಮುನ್ನಡೆಯುವುದರಿಂದ ಕ್ಷೇಮ. ಉದ್ಯೋಗ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಪೈಪೋಟಿ ಸ್ವಾಭಾವಿಕ. ಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ.ಅಲ್ಪಾವಧಿಯ ಹೂಡಿಕೆಗಳ ಮೇಲೆ ಆಸಕ್ತಿ ತೋರದಿರುವುದರಿಂದ ಕ್ಷೇಮ.

ಮಿಥುನ: ಲೌಕಿಕ ದೃಷ್ಟಿಯಿಂದ ವ್ಯರ್ಥ ಅಲೆದಾಟವಾಗಿದ್ದರೂ ಅದು ಜೀವನಕ್ಕೊಂದು ಪಾಠವಾಗಲಿದೆ. ಆರೋಗ್ಯ ಉತ್ತಮ. ಸಾಂಸಾರಿಕ ಜೀವನದಲ್ಲಿ ನೆಮ್ಮದಿ.ಉದ್ಯೋಗ ಕ್ಷೇತ್ರದಲ್ಲಿ ಮಂದಗತಿಯ, ಆದರೆ ಸ್ಥಿರವಾದ ಪ್ರಗತಿ.

ಕರ್ಕಾಟಕ: ಮಿಶ್ರಫ‌ಲಗಳ ದಿನ. ಉದ್ಯೋಗ ಸ್ಥರಿಗೆ ಕೊಂಚ ಕಿರಿಕಿರಿ. ಸರಕಾರಿ ಉದ್ಯೋಗಸ್ಥ ರಿಗೆ ವರ್ಗಾವಣೆಯ ಭೀತಿ. ಕಟ್ಟಡ ಕಾಮಗಾರಿ ನೌಕರರು ಎಚ್ಚರವಿರಲಿ. ಹಿರಿಯರ ಆವಶ್ಯಕತೆಗಳನ್ನು ಗಮನಿಸುತ್ತಿರಿ. ತೀರಾ ಅನಿವಾರ್ಯವಲ್ಲದ ವೆಚ್ಚಗಳಿಂದ ದೂರವಿರಿ.

ಸಿಂಹ: ಏಳಿಗೆಯನ್ನು ನೋಡಿ ಸಹಿಸದವರಿಂದ ಹೆಸರು ಕೆಡಿಸಲು ಪಿತೂರಿ. ಉದ್ಯೋಗ, ವ್ಯವಹಾರಗಳಲ್ಲಿ ಇನ್ನಷ್ಟು ಯಶಸ್ಸು ಲಭ್ಯ. ಸಮಾಜದಲ್ಲಿ ಗೌರವ ಪ್ರಾಪ್ತಿ. ವ್ಯಾಪಾರಿಗಳಿಗೆ ಸ್ಥಿರಆದಾಯ. ಬಂಧುವರ್ಗ ದವರಿಂದ ಶುಭ ಸಮಾಚಾರ.

Advertisement

ಕನ್ಯಾ: ಹವಾಮಾನ ವೈಪರೀತ್ಯದಿಂದ ದೇಹ, ಮನಸ್ಸು ಎರಡರ ಮೇಲೂ ಪರಿಣಾಮ. ದೂರದ ಬಂಧುಗಳ ಆಗಮನ. ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಚಿಂತನೆ. ಮನೆಯಲ್ಲಿ ಹಿತಕರ ವಾತಾವರಣ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ

ತುಲಾ: ಎಲ್ಲವನ್ನೂ ಅಳೆದು, ತೂಗಿ ನಿರ್ಧರಿಸಲು ಅಸಾಧ್ಯವಾದ್ದರಿಂದ ದೇವರ ಮೇಲೆ ಭರವಸೆ ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿ ನಿರತರಾಗುವಿರಿ. ಸ್ವಂತ ವ್ಯವಹಾರ ಕ್ಷೇತ್ರ ವಿಸ್ತರಣೆಯ ಸಾಧ್ಯತೆಯಿದೆ.

