Advertisement

Daily Horoscope: ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ, ಸ್ವತಂತ್ರ ವ್ಯವಹಾರ ಕೈಹಿಡಿಯದು

07:33 AM Jul 19, 2024 | Team Udayavani |

ಮೇಷ: ಬಹುತೇಕ ಎಲ್ಲ ವ್ಯವಹಾರಗಳೂ ಸುಗಮ. ಉದ್ಯೋಗಸ್ಥರಿಗೆ ಆಪ್ತರಿಂದ ಅನುಕೂಲ. ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ ಲಾಭ. ವ್ಯವಹಾರದ ಸಂಬಂಧ ತಿರುಗಾಟ. ಆರೋಗ್ಯದ ಬಗ್ಗೆ ಎಚ್ಚರ.

Advertisement

ವೃಷಭ: ಹೊಸ ವ್ಯವಹಾರ ಕ್ಷೇತ್ರಕ್ಕೆ ಪದಾರ್ಪಣೆ. ವಧೂ- ವರಾನ್ವೇಷಿಗಳಿಗೆ ಶುಭವಾರ್ತೆ. ಲೆಕ್ಕ ಪರಿಶೋಧಕರು, ನ್ಯಾಯವಾದಿಗಳೇ ಮೊದಲಾದ ವೃತ್ತಿಪರರಿಗೆ ಕೆಲಸಗಳ ಒತ್ತಡ. ಗೃಹಿಣಿಯರ ಉದ್ಯಮದ ಆದಾಯ ವೃದ್ಧಿ.

ಮಿಥುನ: ಯಾವುದೇ ದ್ವಂದ್ವವಿಲ್ಲದೆ ಮುಂದೆ ಸಾಗಿ. ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ. ಸ್ವತಂತ್ರ ವ್ಯವಹಾರ ಕೈಹಿಡಿಯದು. ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ. ಧಾರ್ಮಿಕ ಗೋಷ್ಠಿಗಳು ಮತ್ತು ಉಪನ್ಯಾಸಗಳಲ್ಲಿ ಆಸಕ್ತಿ.

ಕರ್ಕಾಟಕ: ಮಿಶ್ರಫಲಗಳ ದಿನ. ಸರಕಾರಿ ನೌಕರ ರಿಗೆ ಕೊಂಚ ನೆಮ್ಮದಿ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಅವಿವಾಹಿತರಿಗೆ ವಿವಾಹ ಯೋಗ ಸಂಭವ. ಕುಟುಂಬ ವಿವಾದ ನ್ಯಾಯಾಲಯದ ಹೊರಗೆ ತೀರ್ಮಾನ.

ಸಿಂಹ:ಕೊಟ್ಟು ಮರೆತಿದ್ದ ಸಾಲ ಅಯಾಚಿತವಾಗಿ ವಸೂಲಿ. ಅಧಿಕಾರಿಗಳ ಸಕಾಲಿಕ ಕ್ರಮದಿಂದ ಕಾರ್ಯಗಳು ಮುಕ್ತಾಯ. ವ್ಯವಹಾರಾರ್ಥವಾಗಿ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ. ದಾಂಪತ್ಯ ಸುಖ ಉತ್ತಮ.

Advertisement

ಕನ್ಯಾ: ಜನಪರ ಕಾರ್ಯಗಳಿಂದ ಗೌರವ ಪ್ರಾಪ್ತಿ. ಕೈಗೊಂಡ ಪ್ರವಾಸದ ಉದ್ದೇಶ ಈಡೇರಿಕೆ. ಸಂಸಾರ ಸುಖ ತೃಪ್ತಿಕರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ಕೃಷ್ಯುತ್ಪಾದನೆಗಳಿಂದ ತೃಪ್ತಿಕರ ಲಾಭ.

ತುಲಾ: ಪರಿಸರ ಸ್ವತ್ಛತೆ ಚಟುವಟಿಕೆಗಳಲ್ಲಿ ಮಗ್ನತೆ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿ ಗಳಿಗೆ ಲಾಭ. ಸಂಸಾರದಲ್ಲಿ ಸಾಮರಸ್ಯ. ಉತ್ತಮ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಉಲ್ಲಾಸದ ದಿನ. ಕುಟುಂಬದ ಹಿರಿಯರ ಮನೆಯಲ್ಲಿ ದೇವತಾರಾಧನೆ.

ವೃಶ್ಚಿಕ: ಗೃಹಾಲಂಕಾರದಲ್ಲಿ ಆಸಕ್ತಿ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಹತ್ತಿರದ ದೇವೀಕ್ಷೇತ್ರಕ್ಕೆ ಭೇಟಿ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ವಾತಾವರಣ. ವಿದೇಶದಲ್ಲಿರುವ ಬಂಧುಗಳ ಅನಿರೀಕ್ಷಿತ ಭೇಟಿ.

ಧನು: ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ ಯೋಗ. ಅಲ್ಪಾವಧಿ ಹೂಡಿಕೆಗಳು ಹಿತಕರವಲ್ಲ. ಗೃಹಿಣಿಯರ ಸ್ವೋದ್ಯೋಗ ಯೋಜನೆಗಳ ಕ್ಷಿಪ್ರಗತಿಯ ಮುನ್ನಡೆ. ಹೆಚ್ಚುವರಿ ಆದಾಯದ ಮಾರ್ಗ ಅನ್ವೇಷಣೆ.

ಮಕರ: ವಿವಿಧ ಮೂಲಗಳಿಂದ ಆದಾಯ ವೃದ್ಧಿ. ಕಾರ್ಯರಂಗದಲ್ಲಿ ಸಮಯದೊಂದಿಗೆ ಸೆಣಸಾಟ. ಸಂಗೀತ ಶ್ರವಣ, ಸತ್ಸಂಗದಿಂದ ಮನಸ್ಸಿಗೆ ನೆಮ್ಮದಿ. ಔಷಧ ವ್ಯಾಪಾರಿಗಳಿಗೆ ಉತ್ತಮ ಲಾಭ.

ಕುಂಭ: ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನ ಏರಿಕೆಯ ಸಾಧ್ಯತೆ. ಸ್ಥಿರಾಸ್ತಿಯೊಂದರ ಖರೀದಿ ಪ್ರಯತ್ನದಲ್ಲಿ ಮುನ್ನಡೆ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಬಂಧುವರ್ಗದ ವಿವಾದ ಪರಿಹಾರಕ್ಕೆ ನೆರವು.ವ್ಯವಹಾರಾರ್ಥ ಸಣ್ಣ ಪ್ರಯಾಣ.

ಮೀನ: ಹಳೆಯ ಗೆಳೆಯರಿಗೆ ಸಹಾಯ ಮಾಡುವ ಅವಕಾಶ. ಇಲಾಖೆಗಳವರಿಂದ ಉತ್ತಮ ಸ್ಪಂದನ. ಸಂಸಾರದಲ್ಲಿ ಸಹಕಾರ, ಸೌಜನ್ಯ ವೃದ್ಧಿ. ಎಲ್ಲರ ಆರೋಗ್ಯ ಉತ್ತಮ. ಸ್ವಂತ ಉದ್ಯೋಗ ಕೈಗೊಳ್ಳುವ ಒಡನಾಡಿಗೆ ಮಾರ್ಗದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next