Advertisement

ರಾಶಿ ಫಲ: ಅನ್ಯರ ಜವಾಬ್ದಾರಿ ವಿಚಾರದಲ್ಲಿ ಗಮನಹರಿಸುವಾಗ ಎಚ್ಚರಿಕೆ

07:24 AM Mar 24, 2023 | Team Udayavani |

ಮೇಷ: ಸರಕಾರಿ, ರಾಜಕೀಯ ಕಾರ್ಯದಲ್ಲಿ ಪ್ರಗತಿ. ಸಮುದ್ರ ಜನ್ಯ ಪದಾರ್ಥಗಳಿಂದಲೂ, ವಾಹನ, ಭೂಮಿ ಪಾಲುದಾರಿಕೆ ವಿಚಾರದಲ್ಲಿ ಲಾಭ. ಮಿತ್ರರಿಂದ ಸಹಾಯ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ ಪ್ರಾಪ್ತಿ.

Advertisement

ವೃಷಭ: ಆರೋಗ್ಯದಲ್ಲಿ ಗಮನ ಹರಿಸಿ. ಸಂದರ್ಭಕ್ಕೆ ಸರಿಯಾಗಿ ವಿವೇಕ ವಾಕ್‌ಚತುರತೆ ಯಿಂದ, ಸ್ತ್ರೀಯರಿಂದ, ಪಾಲುದಾರಿಕೆ, ಉದ್ಯೋಗ, ಜನಪದ, ಸಾಮಾಜಿಕ ವಿಚಾರದಲ್ಲಿ ನಿರೀಕ್ಷಿತ ಫ‌ಲಿತಾಂಶ. ಧನಾರ್ಜನೆಗೆ ವಿಪುಲ ಅವಕಾಶ.

ಮಿಥುನ: ಉತ್ತಮ ಆರೋಗ್ಯ. ಮಕ್ಕಳ ವಿಚಾರದಲ್ಲಿ ಆತುರತೆ ಸಲ್ಲದು. ಸ್ತ್ರೀ – ಪುರುಷ ರಿಂದ ಪರಸ್ಪರ ಸಹಾಯ. ಅನ್ಯರ ಜವಾಬ್ದಾರಿ ವಿಚಾರದಲ್ಲಿ ಗಮನಹರಿಸುವಾಗ ಎಚ್ಚರಿಕೆ. ಕಠೊರ, ದಾಕ್ಷಿಣ್ಯ ಗುಣಗಳಿಂದ ಕಾರ್ಯ ವೈಖರಿ ಸಲ್ಲದು.

ಕರ್ಕ: ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ-ಭಕ್ತಿಗೆ ಗಮನವಿರಲಿ. ಭೂಮಿ ಕಟ್ಟಡಗಳಿಂದ ಅನುಕೂಲ. ಮಿತ್ರರಿಂದ ಸಹಾಯ. ಪಾಲುದಾರಿಕಾ ವ್ಯವಹಾರದಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ತಾಳ್ಮೆಯಿಂದ ದಿನ ಕಳೆಯಿರಿ.

ಸಿಂಹ: ದೀರ್ಘ‌ ಪ್ರಯಾಣ. ಪರದೇಶದ ವಿಚಾರದಲ್ಲಿ ಮಾನಸಿಕ ಒತ್ತಡ, ಕಿರಿಕಿರಿ ಗಳಿದ್ದರೂ, ಸುಖದಾಯಕ ಫ‌ಲಿತಾಂಶ ಲಭಿಸುವುದು. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ. ಧನಾರ್ಜನೆಗೆ ಉತ್ತಮ ದಿನ.

Advertisement

ಕನ್ಯಾ: ಉತ್ತಮ ಧನಲಾಭ. ಉದ್ಯೋಗದಲ್ಲಿ ಪ್ರಗತಿ, ಮನೋರಂಜನೆಯಲ್ಲಿ ಆಸಕ್ತಿ. ಧಾರ್ಮಿಕ ಕೆಲಸ ಕಾರ್ಯಗಳಿಗೆ, ಗೃಹೋಪಕರಣ ವಸ್ತುಗಳಿಗೆ ಧನವ್ಯಯ. ಮಾತಿನಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ.

