Advertisement

ರಾಶಿ ಫಲ: ದೂರದ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ, ಅನಿರೀಕ್ಷಿತ ಅದೃಷ್ಟ ಪ್ರಾಪ್ತಿ

07:19 AM Mar 14, 2023 | Team Udayavani |

ಮೇಷ: ಅನಿರೀಕ್ಷಿತ ಅದೃಷ್ಟ ಪ್ರಾಪ್ತಿ. ಭಾಗ್ಯ ವೃದ್ಧಿ. ದೂರ ಪ್ರಯಾಣ. ಗುರುಹಿರಿಯರ ಪ್ರೋತ್ಸಾಹದಿಂದ ಪ್ರಗತಿ. ಧೈರ್ಯ ಪರಾಕ್ರಮ ಪ್ರದರ್ಶನ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ.

Advertisement

ವೃಷಭ: ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ನೂತನ ಮಿತ್ರರ ಭೇಟಿ. ಅನಿರೀಕ್ಷಿತ ಧನಾಗಮನ. ಗೃಹದಲ್ಲಿ ಸಂತೋಷದ ವಾತಾವರಣ. ಆಸ್ತಿ ವಿಷಯದಲ್ಲಿ ಹೆಚ್ಚಿದ ಆಸಕ್ತಿ. ಧೈರ್ಯ ಉತ್ಸಾಹದಿಂದ ಕೂಡಿದ ದಿನ.

ಮಿಥುನ: ಜವಾಬ್ದಾರಿಯುತ ಕೆಲಸ ನಿರ್ವಹಣೆಯಿಂದ ಜನಮನ್ನಣೆ. ಗೌರವ ಆದರತೆ ಲಭ್ಯ. ಸ್ವಚ್ಚತೆ, ಪಾರದರ್ಶಕತೆ ಆದ್ಯತೆ. ದೂರದ ವ್ಯವಹಾರಗಳಲ್ಲಿ ಅಧಿಕ ಧನಾರ್ಜನೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ, ನೇತೃತ್ವ.

ಕರ್ಕ: ಹೆಚ್ಚಿದ ಸ್ಥಾನ ಗೌರವ. ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಬಂಧುಮಿತ್ರರ ಸಹಾಯ ಸಹಕಾರ. ಉದ್ಯೋಗದಲ್ಲಿ ಜನಪ್ರಿಯತೆ ಅಭಿವೃದ್ಧಿ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಒದಗುವ ಸಮಯ. ಹೆಚ್ಚಿನ ಧನಾರ್ಜನೆ.

ಸಿಂಹ: ಆರೋಗ್ಯದಲ್ಲಿ ಗಣನೀಯ ವೃದ್ಧಿ. ಸ್ಥಾನ ಗೌರವಾದಿ ಪ್ರಾಪ್ತಿ. ಮಾತಿನಲ್ಲಿ ಜಾಗರೂಕರಾಗಿ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಹಣಕಾಸಿನ ಒತ್ತಡ ಎದುರಾದೀತು. ಮಿತ್ರರ ಸಹಾಯ ಸಹಕಾರ ಲಭ್ಯ. ಗುರುಹಿರಿಯರ ಆಶೀರ್ವಾದಿಂದ ಪ್ರಗತಿ.

Advertisement

ಕನ್ಯಾ: ಸಾಮಾಜಿಕ ಚಟುವಟಿಕೆಗಳಲ್ಲಿ ಜನಪ್ರಿಯತೆ. ನಾಯಕತ್ವ ಗುಣಕ್ಕೆ ಪ್ರಾಶಸ್ತ್ಯ. ನಷ್ಟ ದ್ರವ್ಯ ಲಭಿಸುವ ಸಾಧ್ಯತೆ. ಗೃಹ ಉಪಕರಣ ವಸ್ತುಗಳ ಸಂಗ್ರಹ. ಬಂಧುಮಿತ್ರರ ಸಹಕಾರ. ಆರ್ಥಿಕ ವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ.