ವೃಶ್ಚಿಕ: ಪ್ರಾಪ್ತಿಯಿದ್ದಷ್ಟು ಮಾತ್ರ ಸಿಗುವುದು ಎಂಬುದನ್ನು ತಿಳಿದುಕೊಂಡು ಕಾರ್ಯ ನಿರತರಾಗಿರಿ. ಉದ್ಯೋಗ ರಂಗದಲ್ಲಿ ಯಥಾಸ್ಥಿತಿ ಮುಂದು ವರಿಕೆ. ವ್ಯವಹಾರ ಕ್ಷೇತ್ರದಲ್ಲಿ ಮಂದಗತಿಯ ಪ್ರಗತಿ. ಕುಟುಂಬದ ಸದಸ್ಯರೆಲ್ಲರ ಆರೋಗ್ಯ ಉತ್ತಮ.

ಧನು: ಅದೃಷ್ಟ ಪರೀಕ್ಷೆಯಲ್ಲಿ ವಿಜಯ. ಉನ್ನತ ಸ್ಥಾನದಲ್ಲಿರುವವರಿಗೆ ಸಣ್ತೀಪರೀಕ್ಷೆಯ ಸನ್ನಿವೇಶ ಎದುರಾಗಲಿದೆ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷಿತ ಲಾಭ. ಸಂಗೀತ ಶ್ರವಣ,ನಾಟಕ ವೀಕ್ಷಣೆ, ಸಭೆ, ಸಮಾರಂಭಗಳಲ್ಲಿ ಪಾಲುಗೊಳ್ಳುವ ಆಸಕ್ತಿ.

ಮಕರ: ಒಳ್ಳೆಯ ಕಾಲ ಬರಲು ಕಾಯುವುದು ಅನಿವಾರ್ಯ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಜವಾಬ್ದಾರಿಯ ಕೆಲಸಗಳ ನಿರ್ವಹಣೆ. ವೃತ್ತಿಪರರಿಗೆ ಕೆಲಸಗಳ ಒತ್ತಡ. ಆರೋಗ್ಯ, ಆಹಾರ ಇವೆರಡರ ಕಡೆಗೂ ಗಮನ ಹಾಗೂ ಕಾಳಜಿ ಇರಲಿ. ಹಿರಿಯರ ಆವಶ್ಯಕತೆಗಳನ್ನು ಗಮನಿಸುತ್ತಿರಿ.

ಕುಂಭ: ಏಳೂವರೆ ಶನಿಯ ಮಹಿಮೆ ನಿಮ್ಮ ಮೇಲೆ ಪ್ರಭಾವ ಬೀರುತ್ತಿದ್ದರೂ ಭಗವಂತನ ದಯೆಯಿಂದ ನಿತ್ಯದ ವ್ಯವಹಾರಗಳಿಗೆ ತೊಡಕಾಗದು.ನಿಮ್ಮ ಆಸಕ್ತಿಯ ಸೇವಾಕಾರ್ಯಗಳಲ್ಲಿ ಅಬಾಧಿತರಾಗಿ ಸೇವೆ ಸಲ್ಲಿಸುವಿರಿ. ಉದ್ಯೋಗಸ್ಥರಿಗೆ ಸಹೋದ್ಯೋಗಿಗಳ ಉತ್ತಮ ಸಹಕಾರ.

ಮೀನ: ಕರ್ಮಕಾರಕ ಶನಿಯಿಂದ ಸತ್ಕರ್ಮಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ. ಉದ್ಯೋಗ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಯಶಸ್ಸು. ಆಗ್ನೇಯ ದಿಕ್ಕಿನಲ್ಲಿರುವ ವ್ಯವಹಾರ ಕ್ಷೇತ್ರದಲ್ಲಿ ಅರ್ಧ ಯಶಸ್ಸು. ಸರಕಾರಿ ಕಾರ್ಯಾಲಯಗಳಲ್ಲಿ ವಿಳಂಬ. ಮಕ್ಕಳ ವಿದ್ಯಾಭ್ಯಾಸ ಸಾಧನೆಯಿಂದ ಹರ್ಷ. ಸಂಗಾತಿಯಿಂದ ಉತ್ತಮ ಸಹಕಾರ.ಆರೋಗ್ಯ ತೃಪ್ತಿಕರ.

Advertisement

Udayavani is now on Telegram. Click here to join our channel and stay updated with the latest news.

Next