Advertisement

Daily Horoscope: ವಿದ್ಯೆ, ಜ್ಞಾನ ಪ್ರದರ್ಶನದಿಂದ ಗೌರವ ವೃದ್ಧಿ, ನಿರೀಕ್ಷಿತ ಧನ ಸಂಚಯನ

07:17 AM Jun 06, 2023 | Team Udayavani |

ಮೇಷ: ಅವಿವಾಹಿತರಿಗೆ ವಿವಾಹ ಯೋಗ. ಚರ್ಚೆಗೆ ಆಸ್ಪದ ನೀಡದಿರಿ. ಸಾಂಸಾರಿಕವಾಗಿ ನೆಮ್ಮದಿ ದಿನ. ಮನೋರಂಜನೆಗಾಗಿ ಪ್ರಯಾಣ, ಧನವ್ಯಯ. ಗೃಹದಲ್ಲಿ ಸಂಭ್ರಮದ ವಾತಾವರಣ. ದೂರದ ವ್ಯವಹಾರಗಳಲ್ಲಿ ಪ್ರಗತಿ.

Advertisement

ವೃಷಭ: ಪರರ ಸಹಾಯದಿಂದ ಕೆಲಸ ಕಾರ್ಯ ಗಳಲ್ಲಿ ಪ್ರಗತಿ. ಮಾತಿನಲ್ಲಿ ಸ್ಪಷ್ಟತೆ ತೋರಿ ಬರುವುದು. ಅನಿರೀಕ್ಷಿತ ಧನಾಗಮನ. ದೂರ ಪ್ರಯಾಣ. ವರ್ಚಸ್ಸು ವೃದ್ಧಿ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡದಿರಿ. ಹಿರಿಯರ ಮಾತಿನಲ್ಲಿ ಗೌರವವಿರಲಿ.

ಮಿಥುನ: ವಿದ್ಯೆ, ಜ್ಞಾನ ಪ್ರದರ್ಶನದಿಂದ ಗೌರವ ವೃದ್ಧಿ. ಜನಮನ್ನಣೆ. ನಿರೀಕ್ಷಿತ ಧನ ಸಂಚಯನ. ಕುಟುಂಬ ಸುಖ. ಉದ್ಯೋಗ ವ್ಯವಹಾರಗಳಲ್ಲಿ ಮಿತ್ರರಿಂದ ಸಹಾಯ. ನೆಮ್ಮದಿ ಲಭಿಸೀತು. ಅನ್ಯರೊಡನೆ ವ್ಯವಹರಿಸುವಾಗ ಜಾಗ್ರತೆ ವಹಿಸಿ.

ಕರ್ಕ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಗತ್ಯ ವಿಚಾರಗಳಿಗೆ ಆಸ್ಪದ ನೀಡದಿರಿ. ಪರ ಊರಿನ ವ್ಯವಹಾರದಲ್ಲಿ ಧನ ಸಂಪತ್ತು ವೃದ್ಧಿ. ಬಂಧುಗಳಿಂದ ತಾಯಿ ಸಮಾನರಿಂದ ಉತ್ತಮ ಮಾರ್ಗದರ್ಶನ.

ಸಿಂಹ: ಪಾಲುಗಾರಿಕಾ ವಿಚಾರಗಳಲ್ಲಿ ಲಾಭ. ಪರಸ್ಪರ ಸಹಕಾರ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುವುದು. ಉತ್ತಮ ಧನ ವೃದ್ಧಿ. ಜವಾಬ್ದಾರಿಯುತ ಮಾತುಗಳಿಂದ ಜನಮನ್ನಣೆ ಲಭಿಸೀತು. ದೇವತಾ ಸ್ಥಳಗಳ ಸಂದರ್ಶನದಿಂದ ನೆಮ್ಮದಿ.

Advertisement

ಕನ್ಯಾ: ಭೂಮ್ಯಾದಿ, ಆಸ್ತಿ, ಗೃಹ, ವಾಹನಾದಿ ವಿಚಾರಗಳಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ನೂತನ ಮಿತ್ರರ ಭೇಟಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಗೃಹದಲ್ಲಿ ಸಂತಸದ ವಾತಾವರಣ. ಮಕ್ಕಳ ವಿಚಾರದಲ್ಲಿ ಚಿಂತೆ ಕಾಡೀತು.

