Advertisement

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಬಗೆಗೆ ಎಚ್ಚರವಿರಲಿ

07:18 AM Nov 10, 2023 | Team Udayavani |

ಮೇಷ: ಹೆಸರಿಗೆ ಸಹಜವಾದ ಬಹುವಿಧ ಆಸಕ್ತಿ. ಉದ್ಯೋಗ ಸ್ಥಾನದಲ್ಲಿ ಹೊಸಬರಿಗೆ ಕೆಲಸ ಕಲಿಸುವ ಹೊಣೆಗಾರಿಕೆ. ಉದ್ಯೋಗದ ಜತೆಯÇÉೇ ಇನ್ನೊಂದು ವ್ಯವಹಾರವನ್ನು ನಡೆಸುವ ಪ್ರಸ್ತಾವ. ಪತ್ನಿಯ ಕಡೆಯ ನೆಂಟರ ಆಗಮನ. ಪಿತ್ರಾರ್ಜಿತ ಆಸ್ತಿ ಅಭಿವೃದ್ಧಿಗೆ ಯೋಜನೆ.

Advertisement

ವೃಷಭ: ಹಿಂದೆಮುಂದೆ ನೋಡದೆ ಮುನ್ನುಗ್ಗುವ ಪ್ರವೃತ್ತಿಗೆ ಕಡಿವಾಣ ಹಾಕಿಕೊಳ್ಳಿ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಮೆಚ್ಚುಗೆ. ಉತ್ತರದ ಕಡೆಯಿಂದ ಶುಭ ವಾರ್ತೆ.ಉದ್ಯಮಿಗಳಿಗೆ ಸಮಾಜದಲ್ಲಿ ಪುರಸ್ಕಾರ. ಬಂಗಾರದ ಅಂಗಡಿಯವರಿಗೆ ಬಿಡುವಿಲ್ಲದ ವ್ಯಾಪಾರ.

ಮಿಥುನ: ಜಪ, ಧ್ಯಾನಗಳಿಂದ ಧೈರ್ಯ, ಸ್ಥೈರ್ಯ ವೃದ್ಧಿ. ಉದ್ಯೋಗದಲ್ಲಿ ಗೌರವ ಪ್ರಾಪ್ತಿ. ಸ್ವಂತ ಉದ್ಯಮ ಹಂತಹಂತವಾಗಿ ಅಭಿವೃದ್ಧಿ. ಹಳೆಯ ಮಿತ್ರನಿಂದ ಶುಭಸಂದೇಶ. ಪ್ರಾಚೀನ ವಿದ್ಯೆಗಳನ್ನು ಕಲಿಯುವ ಆಸಕ್ತಿ. ಮಾತೃಸ್ಥಾನದಲ್ಲಿರುವ ವ್ಯಕ್ತಿಯಿಂದ ಅಧ್ಯಾತ್ಮ ಸಾಧನೆಯಲ್ಲಿ ಮಾರ್ಗದರ್ಶನ.

ಕರ್ಕಾಟಕ: ದೇಹಾರೋಗ್ಯವನ್ನು ಕಾಪಾಡಿಕೊಳ್ಳು ವತ್ತ ಲಕ್ಷÂವಿರಲಿ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಬಗೆಗೆ ಎಚ್ಚರವಿರಲಿ. ಸ್ವಂತ ಉದ್ಯಮಕ್ಕೆ ಪೈಪೋ ಟಿಯ ಸಮಸ್ಯೆ. ವಸ್ತ್ರ ವ್ಯಾಪಾರಿಗಳಿಗೆ ಆದಾಯ ತೆರಿಗೆ ಭೀತಿ. ನ್ಯಾಯಾಲಯ ವ್ಯವಹಾರದಲ್ಲಿ ಜಯ.

ಸಿಂಹ: ಸಮರ್ಪಣ ಭಾವದಿಂದ ಕಾರ್ಯ ಮಾಡಿದಲ್ಲಿ ಭಗವಂತನ ಅನುಗ್ರಹ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಕೀರ್ತಿ. ಉದ್ಯಮಕ್ಕೆ ಎದುರಾದ ಸಮಸ್ಯೆಗಳ ನಿವಾರಣೆ.ಉತ್ಪನ್ನಗಳ ಜನಪ್ರಿಯತೆ ಹೆಚ್ಚಿಸಲು ಹೊಸ ತಂತ್ರ ರೂಪಣೆ. ಉದ್ಯೋಗ ಅರಸುವವರಿಗೆ ಹೊಸ ಅವಕಾಶಗಳು ಗೋಚರ.

Advertisement

ಕನ್ಯಾ: ಆತ್ಮಬಲ ವೃದ್ಧಿಗೆ ಪ್ರಯತ್ನ ಮಾಡಿದರೆ ಸಾರ್ಥಕ್ಯ ಹೊಂದುವಿರಿ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ. ಯಂತ್ರೋಪಕರಣ ಉದ್ಯಮಿಗಳಿಗೆ ಆದಾಯ ವೃದ್ಧಿ. ಸಟ್ಟಾ ವ್ಯವಹಾರದಲ್ಲಿ ನಷ್ಟ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ. ಬಂಧುಗಳ ಮನೆಯಲ್ಲಿ ಶುಭಕಾರ್ಯ.