ತುಲಾ: ಮಾತೃ ಸಮಾನರಿಂದ ಲಾಭ. ವಿದ್ಯಾರ್ಥಿ ಗಳಿಗೆ, ಉದ್ಯೋಗಸ್ಥರಿಗೆ, ವ್ಯವಹಾರಸ್ಥರಿಗೆ ಮಿತ್ರರ ಸಹಾಯ ಒದಗುವ ಸಮಯ. ಪರಿಶ್ರಮಕ್ಕೆ ಸರಿಯಾಗಿ ಸ್ಥಾನಮಾನ ಗೌರವ, ಧನಾರ್ಜನೆ ಲಭಿಸುವ ಯೋಗ. ಮಕ್ಕಳ ವಿಚಾರದಲ್ಲಿ ನೆಮ್ಮದಿ.

ವೃಶ್ಚಿಕ: ಧಾರ್ಮಿಕ ಕಾರ್ಯಗಳಿಗೆ ಧನವ್ಯಯ ದಿಂದ ಸಫ‌ಲತೆ. ಸ್ಥಾನಮಾನ ಆರೋಗ್ಯ ವೃದ್ಧಿ. ಉತ್ತಮ ಜನರ ಒಡನಾಟದಿಂದ ಸಂತೋಷ. ಸಂಸಾರದಲ್ಲಿ ಸುಖ ವೃದ್ಧಿ. ಹಿರಿಯರಿಂದ ಮಾರ್ಗದರ್ಶನ. ಮಕ್ಕಳಿಂದ ಸಂತೋಷ. ದೇವತಾ ಸ್ಥಳ ಸಂದರ್ಶನ.

ಧನು: ಉತ್ತಮ ಧನಾರ್ಜನೆ ಇದ್ದರೂ ಲಾಭಕ್ಕೆ ಕೊರತೆ ಆಗದಂತೆ ಎಚ್ಚರ ವಹಿಸಿ. ಸಣ್ಣ ಪ್ರಯಾಣಕ್ಕೆ ಧನವ್ಯಯ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ದೇವತಾ ಸ್ಥಳ ಸಂದರ್ಶನದಿಂದ ಮಾನಸಿಕ ನೆಮ್ಮದಿ.

ಮಕರ: ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಒತ್ತು ನೀಡಿ. ಉದ್ಯೋಗ, ವ್ಯವಹಾರದಲ್ಲಿ ಸೂಕ್ಷ್ಮತೆ ವಹಿಸುವುದರಿಂದ ನಿರೀಕ್ಷಿತ ಫ‌ಲಿತಾಂಶ. ಬಂಧುಮಿತ್ರರೊಂದಿಗೆ ವೈಮನಸ್ಸಿಗೆ ಅವಕಾಶ ನೀಡದಿರಿ. ಆಳವಾದ ಅಧ್ಯಯನ ನಡೆಸುವವರಿಗೆ ಉತ್ತಮ ದಿನ.

ಕುಂಭ: ದೂರ ಪ್ರಯಾಣದಲ್ಲಿ ಅಡಚಣೆ ತೋರೀತು. ಗುರುಹಿರಿಯರ ಆರೋಗ್ಯದ ಕಡೆಗೆ ಗಮನಹರಿಸಿ. ಉದ್ಯೋಗ ವ್ಯವಹಾರದಲ್ಲಿ ಉತ್ತಮ ಬದಲಾವಣೆಯಿಂದ ಮಾನಸಿಕ ಸಂತೋಷ. ಧಾರ್ಮಿಕ ವಿಚಾರದಲ್ಲಿ ಭಕ್ತಿ ಶ್ರದ್ಧೆಗೆ ಆದ್ಯತೆ ನೀಡಿ.

ಮೀನ: ಆರೋಗ್ಯದ ಕಡೆಗೆ ಗಮನಹರಿಸಬೇಕು. ಬಂಧುಮಿತ್ರ ರೊಂದಿಗೆ ಸಮಯ ಕಳೆಯುವುದರಿಂದ ಮಾನಸಿಕ ಸ್ಥೈರ್ಯ ವೃದ್ಧಿ. ಆರ್ಥಿಕ ವಿಚಾರದಲ್ಲಿ ಘರ್ಷಣೆಗೆ ಮೋಸ ಹೋಗದಂತೆ ಎಚ್ಚರ ವಹಿಸಿ. ಯಾವುದೇ ಆತುರದ ನಿರ್ಧಾರ ಕೈಗೊಳ್ಳದಿರಿ. ಸರಿಯಾದ ಪತ್ರ ವ್ಯವಹಾರವಿರಲಿ.

 

Advertisement

Udayavani is now on Telegram. Click here to join our channel and stay updated with the latest news.

Next