Advertisement

Daily Horoscope: ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ, ಆರೋಗ್ಯ ವೃದ್ಧಿ

07:20 AM May 29, 2024 | Team Udayavani |

ಮೇಷ: ಸಮಾನ ಲಾಭ, ನಷ್ಟಗಳ ಅನುಭವ. ಉದ್ಯೋಗದಲ್ಲಿ ತಕ್ಕಮಟ್ಟಿಗೆ ತೃಪ್ತಿ. ಹೆಚ್ಚಿನ ಉದ್ಯಮಿಗಳಿಗೆ ಕೆಲವು ವಿಭಾಗಗಳಲ್ಲಿ  ಉತ್ತಮ ಲಾಭ.ವ್ಯವಹಾರ ವಿಸ್ತರಣೆಯಿಂದ ಅನುಕೂಲ ವೃದ್ಧಿ.  ದೇವತಾ ಕಾರ್ಯಗಳಲ್ಲಿ ಮಗ್ನತೆ. ಎಲ್ಲರಿಗೂ ಆರೋಗ್ಯ.

Advertisement

ವೃಷಭ: ಎಲ್ಲ ವಿಭಾಗಗಳಲ್ಲೂ ಅಬಾಧಿತ  ಅಭಿವೃದ್ಧಿ. ಉದ್ಯೋಗಸ್ಥರಿಗೆ ಕಾರ್ಯದ ಒತ್ತಡ. ವಸ್ತ್ರ,ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಲಾಭ. ಸಂಸಾರದಲ್ಲಿ, ಪ್ರೀತಿ, ವಿಶ್ವಾಸ, ಸಾಮರಸ್ಯ ವೃದ್ಧಿ.

ಮಿಥುನ: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫಲ. ಕೃಷಿ ಕ್ಷೇತ್ರದಲ್ಲಿ ಮುಂದುವರಿದ ಪ್ರಗತಿ. ನೌಕರರ ವೇತನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರ. ಧಾರ್ಮಿಕ ಸಾಹಿತ್ಯ ಅಧ್ಯಯನ.ಮನೆಯವರ ಆರೋಗ್ಯ ಉತ್ತಮ.

ಕರ್ಕಾಟಕ: ನಿಮ್ಮ ಕಾರ್ಯಸಾಮರ್ಥ್ಯದ ಮೇಲಿನ ವಿಶ್ವಾಸದಿಂದ ಇನ್ನಷ್ಟು ಜವಾಬ್ದಾರಿಗಳು. ಉದ್ಯೋಗದಲ್ಲಿ ಹೊಸಬಗೆಯ ಕಾರ್ಯಗಳು. ಉದ್ಯಮಗಳಲ್ಲಿ ಸಾಮರಸ್ಯದ ವಾತಾವರಣ. ವಸ್ತ್ರ,, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ  ಪ್ರಮಾಣದಲ್ಲಿ ಲಾಭ.

ಸಿಂಹ: ಎಲ್ಲ ವಿಭಾಗಗಳಲ್ಲೂ ಯಶಸ್ಸಿನಿಂದ ತೃಪ್ತಿ. ಸರಕಾರಿ ನೌಕರರಿಗೆ  ಆತಂಕದ ಭಾವ. ಸ್ವೋದ್ಯೋಗಿ ಮಹಿಳೆಯರಿಗೆ ಸರ್ವತ್ರ ಯಶಸ್ಸು. ಹತ್ತಿರದ ದೇವಾಲಯಕ್ಕೆ ಸಂದರ್ಶನ. ಕುಟುಂಬದಲ್ಲಿ ಸರ್ವರಿಗೂ ಆರೋಗ್ಯ ವೃದ್ಧಿ.