ತುಲಾ: ಧಾರ್ಮಿಕ ಕಾರ್ಯಗಳ ನೇತೃತ್ವ. ಉತ್ತಮ ಆರೋಗ್ಯ. ಸದಾ ಸಂಚಾರಶೀಲತೆ. ಬಹುಜನರ ಸಂಪರ್ಕ. ದೂರದ ವ್ಯವಹಾರದಲ್ಲಿ ಅನ್ಯರ ಸಹಾಯದಿಂದ ಪ್ರಗತಿ. ವಿದ್ಯಾರ್ಜನೆಯಲ್ಲಿ ದ್ವಂದ್ವ ನೀತಿ ಸಲ್ಲದು. ಹಲವು ವಿಧದಲ್ಲಿ ಧನಲಾಭ.

ವೃಶ್ಚಿಕ: ಆರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಮಾತಾಪಿತೃಗಳಿಂದಲೂ ಹಿರಿಯ ರಿಂದಲೂ ಸುಖ ಸಿದ್ಧಿ. ದಂಪತಿಗಳು ಚರ್ಚೆಗೆ ಅವಕಾಶ ನೀಡದಿರಿ. ಸ್ಪುಟವಾದ ವಿದ್ಯೆ ಸ್ಪಷ್ಟತೆಯಿಂದ ಕೂಡಿದ ಜ್ಞಾನ ಸಂಪಾದನೆ.

ಧನು: ದೈಹಿಕವಾಗಿಯೂ ಮಾನಸಿಕವಾಗಿಯೂ ಸುದೃಢ ಆರೋಗ್ಯ. ಉತ್ಸಾಹಶೀಲತೆ. ಭೂ, ಆಸ್ತಿ ವಿಚಾರದಲ್ಲಿ ಧನ ಲಾಭ. ಹಿರಿಯರ ಆರೋಗ್ಯದ ಬಗ್ಗೆ ಗಮನಿಸಿ. ಆರ್ಥಿಕ ವಿಚಾರದ ಬಗ್ಗೆ ಜ್ಞಾನಾರ್ಜನೆಗೆ ಆಸಕ್ತಿ. ಉತ್ತಮ ವಾಕ್‌ಚತುರತೆ.

ಮಕರ: ಅಧ್ಯಯನದಲ್ಲಿ ಆಸಕ್ತಿ. ಉತ್ತಮ ವಾಕ್‌ಚತುರತೆ. ಸರ್ವಜನರ ಮಾನ್ಯತೆ. ಜವಾಬ್ದಾರಿಯುತ ಕೆಲಸಕಾರ್ಯಗಳಿಂದ ಧನಾಗಮ. ಗುರುಹಿರಿಯರಿಂದ ಸಹಾಯ. ದೇವತಾ ಕಾರ್ಯಗಳ ನೇತೃತ್ವ. ಆಡಳಿತಾತ್ಮಕ ನಾಯಕತ್ವ ಗುಣ ವೃದ್ಧಿ.

ಕುಂಭ: ಸುದೃಢ ಆರೋಗ್ಯ. ಬುದ್ಧಿವಂತಿಕೆ ವೃದ್ಧಿ. ಆರ್ಥಿಕ ಸಹಾಯ ಮಾಡುವಾಗ ಎಚ್ಚರ ವಹಿಸುವುದರಿಂದ ಅನಾಹುತ ತಪ್ಪೀತು. ದೀರ್ಘ‌ ಪ್ರಯಾಣ. ಧಾರ್ಮಿಕ ಕ್ಷೇತ್ರಗಳ ಸಂದರ್ಶನ. ದೇವತಾ ಜ್ಞಾನ ಸಂಪಾದನೆಯಲ್ಲಿ ತಲ್ಲೀನತೆ.

ಮೀನ: ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಗಮನಹರಿಸಿ. ಗುರುಹಿರಿಯರೊಡನೆ ಸಂಯಮದಿಂದ ವ್ಯವಹರಿಸಿ. ಸರಕಾರಿ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಸಹೋದರ ಸಮಾನರಿಂದ ಧನ ಲಾಭ. ಆರೋಗ್ಯದ ಕಡೆ ಗಮನಹರಿಸಿ. ಬಂಧುಮಿತ್ರರ ಭೇಟಿಯಿಂದ ಸಂತೋಷ.

Advertisement

Udayavani is now on Telegram. Click here to join our channel and stay updated with the latest news.

Next