Advertisement

Daily Horoscope: ದೂರದ ವ್ಯವಹಾರಗಳಲ್ಲಿ ಪ್ರಗತಿ ಸಂತೋಷ, ಅವಿವಾಹಿತರಿಗೆ ವಿವಾಹ ಭಾಗ್ಯ

07:17 AM Jul 13, 2023 | Team Udayavani |

ಮೇಷ: ಆರೋಗ್ಯ ಸುದೃಢ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಘನತೆ ಗೌರವ ಮಾನ್ಯತೆ. ಕೀರ್ತಿ ಸಂಪಾದನೆ. ಅಧಿಕ ಧನ ಲಾಭ. ಅಧಿಕಾರಯುತ ಕಾರ್ಯಾಚರಣೆ. ನೂತನ ವ್ಯವಹಾರ ಆರಂಭ. ದೂರ ಪ್ರಯಾಣ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ.

Advertisement

ವೃಷಭ: ಪೂರ್ವಾಪರ ತಿಳಿದು ಪರರಿಗೆ ಸಹಾಯ ಮಾಡಿ. ವಿಶ್ವಾಸ ಘಾತಕ ಪರಿಸ್ಥಿತಿ ಎದುರಾಗುವ ಸಾಧ್ಯತೆ ಸಂಭವ. ವಂಚನೆ ಭೀತಿ ಹಣಕಾಸಿನ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ಸಣ್ಣ ಪ್ರಯಾಣ. ಆರೋಗ್ಯ ವೃದ್ಧಿ.

ಮಿಥುನ: ವಿದ್ಯಾರ್ಜನೆಯಲ್ಲಿ ಆಸಕ್ತಿ. ಅಧ್ಯಯನ ಅಧ್ಯಾಪನದಿಂದ ಮಾನ್ಯತೆ. ಮಕ್ಕಳಿಂದ ಸಂತೋಷ. ದೂರದ ವ್ಯವಹಾರಗಳಲ್ಲಿ ಪ್ರಗತಿ ಸಂತೋಷ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ. ಅವಿವಾಹಿತರಿಗೆ ವಿವಾಹ ಭಾಗ್ಯ.

ಕರ್ಕ: ಸಣ್ಣ ಪ್ರಯಾಣ. ನಿರೀಕ್ಷಿಸಿದಂತೆ ಉದ್ಯೋಗ ವ್ಯವಹಾರಗಳಲ್ಲಿ ಸಫ‌ಲತೆ. ಪಾಲುದಾರರಿಂದ ಸಹಕಾರ. ಸಹೋದ್ಯೋಗಿಗಳ ಪ್ರೋತ್ಸಾಹ. ಉನ್ನತ ವ್ಯಾಸಂಗದಲ್ಲಿ ಪಾಲ್ಗೊಳ್ಳುವಿಕೆ. ಸಾಮಾನ್ಯ ಧನ ಲಾಭ.

ಸಿಂಹ: ಸಾಂಸಾರಿಕ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಅಧಿಕ ಧನವ್ಯಯ ಸಂಭವ. ಗುರುಹಿರಿಯರ ಮಾರ್ಗದರ್ಶನ ಆಗತ್ಯ. ಹೂಡಿಕೆಗಳಲ್ಲಿ ಎಚ್ಚರ ಅಗತ್ಯ. ಸಕಾರಾತ್ಮಕವಾಗಿ ಆಲೋಚಿಸಿ.

Advertisement

ಕನ್ಯಾ: ಹೆಚ್ಚಿದ ವರಮಾನ. ಸಂದಭೋìಚಿತ ಮಾತುಗಾರಿಕೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ದೂರದ ಬಂಧುಮಿತ್ರರ ಸಹಕಾರ ಪ್ರೋತ್ಸಾಹ. ದಾಂಪತ್ಯ ತೃಪ್ತಿದಾಯಕ. ಆರೋಗ್ಯ ಸುಧಾರಣೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಿಸಿ.

ತುಲಾ: ಸುಖ ಸಂತೋಷದಿಂದ ಕೂಡಿದ ಸಮಯ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧಿಕ ಧನಾರ್ಜನೆ ಇದ್ದರೂ ಲಾಭಾಂಶ ಕಡಿಮೆ ತೋರೀತು. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಮಯ.

ವೃಶ್ಚಿಕ: ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ಚಟುವಟಿಕೆಗಳು. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ಸಹೋದರಾದಿ ವರ್ಗದವರಿಂದಲೂ ಸಹೋದ್ಯೋಗಿಗಳಿಂದಲೂ ಉತ್ತಮ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ.

ಧನು: ಆರೋಗ್ಯ ಮಧ್ಯಮ. ಸಣ್ಣ ಪ್ರಯಾಣ ಸಂಭವ. ಮನೆಯಲ್ಲಿ ದೇವತಾ ಕಾರ್ಯಗಳ ಸಂಭ್ರಮ. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದ ನಡೆಯಿಂದ ತೊಂದರೆ ಆಗುವ ಸಾಧ್ಯತೆ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಯೋಗ್ಯ ಸ್ಥಾನ ಪ್ರಾಪ್ತಿ.

ಮಕರ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸಿದ್ದರಿಂದ ಮನಃ ತೃಪ್ತಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಸಾಮಾನ್ಯ ಪ್ರಗತಿ. ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂಭ್ರಮದ ವಾತಾವರಣ.

ಕುಂಭ: ದೂರ ಪ್ರಯಾಣ. ಆಸ್ತಿ ವಿಚಾರಗಳಲ್ಲಿ ಹೂಡಿಕೆ ಪ್ರಗತಿ. ಉತ್ತಮ ಧನ ಸಂಪಾದನೆ. ಸಂದರ್ಭಕ್ಕೆ ಸರಿಯಾಗಿ ವಾಕ್‌ ಚತುರತೆ ಪ್ರದರ್ಶನ. ಕೈಕೂಡಿದ ಕೆಲಸ ಕಾರ್ಯಗಳು. ಸಹೋದರ ಸಮಾನರಿಂದ ಸಹಾಯ ಸಹಕಾರ ಲಭ್ಯ. ಮಾನಸಿಕ ಸಂತೋಷ ವೃದ್ಧಿ.

ಮೀನ: ಆರೋಗ್ಯ ಸುದೃಢ. ಸಮಾಜಮುಖೀ ಕೆಲಸ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ, ಜನಮನ್ನಣೆ. ವಾಹನ ಸೌಕರ್ಯ ಪ್ರಾಪ್ತಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ದೇವತಾ ಕಾರ್ಯಗಳನ್ನು ನೆರವೇರಿಸಿದ ತೃಪ್ತಿ. ಗೃಹದಲ್ಲಿ ಸಂಭ್ರಮದ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next