Advertisement

ಕನ್ಯಾ: ಸಕಾಲದಲ್ಲಿ ಕಾರ್ಯಗಳನ್ನು  ಪೂರೈಸಿದ ಸಮಾಧಾನ. ಉದ್ಯೋಗದಲ್ಲಿ  ಶಿಸ್ತಿನ ಕೆಲಸದಿಂದ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ವಿಶೇಷ ದೇವತಾ ಕಾರ್ಯ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ.

ತುಲಾ: ಅನಾಯಾಸವಾಗಿ ಉದ್ಯೋಗ ನಿರ್ವಹಣೆ. ಸಣ್ಣ ಉದ್ಯಮಿಗಳಿಗೆ ಉತ್ತಮ ಲಾಭ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ. ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ.  ಮನೆಯಲ್ಲಿ ಎಲ್ಲರ ಆರೋಗ್ಯ ತಕ್ಕಮಟ್ಟಿಗೆ ಉತ್ತಮ.

ವೃಶ್ಚಿಕ: ಉಳಿದವರಿಗಿಂತ  ನೀವೇ ಭಾಗ್ಯವಂತರೆಂಬ ಅನಿಸಿಕೆ ಇರಲಿ. ವೈಯಕ್ತಿಕ  ಬದುಕಿನಲ್ಲಿ ಸಂತೃಪ್ತಿಯ ಅನುಭವ. ಉದ್ಯೋಗ, ವ್ಯವಹಾರ, ಎರಡರಲ್ಲೂ ಯಶಸ್ಸು.  ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ  ಲಾಭ. ಹಿರಿಯರ,  ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.

ಧನು: ಉದ್ಯೋಗ ಸ್ಥಾನದಲ್ಲಿ ನಿಯೋಜಿತ ಕಾರ್ಯಗಳು ಶೀಘ್ರಗತಿಯಲ್ಲಿ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿ ಹೊಸ ಬಗೆಯ  ಪ್ರಯೋಗ  ಮುಂದುವರಿಕೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಹೇರಳ ಆದಾಯ ಉತ್ತರದ ಬಂಧುಗಳಿಂದ  ಶುಭ ಸಮಾಚಾರ.

ಮಕರ: ಕಾರ್ಯಗಳು ನಿರ್ವಿಘ್ನವಾಗಿ ನಡೆದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ  ನಿರಾಳ ವಾತಾವರಣ. ಕಟ್ಟಡ ನಿರ್ಮಾಪಕರಿಗೆ ಕಾರ್ಯ ಮುಗಿಸುವ ತರಾತುರಿ.  ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ ವ್ಯಾಪಾರಿಗಳಿಗೆ ಅಧಿಕ ಲಾಭ.

ಕುಂಭ: ಶೀಘ್ರ ಕಾರ್ಯ ಮುಗಿಸಲು ಪೂರಕವಾದ ವಾತಾವರಣ. ಉದ್ಯಮದ ಉತ್ಪನ್ನಗಳಿಗೆ ಎಲ್ಲೆಡೆ ಗಳಿಂದ  ಬೇಡಿಕೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ  ಜನಪ್ರಿಯತೆ ವೃದ್ಧಿ.  ಧಾರ್ಮಿಕ ಹಾಗೂ ಸಮಾಜ ಸೇವಾ ಕಾರ್ಯಗಳು ಮುಂದುವರಿಕೆ.

ಮೀನ: ನಿಯೋಜಿತ ಕಾರ್ಯಗಳು  ತೀವ್ರಗತಿಯಲ್ಲಿ ಮುಂದುವರಿಕೆ.  ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ  ಹಿತಾನುಭವದ ವರ್ತನೆ.  ಸಕಾಲಿಕ ಸೇವೆಯಿಂದ ಗ್ರಾಹಕರಿಗೆ ಹರ್ಷ. ಇನ್ನೊಂದು ವೃತ್ತಿ ಕೈಗೊಳ್ಳಲು ಚಿಂತನೆ.  ಹಿರಿಯರಿಗೆ, ಸಂಗಾತಿಗೆ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next