ತುಲಾ: ಬಹಳ ದಿನಗಳ ಆಶೆ ನೆರವೇರಿ ಸಂತಸ. ನಿರೀಕ್ಷಿಸಿದಂತೆ ಹಿರಿಯರ ಭೇಟಿ. ಉದ್ಯೋಗದಲ್ಲಿ ಪ್ರತಿಭೆಗೆ ಪುರಸ್ಕಾರ. ಗಣೇಶನ ಪ್ರಾರ್ಥನೆಯಿಂದ ಅನು ಕೂಲ. ಮಕ್ಕಳ ಭವಿಷ್ಯ ಚಿಂತನೆ. ಬಂಗಾರದ ಅಂಗಡಿ ಭೇಟಿ. ಮನೆಯಲ್ಲಿ ಬಂಧುಗಳ ಮಿಲನ.

ವೃಶ್ಚಿಕ: ಹವಾಮಾನ ವೈಪರೀತ್ಯದಿಂದ ದೇಹ, ಮನಸ್ಸುಗಳ ಮೇಲೆ ಸಹಜ ಪರಿಣಾಮ. ಉದ್ಯೋಗ ನಿರ್ವಹಣೆಯಲ್ಲಿ ನಿರಾಸಕ್ತಿ. ಸರಕಾರಿ ಉದ್ಯೋಗಿಗಳಿಗೆ ಆನಂದದ ಸನ್ನಿವೇಶ. ವಾಹನ ಬಿಡಿಭಾಗ ಮಾರಾಟಗಾರರಿಗೆ ಆದಾಯ ವೃದ್ಧಿ. ಮಕ್ಕಳಿಗೆ ಹೊಸ ಉದ್ಯೋಗ.

ಧನು: ಅಂತ್ಯವಿಲ್ಲದ ಶ್ರಮ ಫ‌ಲ ನೀಡುವ ಕ್ಷಣಗಳು. ಸಂಗಾತಿಯ ಆರೋಗ್ಯ ಸುಧಾರಣೆ. ಸಹೋ ದ್ಯೋಗಿಗಳಿಂದ ಆದರಪೂರ್ಣ ನಡವಳಿಕೆ. ತಾಯಿಯ ಕಡೆಯ ಬಂಧುಗಳ ಭೇಟಿಯಿಂದ ಸಮಾಧಾನ. ಸ್ವಂತದ ಚಿಕ್ಕ, ಆದರೆ ಯಶಸ್ವೀ ಉದ್ಯಮ ಬೆಳೆಯುವ ಲಕ್ಷಣ.

ಮಕರ: ಬದುಕಿನ ಕೆಲವು ಮೂಲಭೂತ ಪಾಠ ಗಳನ್ನು ಕಲಿತುಕೊಳ್ಳುವ ಸಂದರ್ಭ. ಉದ್ಯೋಗ ಯಥಾಸ್ಥಿತಿ. ಸಹಾಯ ಮಾಡುವ ಮನಸ್ಸಿನ ಹೊಸಬರ ಪರಿಚಯ. ವಸ್ತ್ರ, ಸಿದ್ಧ ಉಡುಪು, ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.

ಕುಂಭ: ಮಿಶ್ರಫ‌ಲಗಳ ದಿನ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಕೆಲಸದ ಭಾರ ಹೆಚ್ಚಳ. ಸಂಸಾರದ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ವಿ. ಕೃಷಿ ಭೂಮಿ ವಿಸ್ತರಣೆಗೆ ಕಾರ್ಯ ಯೋಜನೆ. ತಂದೆಯ ಊರಿನಿಂದ ಶುಭ ಸಮಾಚಾರ. ಸಂಸಾರದಲ್ಲಿ ಸಂತೃಪ್ತಿಯ ವಾತಾವರಣ.

ಮೀನ: ಅನುಮಾನದೊಂದಿಗೆ ದಿನಾರಂಭವಾದರೂ ಅನುಕೂಲಕರ ಫ‌ಲಗಳನ್ನು ಕಂಡು ಸಮಾಧಾನ. ಉದ್ಯೋಗದಲ್ಲಿ ಸಂತೃಪ್ತಿ. ನಿರೀಕ್ಷಿತ ವ್ಯಕ್ತಿಗಳಿಂದ ಸಕಾರಾತ್ಮಕ ಸ್ಪಂದನ. ಅಪೇಕ್ಷಿತ ಕಾರ್ಯಗಳ ನೆರವೇರಿಕೆ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣದ ಸಾಧ್ಯತೆ. ಭವಿಷ್ಯದ ಯೋಜನೆಯ ನೀಲನಕ್ಷೆ ತಯಾರಿ. ಸಮಾಜದ ಕಾರ್ಯಗಳ ಹೊಣೆಗಾರಿಕೆ ಮುಂದುವರಿಕೆ.

Advertisement

Udayavani is now on Telegram. Click here to join our channel and stay updated with the latest news.

Next