Advertisement

ರಾಶಿ ಫಲ: ಅವಿವಾಹಿತರಿಗೆ ವಿವಾಹ ಭಾಗ್ಯ, ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ

07:19 AM Mar 17, 2023 | Team Udayavani |

ಮೇಷ: ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ವಿಶ್ವಾಸ ಪಾತ್ರರಾಗಿ ಜವಾಬ್ದಾರಿ ನಿರ್ವಹಿಸಿ. ಪರರ ಹಣ ನಿರ್ವಹಿಸುವಾಗ ಪಾರದರ್ಶಕತೆಗೆ ಆದ್ಯತೆ ನೀಡಿ. ದೈರ್ಯ ಹಿಂಜರಿಕೆ ಹೆದರದೇ ಕೆಲಸ ಮಾಡಿರಿ. ಅವಿವಾಹಿತರಿಗೆ ವಿವಾಹ ಭಾಗ್ಯ.

Advertisement

ವೃಷಭ: ಶಹ ವಾಹನಾದಿ ಸುಖ. ನೂತನ ಬಂಧುಮಿತ್ರರ ಸಂಗಮ. ಕೆಲಸ ಕಾರ್ಯಗಳಲ್ಲಿ ಗೌರವಾನ್ವಿತ ಪ್ರಗತಿ. ಸಂದರ್ಭಕ್ಕೆ ಸರಿಯಾಗಿ ಜಾಣತನ ಜವಾಬ್ದಾರಿ ಪ್ರದರ್ಶಿಸಿ. ಜನಮನ್ನಣೆ ಲಭ್ಯ. ಉತ್ತಮ ಪ್ರಗತಿದಾಯಕ ಧನಾರ್ಜನೆ. ನಾನಾ ರೀತಿಯಲ್ಲಿ ಧನ ಸದ್ವಿನಿಯೋಗ.

ಮಿಥುನ: ಧಾರ್ಮಿಕ ಚಟುವಟಿಕೆಗಳಲ್ಲಿ ತಲ್ಲೀನತೆ. ದೇವತಾ ಸ್ಥಳಗಳ ಸಂದರ್ಶನ. ಮನಃ ತೃಪ್ತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಯೋಗ್ಯ ವಧು ವರ ಲಭಿಸಿದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಉಳಿತಾಯದಲ್ಲಿ ಆಸಕ್ತಿ. ಗುರುಹಿರಿಯರಿಗೆ ಸಂತೋಷ.

ಕರ್ಕ: ದೀರ್ಘ‌ ಪ್ರಯಾಣ. ಗುರುಹಿರಿಯರಿಗೆ ಸಂತೋಷಪ್ರದರಾಗಿರಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮದಿಂದ ಪ್ರಗತಿ. ಆರೋಗ್ಯದಲ್ಲಿ ಸುದಾರಣೆ. ಸಾಮಾನ್ಯ ಧನ ವೃದ್ಧಿ.

ಸಿಂಹ: ಅನಗತ್ಯ ವಿಚಾರಗಳಲ್ಲಿ ತೊಡಗಿಸಿ ಕೊಂಡು ತೊಂದರೆ ಎಳೆದುಕೊಳ್ಳದಿರಿ. ದಾಕ್ಷಿಣ್ಯಕ್ಕೆ ಒಳಗಾಗದೆ ಜವಾಬ್ದಾರಿಯುತ ಮಾತುಗಳಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ದೂರದ ಮಿತ್ರರಿಂದ ಸಹಕಾರ. ಅವಿವಾಹಿತರಿಗೆ ವಿವಾಹ ಯೋಗ. ದಾಂಪತ್ಯ ತೃಪ್ತಿಕರ.

Advertisement

ಕನ್ಯಾ: ಹಠಮಾಡದೇ ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾಗುವುದರಿಂದ ಎಲ್ಲಾ ವ್ಯವಹಾರಗಳಲ್ಲಿ ಗಣನೀಯ ಪ್ರಗತಿ. ಕೀರ್ತಿ ಶ್ಲಾಘನೆ ಲಭ್ಯ. ಜವಾಬ್ದಾರಿಯುತ ಮಾತಿನಿಂದ ಜನಪ್ರಶಂಸೆ. ವಿದ್ಯಾರ್ಥಿಗಳಿಗೆ ಜ್ಞಾನ ವಿಚಾರಗಳಿಗೆ ಸದ್‌ವ್ಯಯ.