ತುಲಾ: ಜ್ಞಾನ ವಿವೇಕ ನಿಷ್ಠೆಯಿಂದ ಕೂಡಿದ ಧಾರ್ಮಿಕ ಚಟುವಟಿಕೆಗಳು. ಗುರುಹಿರಿಯರ ಸೂಕ್ತ ಮಾರ್ಗದರ್ಶನದ ಲಾಭ. ಮಾನಸಿಕ ನೆಮ್ಮದಿ. ತೃಪ್ತಿದಾಯಕ ದಿನ. ಭೂಮಿ, ವಾಹನ, ಆಸ್ತಿ ವಿಚಾರದಲ್ಲಿ ಪ್ರಗತಿ. ಗೃಹದಲ್ಲಿ ಸಂಭ್ರಮ.

ವೃಶ್ಚಿಕ: ಆರೋಗ್ಯ ಗಮನಿಸಿ. ದೈಹಿಕವಾಗಿ ಹೆಚ್ಚು ಶ್ರಮ ವಹಿಸದೇ ಕಾರ್ಯ ಪ್ರವೃತ್ತರಾಗಿ. ದೀರ್ಘ‌ ಪ್ರಯಾಣ ಸಂಭವ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಅಧಿಕ ಚಿಂತಿಸದಿರಿ. ಪರರಿಗೆ ಜವಾಬ್ದಾರಿ ವಹಿಸುವಾಗ ತಿಳಿದು ನಿರ್ಣಯಿಸಿ.

ಧನು: ನಿರೀಕ್ಷಿತ ಸ್ಥಾನ ಮಾನ ಗೌರವಾದಿ ಸಿಕ್ಕಿದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ. ಅಧಿಕ ಪರಿಶ್ರಮ ಎದುರಾದೀತು. ಹಣಕಾಸಿನ ವಿಚಾರದಲ್ಲಿ ಯಾವುದೇ ಕೊರತೆಯಾಗದು.

ಮಕರ: ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸಿದ ತೃಪ್ತಿ. ಅನಿರೀಕ್ಷಿತ ಧನವೃದ್ಧಿ. ಅತೀ ಬುದ್ಧಿವಂತಿಕೆಯಿಂದ ಕೂಡಿದ ಮಾತುಗಳಿಂದ ಕಾರ್ಯ ವೈಖರಿ. ಮಕ್ಕಳ ವಿಚಾರದಲ್ಲಿ ಹೆಚ್ಚಿದ ಪರಿಶ್ರಮ ಹಾಗೂ ಸಫ‌ಲತೆ.

ಕುಂಭ: ಆಸ್ತಿ ಸಂಚಯನದಲ್ಲಿ ಪ್ರಗತಿ. ದೂರ ಪ್ರಯಾಣ. ಉತ್ತಮ ಸಹಕಾರ ಪ್ರೋತ್ಸಾಹ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾದ ಸಂತೋಷ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ಪ್ರಗತಿ. ವಿದ್ಯಾರ್ಥಿಗಳಿಂದ ಸುವಾರ್ತೆ.

ಮೀನ: ಆರೋಗ್ಯ ವೃದ್ಧಿ. ದಂಪತಿಗಳಲ್ಲಿ ಪ್ರೀತಿ, ಅನುರಾಗ ವೃದ್ಧಿ. ಪಾಲುಗಾರಿಕಾ ವಿಚಾರಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಭಾಗ್ಯ. ಮಿತ್ರರೊಡನೆ ತಾಳ್ಮೆಯಿಂದ ವಿವೇಚನೆಯಿಂದ ನಡೆದುಕೊಳ್ಳಿ. ಅನಗತ್ಯ ಬೇಜಾಬ್ದಾರಿ ತೊಂದರೆಗೆ ಸಿಲುಕದಿರಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next