Advertisement

ನಿಮ್ಮ ಗ್ರಹಬಲ: ಈ ದಶಕದ ಕೊನೆಯ ದಿನದ ನಿಮ್ಮ ರಾಶಿ ಭವಿಷ್ಯ

07:40 AM Dec 31, 2020 | Team Udayavani |

31-12-2020

Advertisement

ಮೇಷ: ಸಾಮಾನ್ಯವಾದ ದಿನವಾಗಿರುತ್ತದೆ. ಹೆಚ್ಚಿನ ಮಾನಸಿಕ ಒತ್ತಡವಿದ್ದರೂ ನಿಮ್ಮ ನೆಮ್ಮದಿಗೆ ಭಂಗ ಬರುವುದಿಲ್ಲ. ವಿನಾಕಾರಣ ಓಡಾಟದಿಂದ ಪ್ರಯಾಸ ಹೆಚ್ಚಾಗಲಿದೆ. ಅನಾರೋಗ್ಯದಿಂದ ಬಳಲುವವರು ವೈದ್ಯರ ಸಲಹೆ ಪಡೆಯಿರಿ.

ವೃಷಭ: ಎಲ್ಲಾ ಕಾರ್ಯಗಳಲ್ಲಿ ಸಫ‌ಲತೆಯನ್ನು ಕಾಣುವಿರಿ. ಯಶಸ್ಸು , ಗೌರವ, ಪ್ರಶಸಿ ಹುಡುಕಿಕೊಂಡು ಬರಲಿದೆ. ಮನೆಯಲ್ಲಿ ಪತ್ನಿ ಮಕ್ಕಳಿಂದ ಸಹಕಾರವು ಒದಗಿ ಬರುವುದು. ಕಟ್ಟಡ ಕೆಲಸದವರಿಗೆ ಸುಗ್ಗಿಯ ಕಾಲ.

ಮಿಥುನ: ಆರ್ಥಿಕ ವಿಚಾರದಲ್ಲಿ ಲಾಭಾಂಶವು ಹೆಚ್ಚಾಗಲಿದೆ. ಆದರೂ ಖರ್ಚಿನ ಬಗ್ಗೆ ಜಾಗ್ರತೆ ಮಾಡಿರಿ. ತಿಂಗಳ ಕೊನೆಯಲ್ಲಿ ಲೆಕ್ಕಾಚಾರ ಏರುಪೇರಾದೀತು. ನೀವು ಮಾಡುತ್ತಿರುವ ಉದ್ಯೋಗ, ವ್ಯವಹಾರದಲ್ಲಿ ಸಮಾಧಾನ ದೊರಕೀತು.

ಕರ್ಕ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಮನಸ್ಸಿಗೆ ನೋವು ತರುವ ಕೆಲವು ಘಟನೆಗಳು ಕಂಡುಬಂದೀತು. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಕಿರುಕುಳವು ಕಂಡು ಬಂದೀತು. ಹಿರಿಯರ ಸಲಹೆ, ಸೂಚನೆಯನ್ನು ಪಾಲಿಸಿರಿ.

Advertisement

ಸಿಂಹ: ಅನುಕೂಲವಾದ ಸಮಯವಿದು. ನಿಮ್ಮ ಮನಸ್ಸಿಗೆ ಸವಾಲು ತಾಳ್ಮೆ ಹಾಗೂ ಸಹನೆ ಅಗತ್ಯವಿದೆ. ಹೆಚ್ಚಿನ ಒತ್ತಡಕ್ಕೆ ಗುರಿಯಾಗುವಿರಿ. ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ವಾಹನ ಚಾಲನೆ ಮಾಡುವಾಗ ಜಾಗ್ರತೆ.

ಕನ್ಯಾ: ಹಿತಶತ್ರುಗಳು ನಿಮ್ಮ ಬೆನ್ನಿಗೆ ಇರುತ್ತಾರೆ. ಸ್ತ್ರೀ ಮೂಲಕ ಅಭಾವವು ನೀಗಲಿದೆ. ಆರ್ಥಿಕ ಸ್ಥಿತಿಯು ಪೂರಕವಾಗಿರುವುದಿಲ್ಲ. ದೂರ ಪ್ರಯಾಣವು ಕೂಡಿಬಂದೀತು. ವಿನಾ ಕಾರಣ ನಿಮ್ಮದಲ್ಲದ ತಪ್ಪಿಗೆ ದಂಡ ತೆರಬೇಕಾದೀತು.

