Advertisement
ವೃಷಭ: ಪೂರ್ವಯೋಜನೆಯಂತೆ ಕೈಗೊಂಡ ಕ್ರಮಗಳಿಂದಾಗಿ ಕಾರ್ಯಗಳು ಸುಗಮ. ಸರಕಾರಿ ನೌಕರರಿಗೆ ವರ್ಗಾವಣೆ ಖಚಿತ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ.
Related Articles
Advertisement
ಕನ್ಯಾ: ಕ್ರಿಯಾಶೀಲತೆಯೊಂದಿಗೆ ದೈವಾನು ಗ್ರಹವೂ ಇರುವುದರಿಂದ ಹಿನ್ನಡೆಯ ಪ್ರಶ್ನೆಯಿಲ್ಲ. ವಿಶಾಲ ಕಾರ್ಯವ್ಯಾಪ್ತಿಯಲ್ಲಿ ಉದ್ಯೋಗ ಮುಂದುವರಿಕೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ.
ತುಲಾ: ಮನೋಬಲ ವೃದ್ಧಿಯೊಂದಿಗೆ ಕಾರ್ಯದ ವೇಗ ಹೆಚ್ಚಳ. ಕಾರ್ಯ ಕ್ಷೇತ್ರದಲ್ಲಿ ಪರಿಸ್ಥಿತಿ ಸುಧಾರಣೆ. ಸಂಗಾತಿಯ ಮನೋ ಧರ್ಮದೊಡನೆ ಉತ್ತಮ ಹೊಂದಾಣಿಕೆ. ಹಿರಿಯರ ಆರೋಗ್ಯದಲ್ಲಿ ಗಣನೀಯ ಸುಧಾರಣೆ.
ವೃಶ್ಚಿಕ: ಸಪ್ತಾಹ ಮುಂದುವರಿದಂತೆ ಸಂತೋಷ ತರುವ ಬೆಳವಣಿಗೆಗಳು. ಸಂಸ್ಥೆಯ ಮುಖ್ಯಸ್ಥರಿಂದ ಯೋಗಕ್ಷೇಮ ವಿಚಾರಣೆ. ಗೃಹೋದ್ಯಮದ ಉತ್ಪನ್ನಗಳ ಕಡೆಗೆ ಆಕರ್ಷಿತರಾದ ಗ್ರಾಹಕರು. ಮಕ್ಕಳಿಂದ ಹೊಸ ಉದ್ಯಮ ಆರಂಭ.
ಧನು: ಒಂದು ವಾರದ ಸಣ್ಣಪುಟ್ಟ ಹಿನ್ನಡೆಗಳ ನಿವಾರಣೆ. ಉದ್ಯೋಗ ಸ್ಥಾನದಲ್ಲಿ ನಿರಾತಂಕ ಮುನ್ನಡೆ. ಸಮಾಜ ಅಭಿವೃದ್ಧಿ ಮತ್ತು ಸುಧಾರಣೆಯ ಕಾರ್ಯಕ್ರಮಗಳಲ್ಲಿ ಭಾಗಿ. ಪರಿಸರ ಸ್ವತ್ಛತೆಯ ಕಾರ್ಯಕ್ರಮಗಳ ನೇತೃತ್ವ.
ಮಕರ: ಪರಿಸರದಲ್ಲಿ ಪರಿವರ್ತನೆಯಿಂದ ಸಮಾಧಾನ. ವೃತ್ತಿಸ್ಥಾನದಲ್ಲಿ ಕಡಿಮೆಯಾದ ಒತ್ತಡ. ಹೆಚ್ಚುವರಿ ಆದಾಯ ಹೊಂದುವ ಪ್ರಯತ್ನ ಯಶಸ್ವಿ. ವಸ್ತ್ರ, ಸಿದ್ಧ ಉಡುಪು, ಆಭರಣ. ಉದ್ಯಮಗಳಿಗೆ ಶುಭಕಾಲ.
ಕುಂಭ: ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆಗಳು. ಉದ್ಯಮದ ಉತ್ಪನ್ನ ಗಳಿಗೆ ಮಾರಾಟಗಾರರ ಅನ್ವೇಷಣೆ. ಗ್ರಾಹಕರ ಬೇಡಿಕೆ ಗಳಿಗೆ ಶೀಘ್ರ ಸ್ಪಂದಿಸುವ ಪ್ರಯತ್ನ. ಗೃಹಿಣಿಯರ ಸ್ವೊದ್ಯೋಗ ಯೋಜನೆಗಳು ಯಶಸ್ವಿ. ಹಿರಿಯರು, ಗೃಹಿಣಿ, ಮಕ್ಕಳಿಗೆ ಸಮಾಧಾನದ ವಾತಾವರಣ.
ಮೀನ: ದಿನಾರಂಭದಲ್ಲಿ ಪ್ರಗತಿಯ ವೇಗವರ್ಧನೆ. ವೃತ್ತಿಬಾಂಧವರಿಂದ ಉತ್ಸಾಹಪೂರ್ಣ ಸಹಕಾರ. ಸರಕಾರಿ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ. ಸರಕಾರಿ ನೌಕರರಿಗೆ ಸಾರ್ವಜನಿಕರಿಂದ ಪ್ರಶಂಸೆ. ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಗೌರವ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ನೆಮ್ಮದಿ.