Advertisement
ವೃಷಭ: ಉದ್ಯೋಗದಲ್ಲಿ ಮುಂದೆ ಬರಲು ಪೈಪೋಟಿ. ಹಿತಶತ್ರುಗಳ ಬಾಧೆ. ಸ್ವಂತ ಉದ್ಯಮಗಳಿಗೆ ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಳ್ಳುವ ಸವಾಲು. ಸರಕಾರಿ ಕಚೇರಿಗಳಲ್ಲಿ ವಿಳಂಬ. ಹಳೆಯ ಶಾರೀರಿಕ ಸಮಸ್ಯೆಗೆ ಸಕಾಲಿಕ ಪರಿಹಾರ.
Related Articles
Advertisement
ಕನ್ಯಾ: ಉದ್ಯೋಗ ಸ್ಥಾನದಲ್ಲಿ ಮನಸ್ತಾಪ ತಪ್ಪಿಸಿ. ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ವ್ಯವಹರಿಸುವವರಿಗೆ ದುಡಿಮೆಗೆ ತಕ್ಕ ಪ್ರತಿಫಲ ನಿರಾತಂಕ ವಾಗಿ ಕೈಸೇರುವುದು. ಬಂಧುಗಳೊಡನೆ ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ವೈದ್ಯರೊಂದಿಗೆ ಸಮಾಲೋಚನೆ ಸಾಧ್ಯತೆ.
ತುಲಾ: ಮಹಾಗಣಪತಿಯ ಆರಾಧನೆಯಿಂದ ವ್ಯಾಕುಲ ದೂರ. ಮನೆಗೆ ಅತಿಥಿಗಳ ಆಗಮನ. ಪಾಲುದಾರ ಬಂಧುಗಳೊಡನೆ ಸಮಾಲೋಚನೆ. ಸರಕಾರಿ ಉದ್ಯೋಗಸ್ಥರಿಗೆ ವರ್ಗಾವಣೆಯ ಚಿಂತೆ. ಹಿತಶತ್ರುಗಳ ಕಾಟ. ವಸ್ತ್ರೋದ್ಯಮಿಗಳು ಸºರ್ಣೋದ್ಮಮಿಗಳಿಗೆ ನಿರೀಕ್ಷೆಗೆ ತಕ್ಕಂತೆ ಲಾಭ.
ವೃಶ್ಚಿಕ: ಆರೋಗ್ಯದ ವಿಚಾರದಲ್ಲಿ ನಿಶ್ಚಿಂತೆ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣವಿರುವುದರಿಂದ ನಿರಾತಂಕ ಸ್ಥಿತಿ.ಅಧ್ಯಾಪಕ ವೃಂದಕ್ಕೆ ಹೆಚ್ಚು ಜವಾಬ್ದಾರಿ.ಸರಕಾರಿ ಕಾರ್ಯಾಲಯಗಳಲ್ಲಿ ಮಂದಗತಿಯ ಸ್ಪಂದನೆಯಿಂದ ಕಾರ್ಯ ವಿಳಂಬ.
ಧನು: ಪರಿಸ್ಥಿತಿಯ ಒತ್ತಡದಿಂದ ಕಾರ್ಯ ವಿಳಂಬ. ಛಲಕ್ಕೆ ತಕ್ಕಂತೆ ಯಶಸ್ಸು. ನಿರ್ಲಿಪ್ತ ಮನಃಸ್ಥಿತಿಯಲ್ಲಿ ಮಾಡಿದ ಪ್ರಯತ್ನ ಫಲಪ್ರದ.ಉದ್ಯೋಗ ಸ್ಥಾನದಲ್ಲಿ ಜನಪ್ರಿಯತೆ ವೃದ್ಧಿ. ಹೈನುಗಾರಿಕೆ, ಜೇನುಸಾಕಣೆಯಲ್ಲಿ ಆಸಕ್ತರಿಗೆ ಆದಾಯ ತೃಪ್ತಿಕರ.ಪಿತೃಕಾರ್ಯದ ಅವಕಾಶ.
ಮಕರ: ಅನವಶ್ಯ ಚಿಂತೆ ಬೇಡ. ಸಹನೆಯೇ ನಿಮ್ಮ ಶಕ್ತಿ ಎಂಬುದನ್ನು ಮರೆಯದಿರಿ. ಉದ್ಯೋಗದಲ್ಲಿ ಹೊಸ ಅವಕಾಶಗಳು ಮತ್ತು ಸವಾಲು ಗಳನ್ನು ಸ್ವೀಕರಿಸಿ. ಹತ್ತಿರದ ಬಂಧುವಿನ ಸಲಹೆ ಪಾಲಿಸಿ. ದೀರ್ಘಾವಧಿಯ ಹೂಡಿಕೆಗಳಿಗೆ ಪ್ರಾಶಸ್ತ್ಯ ನೀಡಿ.
ಕುಂಭ: ಅಯಾಚಿತ ಹಾಗೂ ಅನಪೇಕ್ಷಿತವಾಗಿ ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶಗಳು. ಉದ್ಯೋಗದಲ್ಲಿ ಸ್ಥಿರ ವಾತಾವರಣ. ಸಮಾಜ ದಲ್ಲಿ ಗೌರವ ಹಾಗೂ ಜನಪ್ರಿಯತೆ ವೃದ್ಧಿ. ಗೃಹಾಲಂಕರಣ ಉದ್ಯೋಗಸ್ಥರಿಗೆ ಬೇಡಿಕೆ ಹಾಗೂ ಉತ್ತಮ ಆದಾಯ.
ಮೀನ: ಮಿಶ್ರಫಲಗಳ ದಿನವಾದರೂ ಶುಭ ಫಲಗಳೇ ಅಧಿಕ.ಸರಕಾರಿ ಕಾರ್ಯಾಲಯಗಳಲ್ಲಿ ಅಧಿಕಾರಿಗಳು ಮತ್ತು ನೌಕರರಿಂದ ಉತ್ತಮ ಸ್ಪಂದನೆಯ ಸಹಕಾರ. ವಾಹನ ಸಂಬಂಧಿ ಉದ್ಯೋಗಸ್ಥರಿಗೆ ತೃಪ್ತಿಕರ ಆದಾಯ ಹಾಗೂ ಜನಪ್ರಿಯತೆ ವೃದ್ಧಿ. ಹಿರಿಯರ ಆರೋಗ್ಯದ ವಿಷಯದಲ್ಲಿ ನಿಶ್ಚಿಂತೆ. ಮನೆಯಲ್ಲಿ ಎಲ್ಲರ ಸಹಕಾರ. ಮಕ್ಕಳ ಭವಿಷ್ಯ ಉಜ್ವಲ.