Advertisement

Daily Horoscope: ದೇಹಕ್ಕೆ ಹೆಚ್ಚು ಚಟುವಟಿಕೆ ನೀಡಿದರೆ ಆರೋಗ್ಯ ಸುಧಾರಣೆ

07:23 AM Oct 23, 2023 | Team Udayavani |

ಮೇಷ: ಹಬ್ಬದ ವಿರಾಮದ ಸಂಭ್ರಮದ ನಡುವೆ ಉದ್ಯೋಗ, ವ್ಯವಹಾರಗಳ ಚಿಂತೆ. ಮನೆಯಲ್ಲಿ ತುಂಬಿರುವ ನೆಂಟರು ಹಾಗೂ ಆಪ್ತರು. ಹತ್ತಿರದ ದೇವಾಲಯಕ್ಕೆ ಭೇಟಿ. ಉದ್ಯಮದ ಉತ್ಪನ್ನಗಳ ತೃಪ್ತಿಕರ ಮಾರಾಟ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಸಮಾಲೋಚನೆ.

Advertisement

ವೃಷಭ: ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಧನ ಕೈಸೇರಿ ಸಮಾಧಾನ. ಹಳೆಯ ಗೆಳೆಯ ರೊಂದಿಗೆ ಪುನರ್ಮಿಲನ. ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ. ನೆಂಟರ ಜತೆಯಲ್ಲಿ ಹಬ್ಬ ಆಚರಣೆ. ದೂರದ ಬಂಧುಗಳಿಂದ ಶುಭಕಾರ್ಯದ ಆಮಂತ್ರಣ.

ಮಿಥುನ: ದೇಹಕ್ಕೆ ಹೆಚ್ಚು ಚಟುವಟಿಕೆ ನೀಡಿದರೆ ಆರೋಗ್ಯ ಸುಧಾರಣೆ. ನೆರೆಯವರೊಂದಿಗೆ ಸಂತೋಷ ಹಂಚಿಕೊಳ್ಳುವಿಕೆ. ಹತ್ತಿರದ ದೇವ ಮಂದಿರ ಅಥವಾ ಧಾರ್ಮಿಕ ಸ್ಥಳಕ್ಕೆ ಭೇಟಿ. ಇಷ್ಟ ದೇವರ ಪ್ರಾರ್ಥನೆ ಹಾಗೂ ಗುರು ಸೇವನೆಯಿಂದ ದುರಿತ ನಿವಾರಣೆ.

ಕರ್ಕಾಟಕ: ಬಂಧು ಮಿತ್ರರ ಭೇಟಿ. ಸಹೋದ್ಯೋಗಿಯ ಮನೆಯ ಸಂಭ್ರಮದಲ್ಲಿ ಭಾಗಿಯಾಗುವಿರಿ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಗೋಚರ. ಕೃಷಿ ಕ್ಷೇತ್ರ ವಿಸ್ತರಣೆಗೆ ಚಿಂತನೆ. ಗೃಹೋತ್ಪನ್ನ ಖಾದ್ಯಗಳ ಭರ್ಜರಿ ಮಾರಾಟ.

ಸಿಂಹ: ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಬೆಳೆಯುವ ನಿಮಗೆ ಸಂತೃಪ್ತಿಯ ದಿನ. ದೇವತಾ ರ್ಚನೆಯ ಆನಂದವನ್ನು ಅನುಭವಿಸುತ್ತಲೇ ಉದ್ಯೋಗ, ವ್ಯವಹಾರಗಳ ಕುರಿತು ಗಾಢ ಚಿಂತನೆ. ಮಕ್ಕಳ ಉದ್ಯಮ ವೃದ್ಧಿಗೆ ಸಲಹೆಗಳು. ಧಾರ್ಮಿಕ ಗುರುಗಳ ಭೇಟಿ.

Advertisement

ಕನ್ಯಾ: ಮನೆಯಲ್ಲಿ ದೇವತಾರ್ಚನೆಯೊಂದಿಗೆ ಸತ್ಸಂಗದ ಆಯೋಜನೆ. ಹಿರಿಯ ಬಂಧುಗಳೊಡನೆ ಸಮಾಗಮ. ವಿದ್ವಾಂಸರಿಗೆ ಗೌರವ. ಪ್ರಾಚ್ಯವಿದ್ಯಾ ತಜ್ಞ ರೊಂದಿಗೆ ಮುಖಾಮುಖೀ. ದೇವಾಲಯಕ್ಕೆ ಭೇಟಿ. ಕೃಷಿ ಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ. ಗೃಹದಲ್ಲಿ ನೆಮ್ಮದಿ.