ತುಲಾ: ಕುಟುಂಬದಲ್ಲಿ ಸಂತಸದ ವಾತಾವರಣ ಉಂಟಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರಗಲಿವೆ. ಆರೋಗ್ಯ ಉತ್ತಮವಾಗಿರುವುದು. ಮನೆಯಲ್ಲಿ ಸಂಭ್ರಮ, ಸಂತಸವಿರುವುದು. ಮಿತ್ರರ ಸಹಕಾರವು ದೊರಕಲಿದೆ.

ವೃಶ್ಚಿಕ: ಎಲ್ಲಾ ಕೆಲಸಕಾರ್ಯಗಳಲ್ಲಿ ಸಫ‌ಲತೆಯನ್ನು ಕಾಣುವಿರಿ. ಯಶಸ್ಸು ದೊರಕುವುದು. ವ್ಯಾಪಾರ, ವ್ಯವಹಾರದಲ್ಲಿ ಲಾಭ ಉಂಟಾಗಲಿದೆ. ಅಪರಿಚಿತರಿಂದ ಉಪದ್ರವ ಕಂಡುಬರಲಿದೆ. ಸೋಮಾರಿತನವನ್ನು ತಳ್ಳಿ ಹಾಕಿರಿ.

ಧನು: ವ್ಯಾಪಾರಸ್ಥರು ಒಳ್ಳೆಯ ಲಾಭ ಗಳಿಸುವಿರಿ. ಆರೋಗ್ಯವು ಉತ್ತಮವಿದ್ದು ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಆರ್ಥಿಕ ವಿಚಾರದಲ್ಲಿ ಹಿಡಿತವಿರಲಿ. ಸ್ತ್ರೀಯರ ಬಹುದಿನಗಳ ಬೇಡಿಕೆ ಈಡೇರಲಿದೆ.

ಮಕರ: ಒಂದಲ್ಲಾ ಒಂದು ಒತ್ತಡವು ನಿಮ್ಮನ್ನು ಆವರಿಸುವುದರಿಂದ ಮನಸ್ಸು ಅಶಾಂತಿಯೆಡೆಗೆ ಮುಖ ಮಾಡುವುದು. ಅನಾರೋಗ್ಯದಿಂದ ಬಳಲಿಕೆ ಕಂಡುಬರಲಿದೆ. ನೀವು ಪ್ರಯತ್ನಿಸಿದ ಕೆಲಸದಲ್ಲಿ ವಿಘ್ನವಿರುತ್ತದೆ.

ಕುಂಭ: ಪ್ರಯಾಣ, ಒತ್ತಡದಿಂದ ಬಳಲಿಕೆ ಕಂಡುಬರಲಿದೆ. ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಪ್ರಗತಿಯ ಮುನ್ಸೂಚನೆಯ ತೋರಿಕೆ ಕಂಡುಬರಲಿದೆ. ಯಾವುದೇ ವಿಚಾರದಲ್ಲಿ ಮುನ್ನಡೆಯಲು ಸೂಕ್ತ ಸಮಯವಲ್ಲ.

ಮೀನ: ಅನಗತ್ಯ ಕಾರಣಕ್ಕೆ ದುಂದುವೆಚ್ಚ ಬೇಡ. ಕುಟುಂಬದಲ್ಲಿ ಅಸಹಕಾರ ಉಂಟಾಗಲಿದೆ. ಹಲವರು ನಿಮ್ಮ ಒಳ್ಳೆತನದ ದುರುಪಯೋಗ ಮಾಡಿಕೊಳ್ಳಲಿದ್ದಾರೆ. ಕುಟುಂಬಕ್ಕೆ ಹೊಸ ಸದಸ್ಯರ ಪರಿಚಯವಾಗಲಿದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next