Advertisement

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

07:29 AM Nov 21, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ಎಳೆಯರಿಗೆ ಮಾರ್ಗದರ್ಶನ. ಹೆಚ್ಚುವರಿ ಆದಾಯಕ್ಕೆ ಯಶಸ್ವೀ ಪ್ರಯತ್ನ. ವಸ್ತ್ರೋದ್ಯಮ ಸಂಬಂಧಿ ವ್ಯವಹಾರದಲ್ಲಿ ಯಶಸ್ಸು. ಪತ್ನಿಯ ಕಡೆಯ ಬಂಧುಗಳ ಮನೆಗೆ ಭೇಟಿ.

Advertisement

ವೃಷಭ: ಉದ್ಯೋಗ ಸ್ಥಾನದಲ್ಲಿ ಆಹ್ಲಾದದ ವಾತಾವರಣ. ಬಂಧುಗಳ ಕಡೆಯಿಂದ ಶುಭ ವಾರ್ತೆ. ಸಾಮಾಜಿಕ ಕಾರ್ಯಗಳಿಗೆ ಉದ್ಯಮಿಗಳ ಪ್ರೋತ್ಸಾಹ. ವಸ್ತ್ರ , ಆಭರಣ ವ್ಯಾಪಾರಿಗಳಿಗೆ ಬಿಡುವಿಲ್ಲದ ವ್ಯಾಪಾರ.

ಮಿಥುನ: ಸಾಹಿತ್ಯ ಸಂಬಂಧಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವಿಕೆ. ಉದ್ಯೋಗಸ್ಥ ರಿಗೆ ಸಂತೃಪ್ತಿ, ಸಮಾಧಾನದ ಅನುಭವ. ಸ್ವಂತ ಉದ್ಯಮಕ್ಕೆ ಮೂಲ ಸೌಲಭ್ಯಗಳ ಸಮಸ್ಯೆ. ರಾಜಿ ಪಂಚಾಯಿತಿಕೆಯಿಂದ ದಾಯಾದಿ ಕಲಹ ಪರಿಹಾರ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಗಮನಾರ್ಹ ಪ್ರಗತಿ. ಉದ್ಯಮಗಳು ಕ್ಷಿಪ್ರ ಗತಿಯಲ್ಲಿ ಮುನ್ನಡೆ. ವ್ಯಾಪಾರಿಗಳಿಗೆ ಹಿತಶತ್ರುಗಳ ಬಾಧೆ. ಸ್ವಪ್ರಯತ್ನದಿಂದ ಆರೋಗ್ಯವೃದ್ಧಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಮನೆಯಲ್ಲಿ ದೇವತಾ ಕಾರ್ಯ.

ಸಿಂಹ: ಉದ್ಯೋಗ ವಲಯದಲ್ಲಿ ವಿಶೇಷ ಮನ್ನಣೆ. ಉದ್ಯಮದ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ. ವಿವಾಹ ಸಮಸ್ಯೆ ನಿವಾರಣೆಗೆ ಸಮಗ್ರ ಯೋಜನೆ. ನ್ಯಾಯಾಲಯ ವ್ಯವಹಾರದಲ್ಲಿ ಜಯ.

Advertisement

ಕನ್ಯಾ: ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ವಾಹನ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಿಂದ ದೂರವಿರುವುದರಿಂದ ಹಿತ. ದುಷ್ಟರೊಂದಿಗೆ ವಾಗ್ವಾದ ಬೇಡ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ತುಲಾ: ಉದ್ಯೋಗದಲ್ಲಿ ಜ್ಞಾನ ಮತ್ತು ಪ್ರತಿಭೆಗೆ ಮನ್ನಣೆ. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಮಕ್ಕಳಿಗೆ ಸಂಗೀತ, ನೃತ್ಯದಲ್ಲಿ ಆಸಕ್ತಿ. ಬಂಗಾರದ ಅಂಗಡಿಗೆ ಭೇಟಿ. ಮಹಿಳೆಯರ ನೇತೃತ್ವದ ಉದ್ಯಮಗಳಿಗೆ ಉತ್ಕರ್ಷದ ಕಾಲ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ನಿರುತ್ಸಾಹದ ವಾತಾವರಣ. ಸರಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಆತಂಕ. ವಾಹನ ಬಿಡಿಭಾಗ ವ್ಯಾಪಾರಿಗಳಿಗೆ ಸುಯೋಗ. ಅವಿವಾಹಿತರಿಗೆ ವಿವಾಹ ಯೋಗ. ಮಕ್ಕಳ ಕಲಿಕೆ ಆಸಕ್ತಿ ಹೆಚ್ಚಿಸಲು ಪ್ರಯತ್ನ.

ಧನು: ಸಹೋದ್ಯೋಗಿಗಳಿಂದ ಪ್ರೀತಿ, ಗೌರವದ ವರ್ತನೆ. ಸ್ವಂತದ ಚಿಕ್ಕ ಉದ್ಯಮದ ಬೆಳವಣಿಗೆ ಮುಂದುವರಿಕೆ. ಉದ್ಯೋಗಾಸಕ್ತ ಶಿಕ್ಷಿತರಿಗೆ ಅವಕಾಶಗಳು ಗೋಚರ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳಿಗೆ ಲಾಭ.

ಮಕರ: ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ನಿಯೋಜನೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಹೇರಳ ಲಾಭ. ಉದ್ಯೋಗ ಅರಸುತ್ತಿರುವವರಿಗೆ ಅವಕಾಶಗಳು ಲಭ್ಯ. ಆಪ್ತರ ಸಲಹೆ ಪಾಲನೆಯಿಂದ ಸಂತೋಷ.

ಕುಂಭ: ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು. ಗ್ರಾಹಕರ ಬೇಡಿಕೆಗೆ ಶೀಘ್ರ ಸ್ಪಂದನ. ಸಮಾಜ ಸೇವಾಕಾರ್ಯಗಳಿಗೆ ಹೊಸ ಅವಕಾಶಗಳು. ಕುಶಲಕರ್ಮಿಗಳ ಕೀರ್ತಿ ವರ್ಧನೆ. ಸಂಸಾರದಲ್ಲಿ ಸಂತೃಪ್ತಿಯ ವಾತಾವರಣ.

ಮೀನ: ಉದ್ಯೋಗದಲ್ಲಿ ಸಂತೃಪ್ತಿ. ಪರಿಚಿತ ವ್ಯಕ್ತಿಗಳಿಂದ ಸಕಾಲದಲ್ಲಿ ಸಹಾಯ. ಸರಕಾರಿ ಕಾರ್ಯಾಲಯಗಳಲ್ಲಿ ಸಕಾರಾತ್ಮಕ ಸ್ಪಂದನ. ಭವಿಷ್ಯದ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ. ಸಾಮಾಜಿಕ ಕ್ಷೇತ್ರದಲ್ಲಿ ಹೊಸ ಹೊಣೆಗಾರಿಕೆ.

Advertisement

Udayavani is now on Telegram. Click here to join our channel and stay updated with the latest news.

Next