Advertisement

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

07:17 AM May 05, 2024 | Team Udayavani |

ಮೇಷ: ಉದ್ಯೋಗಕ್ಕೆ ವಿರಾಮ, ಅನ್ಯ ಕಾರ್ಯಗಳ ಕಡೆಗೆ ಗಮನ. ಸಂಸಾರದ ಆವಶ್ಯಕತೆಗಳತ್ತ ಲಕ್ಷ್ಯ. ಉದ್ಯಮಿಗಳಿಗೆ ವ್ಯವಹಾರ ಸುಧಾರಣೆಯ ಚಿಂತೆ. ಕೆಲವು ವರ್ಗದ ವ್ಯಾಪಾರಿ ಗಳಿಗೆ ಲಾಭ. ಆಸ್ಪತ್ರೆ, ಅನಾಥಾಶ್ರಮಕ್ಕೆ ಭೇಟಿ.

Advertisement

ವೃಷಭ: ವ್ಯವಹಾರಸ್ಥರಿಗೆ ವಿವಿಧ ಮೂಲಗಳಿಂದ ಧನಸಹಾಯ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ. ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷದ ಅನುಭವ.

ಮಿಥುನ: ಹಿರಿಯರಿಗೆ, ಗೃಹಿಣಿಯರಿಗೆ ಸ್ಥಳ ಬದಲಾವಣೆಯಿಂದ ಹರ್ಷ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ಬಂಧುಗಳ ಆಗಮನ. ವಾಹನ ದುರಸ್ತಿಗೆ ಧನವ್ಯಯ. ದೇವತಾರ್ಚನೆಯಲ್ಲಿ ಪಾಲುಗೊಳ್ಳುವ ಅವಕಾಶ.

ಕರ್ಕಾಟಕ: ಸಹೋದ್ಯೋಗಿಗಳ ಸೌಹಾರ್ದ ಭೇಟಿ. ಎಲ್ಲರ ಆರೋಗ್ಯ ಉತ್ತಮ. ಆಪ್ತರ ಅಯಾಚಿತ ಭೇಟಿಯ ಅಪೂರ್ವ ಅವಕಾಶ. ವ್ಯವಹಾರ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ಚಿಂತನೆ.

ಸಿಂಹ: ಅಪಾರ ಪ್ರಮಾಣದಲ್ಲಿ ಸುಖಾನುಭವ ಪ್ರಾಪ್ತಿ. ಪ್ರಾರ್ಥನೆಯಿಂದ ದೇವತಾನುಗ್ರಹ. ವೃತ್ತಿಪರರಿಗೆ ಕೆಲಸದ ಒತ್ತಡ ಆರಂಭ. ಹಿರಿಯರ ಆರೋಗ್ಯ ಸುಧಾರಣೆ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ. ಆಕಸ್ಮಿಕ ಧನ ಲಾಭ.

Advertisement

ಕನ್ಯಾ: ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ. ಬಂಧುಗಳ ಮನೆಯಲ್ಲಿ ದೇವತಾರಾಧನೆ.

ತುಲಾ: ರಜಾದಿನವಾದರೂ ಕೈತುಂಬಾ ಕೆಲಸಗಳು. ಕ್ರೀಡೆ, ಸಂಗೀತಾದಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ . ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ. ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಮಗ್ನತೆ.

ವೃಶ್ಚಿಕ: ಸ್ವಗೃಹದಲ್ಲಿ ದೇವತಾರಾಧನೆ. ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ವ್ಯವಹಾರದ ಸಂಬಂಧ ದಕ್ಷಿಣಕ್ಕೆ ಪ್ರಯಾಣ. ಮಕ್ಕಳ ಹೊಸ ಉದ್ಯಮ ಆರಂಭ. ನೆರೆಯವರೊಡನೆ ಬಾಂಧವ್ಯ ವೃದ್ಧಿ.

ಧನು: ಕುಟುಂಬದಲ್ಲಿ ಸಮೃದ್ಧಿಯ ಲಕ್ಷಣಗಳು. ದಂಪತಿಗಳ ನಡುವೆ ಅನುರಾಗ ವೃದ್ಧಿ. ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆಸಕ್ತರಿಗೆ ಅನುಕೂಲ. ಅವಿವಾಹಿತರಿಗೆ ವಿವಾಹ ಯೋಗ.

ಮಕರ: ಸಣ್ಣ ಉದ್ಯಮಗಳಿಗೆ ಶುಭಕಾಲ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ.ಗೃಹೋತ್ಪನ್ನಗಳಿಗೆ ಅಧಿಕ ಬೇಡಿಕೆ. ದೇವ ಮಂದಿರ ಸಂದರ್ಶನ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ ಸ್ಥಿತಿಯಲ್ಲಿ.

ಕುಂಭ: ಸತ್ಕಾರ್ಯಗಳಿಗೆ ನೆರವಾಗುವ ಅವಕಾಶ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ಅಪರೂಪದ ಬಂಧುಗಳ ಆಗಮನ, ಸಣ್ಣ ಪ್ರವಾಸ ಸಂಭವ.ಉದ್ಯೋಗಾವಕಾಶ.

ಮೀನ: ನಾಳೆಯ ಕಾರ್ಯಗಳ ಆಯೋಜನೆ., ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಸಹಚಿಂತನ. ಹಳೆಯ ಸಹಚರರ ಭೇಟಿ. ನೂತನ ನಿವೇಶನ ಖರೀದಿ ಕುರಿತು ಚರ್ಚೆ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮಕ್ಕಳಿಂದ ಹಿರಿಯರಿಗೆ ಆನಂದ. ಉದ್ಯೋಗ ಅರಸುತ್ತಿರುವವರಿಗೆ ಮಾರ್ಗದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next