Advertisement

Daily Horoscope: ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಯೋಗ

07:28 AM May 17, 2024 | Team Udayavani |

ಮೇಷ: ಉದ್ಯೋಗದಲ್ಲಿ ಆನಂದಾನುಭವ. ಬಹುಪಾಲು ಉದ್ಯಮಿಗಳಿಗೆ ನಿರೀಕ್ಷೆಗಿಂತ ಅಧಿಕ ಲಾಭ. ವ್ಯವಹಾರ ವಿಸ್ತರಣೆಯಿಂದ ಅನುಕೂಲ. ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭ. ಸಣ್ಣ ಪ್ರಯಾಣದ ಸಾಧ್ಯತೆ. ಸಂಸಾರದಲ್ಲಿ ಸಾಮರಸ್ಯ.

Advertisement

ವೃಷಭ: ಉದ್ಯೋಗಸ್ಥರಿಗೆ ಶೀಘ್ರ ಕಾರ್ಯ ಮುಗಿಸಲು ಒತ್ತಡ. ವಸ್ತ್ರ, ಸಿದ್ಧ ಉಡುಪುಗಳು ಹಾಗೂ ಪಾದರಕ್ಷೆ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ವ್ಯವಹಾರಾರ್ಥ ಸಣ್ಣ ಪ್ರಯಾಣದ ಸಾಧ್ಯತೆ.

ಮಿಥುನ: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಉತ್ಪನ್ನಗಳ ಗುಣಮಟ್ಟ ಸುಧಾರಣೆಗೆ ಗಮನ ಅವಶ್ಯ. ಧಾರ್ಮಿಕ ಸಾಹಿತ್ಯ ಅಧ್ಯಯನ. ದಾಂಪತ್ಯ ಸುಖ, ಸಾಮರಸ್ಯ ವೃದ್ಧಿ.

ಕರ್ಕಾಟಕ: ಉದ್ಯೋಗದಲ್ಲಿ ಹೊಸ ವಿಭಾಗದ ಜವಾಬ್ದಾರಿ. ಮಾಲಕರು ಮತ್ತು ನೌಕರರ ನಡುವೆ ಉತ್ತಮ ಸಹಕಾರ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭ. ಪ್ರಾಪ್ತ ವಯಸ್ಕರಿಗೆ ಶೀಘ್ರ ವಿವಾಹ.

ಸಿಂಹ: ಎಲ್ಲ ವಿಭಾಗಗಳಲ್ಲೂ ಯಶಸ್ಸು ಪ್ರಾಪ್ತಿ. ಸರಕಾರಿ ನೌಕರರಿಗೆ ಆತಂಕದ ಭಾವ. ಸ್ವೋದ್ಯೋಗಿ ಮಹಿಳೆಯರಿಗೆ ಸರ್ವವಿಧದಲ್ಲೂ ಯಶಸ್ಸು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಹತ್ತಿರದ ಶಿವ ದೇವಾಲಯಕ್ಕೆ ಸಂದರ್ಶನ.

Advertisement

ಕನ್ಯಾ: ಎಲ್ಲ ನಿಯೋಜಿತ ಕಾರ್ಯಗಳು ಸಕಾಲದಲ್ಲಿ ಮುಕ್ತಾಯ. ಉದ್ಯೋಗದಲ್ಲಿ ನಿಯತ್ತಿನ ದುಡಿಮೆಗೆ ಗೌರವ. ಸರಕಾರಿ ಅಧಿಕಾರಿ ಗಳಿಗೆ ಅಧಿಕ ಕೆಲಸದ ಹೊರೆ.ಉದ್ಯೋಗ ಅರಸುವ ವರಿಗೆ ಅವಕಾಶಗಳು ಗೋಚರ.

ತುಲಾ: ಅನಾರೋಗ್ಯದಿಂದ ಮುಕ್ತಿ. ಅನಾಯಾಸವಾಗಿ ಉದ್ಯೋಗ ನಿರ್ವಹಣೆ. ಸಣ್ಣ ಉದ್ಯಮ ಘಟಕಗಳಿಗೆ ಏಳಿಗೆಯ ಕಾಲ. ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಯೋಗ. ಮಹಿಳೆಯರ, ಮಕ್ಕಳ ಆರೋಗ್ಯ ಉತ್ತಮ.

ವೃಶ್ಚಿಕ: ನೀವೇ ಹೆಚ್ಚು ಭಾಗ್ಯವಂತರೆಂಬ ಸಮಾಧಾನವಿರಲಿ. ವೈಯಕ್ತಿಕ ಬದುಕಿನಲ್ಲಿ ಸಂಪೂರ್ಣ ಸಂತೃಪ್ತಿ. ಉದ್ಯೋಗ, ವ್ಯವಹಾರ, ಎರಡರಲ್ಲೂ ಯಶಸ್ಸು. ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.

ಧನು: ಉದ್ಯೋಗ ಸ್ಥಾನದಲ್ಲಿ ಕಾರ್ಯಗಳು ನಿರ್ವಿಘ್ನವಾಗಿ ಮುಂದುವರಿಕೆ. ಕೃಷಿ ಕ್ಷೇತ್ರದಲ್ಲಿ ಸಾಧಾರಣ ಲಾಭ. ಉತ್ತರದಲ್ಲಿರುವ ಆಪ್ತಮಿತ್ರನಿಂದ ವಿಶೇಷ ಸಮಾಚಾರ. ಕುಲದೇವರ ದರ್ಶನದಿಂದ ಸಮಾಧಾನ.

ಮಕರ: ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆಯ ವಾತಾವರಣ. ಕಟ್ಟಡ ನಿರ್ಮಾಪಕರಿಗೆ ಕೊನೆಯ ಹಂತದ ಕಾರ್ಯ ಮುಗಿಸುವ ಒತ್ತಡ. ವಿದ್ಯುತ್‌ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ. ಬಂಧುಗಳ ಮನೆಯಲ್ಲಿ ದೇವತಾರ್ಚನೆ.

ಕುಂಭ: ಶೀಘ್ರ ಕಾರ್ಯ ಮುಗಿಸಲು ಅನುಕೂಲದ ವಾತಾವರಣ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ. ಉದ್ಯಮದ ಉತ್ಪನ್ನಗಳಿಗೆ ಎಲ್ಲೆಡೆಗಳಿಂದ ಬೇಡಿಕೆ. ಯಂತ್ರೋಪಕರಣ ಮತ್ತು ವಾಹನ ಬಿಡಿಭಾಗಗಳ ವ್ಯಾಪಾರಿಗಳಿಗೆ ಲಾಭ. ಗೃಹೋತ್ಪನ್ನಗಳ ಜನಪ್ರಿಯತೆ ವೃದ್ಧಿ.

ಮೀನ: ದೇವರ ದಯದಿಂದ ಎಲ್ಲ ಕಾರ್ಯಗಳು ಅನಾಯಾಸವಾಗಿ ಮುಂದುವರಿಕೆ. ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತರಣೆ. ಸರಕಾರಿ ಕಾರ್ಯಾಲಯಗಳಲ್ಲಿ ಹಿತಾನುಭವ. ಸಮಯಕ್ಕೆ ಸರಿಯಾದ ಸೇವೆಯಿಂದ ಗ್ರಾಹಕರಿಗೆ ಹರ್ಷ. ಪೂರಕ ವೃತ್ತಿಯ ಆಯ್ಕೆಯಲ್ಲಿ ಗೊಂದಲ.

Advertisement

Udayavani is now on Telegram. Click here to join our channel and stay updated with the latest news.

Next