Advertisement

Daily Horoscope: ಹೊಸ ಅವಕಾಶಗಳು ತಾವಾಗಿ ಲಭಿಸುವ ಸಾಧ್ಯತೆ, ಧನವ್ಯಯ

07:31 AM Jun 07, 2024 | Team Udayavani |

ಮೇಷ: ಅವಿರತ ಪರಿಶ್ರಮಕ್ಕೆ ಮೇಲಾಧಿಕಾರಿ ಗಳ ಮೆಚ್ಚುಗೆ. ಆವಶ್ಯವುಳ್ಳವರಿಗೆ ಸಹಾಯ ಮಾಡಿ ಕೊಟ್ಟ ತೃಪ್ತಿ. ಮಕ್ಕಳ ವಿವಾಹ ಸಂಬಂಧ ಮಾತುಕತೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತಸ.ಹೊಸ ವ್ಯವಹಾರ ಆರಂಭಿಸಲು ಚಿಂತನೆ.

Advertisement

ವೃಷಭ: ಎಲ್ಲೆಡೆಯಲ್ಲೂ ನಿಮ್ಮ ಪ್ರಭಾವ ಕಾಣಲಿದೆ. ಬೌದ್ಧಿಕ ಕೆಲಸಕ್ಕೆ ಯೋಗ್ಯ ಗೌರವ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಸಂಪಾದನೆಯ. ಹೊಸ ಮಾರ್ಗ ಅನ್ವೇಷಣೆ. ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ಅವಶ್ಯ.

ಮಿಥುನ: ಇಚ್ಛಾಶಕ್ತಿ ವೃದ್ಧಿಗೆ ತೀವ್ರ ಸಾಧನೆ. ಹೊಸ ಅವಕಾಶಗಳು ತಾವಾಗಿ ಲಭಿಸುವ ಸಾಧ್ಯತೆ. ಗೃಹಾಲಂಕಾರ ವಸ್ತುಗಳ ಖರೀದಿಗೆ ಧನವ್ಯಯ. ಸತ್ಕಾರ್ಯಕ್ಕೆ ದಾನ ಮಾಡಿ ಸಾರ್ಥಕ ಭಾವ ಹೊಂದುವಿರಿ. ಉದ್ಯೋಗಾನ್ವೇಷಿಗಳಿಗೆ ಅನುಕೂಲ.

ಕರ್ಕಾಟಕ: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ. ನೊಂದವರಿಗೆ ಸಾಂತ್ವನ ಹೇಳುವ ಅವಕಾಶ. ಕೃಷಿಕರಿಗೆ ನೆಮ್ಮದಿ, ಸಮಾಧಾನದ ಸನ್ನಿವೇಶ ಒದಗಲಿದೆ. ಸಂಸಾರದಲ್ಲಿ ಸಾಮರಸ್ಯ, ಪ್ರೀತಿ ವೃದ್ಧಿ.

ಸಿಂಹ: ಉದ್ಯೋಗ, ವ್ಯವಹಾರಗಳಿಗೆ ಎದುರಾಗಿದ್ದ ಅಡಚಣೆ ದೂರ. ಪತಿ – ಪತ್ನಿಯರಿಂದ ಪರಸ್ಪರರಿಗೆ ಸಕಾಲಿಕ ಸಹಾಯ. ಹಿರಿಯರ ಆರೋಗ್ಯ ತೃಪ್ತಿಕರ. ಮನೆಯಲ್ಲಿ ಸಂತಸದ ವಾತಾವರಣ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ.

Advertisement

ಕನ್ಯಾ: ದೈಹಿಕ ಆಪತ್ತು ನಿವಾರಣೆಯಾಗಿ ನೆಮ್ಮದಿ. ವೃತ್ತಿಪರ ಉದ್ಯೋಗಸ್ಥರಿಗೆ ಕೊಂಚ ಕಿರಿಕಿರಿ. ಬಂಧುವರ್ಗದವರಿಗೆ ಸಹಾಯ ಮಾಡುವ ಸಂದರ್ಭ. ದಂಪತಿಗಳ ನಡುವೆ ಅನುರಾಗ ವೃದ್ಧಿ. ವಿದೇಶದಿಂದ ಶುಭ ಸಮಾಚಾರದ ನಿರೀಕ್ಷೆ.

ತುಲಾ: ದೈಹಿಕ ಆರೋಗ್ಯ ಸುಧಾರಣೆ. ನೂತನ ವಾಹನ ಖರೀದಿ ಸಾಧ್ಯತೆ. ವೃತ್ತಿರಂಗದಲ್ಲಿ ಸಮಯಸಾಧಕರ ಮೇಲುಗೈ. ಗೃಹೋದ್ಯಮಗಳಿಗೆ ಅನುಕೂಲದ ವಾತಾವರಣ. ಆತ್ಮಬಲ ವೃದ್ಧಿಗಾಗಿ ಧ್ಯಾನ, ಜಪಾದಿಗಳಿಗೆ ಸಮಯ ನೀಡಿಕೆ ವಿಹಿತ.

ವೃಶ್ಚಿಕ: ಉದ್ಯೋಗ ರಂಗದ ಸಾಧನೆಯಿಂದ ಪಕ್ಕದವರಿಗೆ ಅಸೂಯೆ. ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಸಣ್ಣ ಉದ್ಯಮ ಬೆಳೆಸಲು ಆಸಕ್ತಿ. ಮಕ್ಕಳ ಸಾಧನೆಯಿಂದ ಹರ್ಷ.

ಧನು: ಪರಿಚಿತರಿಂದ ಅಯಾಚಿತ ಸಹಾಯ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯ ಸಾಧನೆಗೆ ಹರ್ಷಾಚರಣೆ. ಮಕ್ಕಳ ವ್ಯಾಸಂಗ ದಲ್ಲಿ ಮುನ್ನಡೆ.

ಮಕರ: ಮೃದು ಮಾತಿನಿಂದ ಅನಾಯಾಸ ವಾಗಿ ಕಾರ್ಯಸಾಧನೆ. ವಿಳಂಬಿತ ಕಾರ್ಯ ಪೂರ್ಣವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ. ನಿರೀಕ್ಷಿತ ಫ‌ಲ ಪ್ರಾಪ್ತಿ. ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ಸಂಬಂಧ.

ಕುಂಭ: ಧಾರ್ಮಿಕ ಕಾರ್ಯಗಳಿಗೆ, ಜನೋಪಯೋಗಿ ಯೋಜನೆಗಳಿಗೆ ನೆರವು. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ.ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ. ವಿದ್ಯಾರ್ಥಿ ಗಳಿಗೆ ಹಿರಿಯರ ಪ್ರೋರ್ತ್ಸಾಹ ಲಭ್ಯ.

ಮೀನ: ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಅಡಚಣೆ.ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ತೊಂದರೆ.. ಉದ್ಯೋಗ ಬದಲಾವಣೆಯ ಸಾಧ್ಯತೆ ದೂರ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next