Advertisement

ರಾಶಿ ಫಲ: ಅಭಿವೃದ್ಧಿದಾಯಕ ಬದಲಾವಣೆ, ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ

07:20 AM Mar 21, 2023 | Team Udayavani |

ಮೇಷ: ಆರೋಗ್ಯ ಗಮನಿಸಿ. ಎಲ್ಲಾ ವಿಚಾರಗಳಲ್ಲಿ ಎಚ್ಚರಿಕೆಯಿಂದ ತಾಳ್ಮೆಯಿಂದ ವ್ಯವಹರಿಸಿ. ಹಲವಾರು ಸ್ಪರ್ಧಿಗಳು ಎದುರಾದರು. ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ ತೋರುವುದರಿಂದ ಪ್ರಗತಿ. ನಿರೀಕ್ಷಿತ ಧನಸಂಪತ್ತು ವೃದ್ಧಿ.

Advertisement

ವೃಷಭ: ಸರಿಯಾದ ನಿಯಮ ಪಾಲಿಸುವುದ ರಿಂದ ದೇಹಾರೋಗ್ಯ ಉತ್ತಮ. ದೀರ್ಘ‌ ಸಂಚಾರ ಸಂಭವ. ಪರರ ವಿಚಾರದಲ್ಲಿ ಹಸ್ತಕ್ಷೇಪ ಮಾಡ ದಿರಿ. ಗೃಹ, ವಾಹನಾದಿ ಸುಖ. ಮಕ್ಕಳಿಂದ ಸಂತೋಷ ವೃದ್ಧಿ. ಗುರುಹಿರಿಯರ ಸಹಾಯ ಸಹಕಾರ ಪ್ರಾಪ್ತಿ.

ಮಿಥುನ: ಕೆಲಸಕಾರ್ಯಗಳಲ್ಲಿ ಚುರುಕುತನ ನೈಪುಣ್ಯತೆ ಉದಾರ ಮನೋಭಾವನೆ, ಧೈರ್ಯ ಉತ್ಸಾಹ ತೋರಿತು. ಅಭಿವೃದ್ಧಿದಾಯಕ ಬದಲಾವಣೆ. ಧಾರ್ಮಿಕ ಕಾರ್ಯಗಳ ನೇತೃತ್ವ. ಕೆಲಸ ಕಾರ್ಯಗಳಲ್ಲಿ ಕೀರ್ತಿ ಸಂಪಾದನೆ.

ಕರ್ಕ: ಹಿರಿಯರಿಂದ ಸುಖ. ಸ್ಥಾನ ಸುಖಕ್ಕಾಗಿ ಹೆಚ್ಚಿದ ಪರಿಶ್ರಮ. ಮಕ್ಕಳ ವಿಚಾರದಲ್ಲಿ ನಿರೀಕ್ಷಿತ ಬದಲಾವಣೆ. ಗೃಹ, ಆಸ್ತಿ ವಿಚಾರದಲ್ಲಿ ಪ್ರಗತಿಯದಾಯಕ ಮುನ್ನಡೆ. ಉತ್ತಮ ಆರೋಗ್ಯ. ಸಂಸಾರದಲ್ಲಿ ನೆಮ್ಮದಿ.

ಸಿಂಹ: ಆರೋಗ್ಯ ವೃದ್ಧಿ. ನಿರೀಕ್ಷಿತ ಧನಲಾಭ ಪ್ರಾಪ್ತಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಗುರುಹಿರಿಯರೊಂದಿಗೆ ಭಿನ್ನಾಭಿಪ್ರಾಯಕ್ಕೆ ಅವಕಾಶ ಕಲ್ಪಿಸದಿರಿ. ಆಸ್ತಿ ವಿಚಾರಗಳಲ್ಲಿ ಸಾಮಾನ್ಯ ಫ‌ಲ.

Advertisement

ಕನ್ಯಾ: ಆರೋಗ್ಯ ಗಮನಿಸಿ. ದೀರ್ಘ‌ ಸಂಚಾರ ಸಂಭವ. ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಹಣಕಾಸಿನ ವಿಚಾರದಲ್ಲಿ ಕಟ್ಟಿ ಹಾಕಿದ ಪರಿಸ್ಥಿತಿ ಸಂಭವ. ಪಾಲುದಾರರ ಸಹಕಾರದಿಂದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.

ತುಲಾ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಕಾರ್ಯ ಸಾಧಿಸಿದ ಸಂತೋಷ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ದೂರದ ವ್ಯವಹಾರಗಳಿಂದ ಅಧಿಕ ಧನಾರ್ಜನೆ. ಉತ್ತಮ ವಾಕ್‌ಚತುರತೆ. ಮನೆಯಲ್ಲಿ ಸಂತಸದ ವಾತಾವರಣ.

ವೃಶ್ಚಿಕ: ದೀರ್ಘ‌ ಪ್ರಯಾಣದಿಂದ ದೇಹಾಯಾಸ ಸಂಭವ. ಆರೋಗ್ಯದ ಬಗ್ಗೆ ಉದಾಸೀನತೆ ಪ್ರವೃತ್ತಿ ಸಲ್ಲದು. ನೂತನ ಮಿತ್ರರ ಭೇಟಿ. ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಗೃಹೋಪಕರಣ ವಸ್ತುಗಳ ಸಂಗ್ರಹ.

ಧನು: ಸರಿಯಾದ ನಿಯಮ ಪಾಲನೆಯಿಂದ ಆರೋಗ್ಯ ವೃದ್ಧಿ. ಉತ್ತಮ ಧನಾರ್ಜನೆ. ನಿರೀಕ್ಷಿತ ಸಹಾಯ ಲಭ್ಯ. ಸಣ್ಣ ಪ್ರಯಾಣ ಯೋಗ. ಸಾಂಸಾರಿಕ ಸುಖ ಮಧ್ಯಮ. ವಿದ್ಯಾರ್ಥಿಗಳು ಪರರ ಸಹಾಯ ಪಡೆದು ನಿರೀಕ್ಷಿತ ಗುರಿ ಸಾಧಿಸಿರಿ.

ಮಕರ: ಆರೋಗ್ಯದಲ್ಲಿ ಸುಧಾರಣೆ. ದೂರದ ವ್ಯವಹಾರಗಳಿಂದ ಉತ್ತಮ ಧನಾರ್ಜನೆ. ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಪ್ರಗತಿ. ಮಕ್ಕಳ ಬಗ್ಗೆ ಹೆಚ್ಚಿದ ಗಮನ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಒದಗುವ ಸಮಯ.

ಕುಂಭ: ದೀರ್ಘ‌ ಪ್ರಯಾಣದಲ್ಲಿ ನಿರೀಕ್ಷಿತ ಸಫ‌ಲತೆ. ಉತ್ತಮ ಸ್ಥಾನ, ಗೌರವಾದಿ ಲಭ್ಯ. ಅಧಿಕ ಧನಾರ್ಜನೆ. ನೂತನ ಮಿತ್ರರ ಭೇಟಿ. ಆಸ್ತಿ ವಿಚಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ.

ಮೀನ: ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಸರಿಯಾದ ದಾಖಲಾತಿಯೊಂದಿಗೆ ವ್ಯವಹರಿಸಿ. ದೂರದ ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫ‌ಲ. ಗುರುಹಿರಿಯರ ಆರೋಗ್ಯದ ಕಡೆ ಗಮನಹರಿಸಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next