ತುಲಾ: ಮನಸ್ಥೆçರ್ಯದಿಂದ ಕೈಗೊಂಡ ಕಾರ್ಯ ಸಫ‌ಲ. ಹಿರಿಯ ಬಂಧುಗಳಿಂದ ನೈತಿಕ ಧೈರ್ಯ ನೀಡಿಕೆ. ದೇವತಾ ಕಾರ್ಯಕ್ಕೆ ವಿಘ್ನವೊಡ್ಡುವ ಪ್ರಯತ್ನ ವಿಫ‌ಲ. ಹಬ್ಬದಲ್ಲಿ ಪಾಲುಗೊಳ್ಳಲು ಬಂದ ಸಹೋದ್ಯೋಗಿಗಳಿಂದ ಉತ್ತೇಜನದ ನುಡಿಗಳು.

ವೃಶ್ಚಿಕ: ಮನೆಮಂದಿಯೆಲ್ಲರಲ್ಲೂ ಹಬ್ಬದ ಸಂಭ್ರಮ. ಹತ್ತಿರದ ಬಂಧುಗಳೆಲ್ಲರ ಕೂಡುವಿಕೆ. ಗುರುವೃಂದದ ಹಠಾತ್‌ ಭೇಟಿ. ಉದ್ಯೋಗ ಕ್ಷೇತ್ರದ ಗೆಳೆಯರೊಡನೆ ಸಮಾಗಮ. ಸ್ವಂತ ಉದ್ಯಮದ ನೌಕರ ವೃಂದಕ್ಕೆ ಹರ್ಷ. ಉದ್ಯೋಗಸ್ಥ ಮಕ್ಕಳ ಆಗಮನ ದಿಂದ ಮನೆಮಂದಿಗೆ ಸಂತೋಷ.

ಧನು: ಹಬ್ಬವಿದ್ದರೂ ಸಂಸಾರದ ಚಿಂತೆ. ಅದರ ನಡುವೆ ನೆಂಟರ ಆಗಮನ! ಸಹೋದ್ಯೋಗಿಗಳ ಕೂಡುವಿಕೆಯೊಡನೆ ಸಂಭ್ರಮಾಚರಣೆ. ಹಿರಿಯ ಬಂಧು ಗಳ ನೈತಿಕ ಬೆಂಬಲದಿಂದ ಗೆಲ್ಲುವ ವಿಶ್ವಾಸ. ಹಳೆಯ ಒಡನಾಡಿಯ ಭೇಟಿಯಿಂದ ಧೈರ್ಯ ವೃದ್ಧಿ.

ಮಕರ: ಹಿತಶತ್ರುಗಳ ಬಾಧೆಯಿಂದ ಬಿಡುಗಡೆಗೆ ಸಫ‌ಲ ಯತ್ನ. ಮನೆಯಲ್ಲಿ ದೇವತಾರ್ಚನೆ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯದಲ್ಲಿ ಕೆಲಸ ಮುಗಿಸುವ ಒತ್ತಡ. ಹತ್ತಿರದ ದೇವಾಲಯಕ್ಕೆ ಭೇಟಿ. ಇಷ್ಟದೇವರ ಉಪಾ ಸನೆಯಿಂದ ಕಾರ್ಯಸಿದ್ಧಿ.

ಕುಂಭ: ಹಬ್ಬದ ಸಂಭ್ರಮದ ನಡುವೆ ಉದ್ಯೋಗ, ವ್ಯವಹಾರ ನಿರ್ವಹಣೆಯಲ್ಲಿ ಯಶಸ್ವಿಯಾಗುವಿರಿ. ಹಳೆಯ ಊರಿನ ಹಿರಿಯ ಪರಿಚಿತರ ಆಗಮನ. ಮನೆಯಲ್ಲಿ ದೇವತಾರ್ಚನೆ. ಸ್ವಂತ ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

ಮೀನ: ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಉದ್ಯೋಗ, ವ್ಯವಹಾರದ ಕಡೆಗೆ ಗಮನ. ಕೊಟ್ಟ ಮಾತು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಮುನ್ನಡೆ. ಸಾಮಾಜಿಕ ರಂಗದಲ್ಲಿ ಹೆಚ್ಚಿದ ಜನಪ್ರಿಯತೆ. ತಾಯಿಯ ಹಾಗೂ ಹಿರಿಯರ ಆಶೀರ್ವಾದಕ್ಕೆ ಪಾತ್ರರಾಗುವಿರಿ. ದೇವಾಲಯ ಅಭಿವೃದ್ಧಿ ಯೋಜನೆಗೆ ಚಾಲನೆ. ಸೇವಾರೂಪದ ವೃತ್ತಿಗಳಲ್ಲಿ ಮುನ್ನಡೆ.

Advertisement

Udayavani is now on Telegram. Click here to join our channel and stay updated with the latest news.

Next