ತುಲಾ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಬಹುವಿಧದ ಚಟುವಟಿಕೆಗಳಿಂದ ಕೂಡಿದ ದಿನಚರಿ. ಹೆಚ್ಚಿದ ಧನ ಸಂಪತ್ತು. ಮಿತ್ರರ ಸಹಕಾರ. ಮಾನ್ಯತೆ ಲಭ್ಯ. ಅಧ್ಯಯನ ಆಕಾಂಕ್ಷಿಗಳಿಗೆ ಹೆಚ್ಚಿದ ಅವಕಾಶ ಸವಲತ್ತು. ಗೃಹ ಉಪಯೋಗೀ ವಸ್ತುಗಳ ಸಂಗ್ರಹ.

ವೃಶ್ಚಿಕ: ದೈರ್ಯ ಶೌರ್ಯ ಪರಾಕ್ರಮ ಅಧಿಕಾರಯುತ ನಡೆಯಿಂದ ಕೂಡಿದ ದಿನಚರಿ. ಮಾತಿನಲ್ಲಿ ತಾಳ್ಮೆ ಪ್ರೀತಿ ವಹಿಸಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ಹೆಚ್ಚಿದ ವರಮಾನ. ದಂಪತಿಗಳಲ್ಲಿ ಪರಸ್ಪರ ಸಹಕಾರ ಲಭ್ಯ. ಹೂಡಿಕೆ ವಿಚಾರಗಳಲ್ಲಿ ಪ್ರಗತಿ.

ಧನು: ಸಮಯ ಸಂದರ್ಭಕ್ಕೆ ಸರಿಯಾಗಿ ಪ್ರತಿಭೆ ಬುದ್ಧಿವಂತಿಕೆ ಪ್ರದರ್ಶನ. ಜನಮನ್ನಣೆ ಪ್ರಶಂಸೆ ಲಭ್ಯ. ಆರ್ಥಿಕವಾಗಿ ಬಲಿಷ್ಠತೆ. ಉತ್ತಮ ವಾಕ್‌ ಚತುರತೆ. ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಒದಗುವ ಸಮಯ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.

ಮಕರ: ಉದ್ಯೋಗ ವ್ಯವಹಾರಗಳಲ್ಲಿ ಅನಿರೀಕ್ಷಿತ ಪ್ರಗತಿ. ಬಹುಜನರ ಸಹಾಯ ಮಾನ್ಯತೆ. ಜನಮನ್ನಣೆ ಲಭ್ಯ. ಆಸ್ತಿ ವಿಚಾರದಲ್ಲಿ ಸಂತೋಷ. ಬಂಧುಮಿತ್ರರ ಆಗಮನ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.

ಕುಂಭ: ಸಾಂಸಾರಿಕ ಜವಾಬ್ದಾರಿ. ಅವಿವಾಹಿತರಿಗೆ ವಿವಾಹ ಯೋಗ. ದೇವತಾ ಸ್ಥಳ ಸಂದರ್ಶನ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ಹೆಚ್ಚಿದ ಲಾಭ. ಸಮಾಜಮುಖೀ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ. ಹಿರಿಯರನ್ನು ಗೌರವಿಸಿ.

ಮೀನ: ಆರೋಗ್ಯ ಸುದೃಢ. ಅಧಿಕ ಧನಲಾಭ. ಸರಳತೆಯಿಂದ ಕೂಡಿದ ದಿನಚರಿ. ಜನಮೆಚ್ಚುಗೆಯ ವ್ಯವಹಾರ. ದೂರದ ಬಂಧುಮಿತ್ರರ ಭೇಟಿ. ಸಂಭ್ರಮದ ವಾತಾವರಣ. ಹೂಡಿಕೆಗಳಲ್ಲಿ ಆಸಕ್ತಿ ಮುಂದುವರಿಕೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next