Advertisement

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಉದ್ಯಮದಲ್ಲಿ ಪ್ರಗತಿ

07:11 AM Mar 20, 2024 | Team Udayavani |

ಮೇಷ: ಉತ್ತಮ ದೇಹಾರೋಗ್ಯ. ಕಾರ್ಯ ರಂಗದಲ್ಲಿ ಮುನ್ನಡೆ. ಉದ್ಯಮಗಳ ಬೆಳವ ಣಿಗೆಗೆ ಅಡ್ಡಿಯಾದ ಪೈಪೋಟಿ. ಆಪ್ತವರ್ಗದಿಂದ ಸಕಾಲಿಕ ನೆರವು ಲಭ್ಯ. ಮಹಿಳೆಯರ ಆರೋಗ್ಯದ ಕಡೆಗೆ ಲಕ್ಷ್ಯ ಇರಲಿ. ಮಕ್ಕಳ ಓದಿನಲ್ಲಿ ಪ್ರಗತಿ.

Advertisement

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ. ಸರಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ಖಾಸಗಿ ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಷೇರು ವ್ಯವಹಾರದಲ್ಲಿ ಕೊಂಚ ಲಾಭ. ದೇವತಾ ಸಾನ್ನಿಧ್ಯಕ್ಕೆ ಭೇಟಿ.

ಮಿಥುನ: ವಿಕೃತ ಮನಸ್ಕರಿಂದ ಪೀಡನೆ. ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಆಪ್ತರ ಹುರಿದುಂಬಿಸುವ ಮಾತುಗಳಿಂದ ಧೈರ್ಯ ವರ್ಧನೆ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ, ಕಾರ್ಯ ಕ್ಷಮತೆಗೆ ಪ್ರಾಶಸ್ತ್ಯ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಪಾಲನೆಯಿಂದ ಹೆಚ್ಚಿದ ಆಕರ್ಷಣೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ.

ಸಿಂಹ: ನಿಧಾನವಾದರೂ ಸ್ಥಿರವಾದ ಪ್ರಗತಿ. ಉದ್ಯೋಗಸ್ಥರಿಗೆ ವೇತನ ಏರಿಕೆ. ಬಾಯ್ದೆರೆ ಪ್ರಚಾರದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮಗಾರಿಗಳು ತ್ವರಿತ ಗತಿಯಲ್ಲಿ. ಮನೆಯಲ್ಲಿ ಮಂಗಲ ಕಾರ್ಯದ ಪ್ರಸ್ತಾವ.

Advertisement

ಕನ್ಯಾ: ಬಹುಪಾಲು ನೆಮ್ಮದಿಯ ದಿನ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಉದ್ಯಮದಲ್ಲಿ ಗಣನಾರ್ಹ ಪ್ರಗತಿ. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಉದ್ಯೋಗಾಸಕ್ತರನ್ನು ಅರಸಿ ಬರುವ ಅವಕಾಶಗಳು. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ತುಲಾ: ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಅಕಸ್ಮಾತ್‌ ಧನಪ್ರಾಪ್ತಿ. ವಿತ್ತ ಸಂಸ್ಥೆಯ ನೆರವಿನಿಂದ ವ್ಯವಹಾರ ವಿಸ್ತರಣೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕೀರ್ತನೆ, ಭಜನೆ, ಸತ್ಸಂಗಗಳಲ್ಲಿ ಆಸಕ್ತಿ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಸ್ವಯಂ ಯೋಗ್ಯತೆಯಿಂದ ಗೌರವ. ಉದ್ಯಮ ಭರ ದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ. ಗೃಹೋ ದ್ಯಮ ಉತ್ಪನ್ನಗಳ ಜನಪ್ರಿಯತೆ ವಿಸ್ತರಣೆ.

ಧನು: ಕುಟುಂಬದ ವಲಯದಲ್ಲಿ ಸ್ವಲ್ಪ ಏರುಪೇರಾದ ವಾತಾವರಣ. ಆತ್ಮೀಯರಿಂದ ಸಕಾಲದಲ್ಲಿ ಸಹಾಯ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಆಸಕ್ತಿ. ಎಲ್ಲರ ಆರೋಗ್ಯ ಉತ್ತಮ.

ಮಕರ: ನ್ಯಾಯಾಲಯ ವ್ಯವಹಾರದಲ್ಲಿ ಜಯ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಉತ್ತಮ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಉದ್ಯೋಗ ಸ್ಥಾನದಲ್ಲಿ ನೆಮ್ಮದಿ.

ಕುಂಭ: ಹಲವು ಮೂಲಗಳಿಂದ ಆದಾಯ ವೃದ್ಧಿ. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ಆರೋಗ್ಯ ಉತ್ತಮ.

ಮೀನ: ಗುರುಕೃಪೆಯಿಂದ ಶನಿಮಹಾತ್ಮನ ಪೀಡೆ ಶಮನ. ಉದ್ಯೋಗ ಸ್ಥಾನದ ಆತಂಕ ದೂರ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಬಂಧುವರ್ಗದಲ್ಲಿ ಶುಭಕಾರ್ಯ. ದೇವಾಲಯದ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next