Advertisement

Daily Horoscope: ಉದ್ಯೋಗಸ್ಥರ ಆರ್ಥಿಕ ತೊಂದರೆಗೆ ತಾತ್ಕಾಲಿಕ ಪರಿಹಾರ

07:27 AM Jan 09, 2024 | Team Udayavani |

ಮೇಷ: ನಿಮ್ಮ ಬುದ್ಧಿಶಕ್ತಿಯನ್ನು ಒರೆಗೆ ಹಚ್ಚುವ ಪರೀಕ್ಷೆಯಲ್ಲಿ ವಿಜಯ. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ. ಹೊಟೇಲ್‌ ಉದ್ಯಮಿಗಳು ನೌಕರರ ಸಮಸ್ಯೆಗಳಿಂದ ಪಾರು. ದೂರ ದೇಶದಲ್ಲಿರುವ ಮಕ್ಕಳಿಂದ ಸಂತೋಷದ ಸಮಾಚಾರ.

Advertisement

ವೃಷಭ: ನರ್ಸಿಂಗ್‌ ಶಿಕ್ಷಣ ಪಡೆದವರಿಗೆ ಉದ್ಯೋಗಾವಕಾಶ. ನೂತನ ಯೋಜನೆ ಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನದಲ್ಲಿ ಮುನ್ನಡೆ. ದೀರ್ಘ‌ಕಾಲದ ದಾಯಾದಿ ನ್ಯಾಯಾಲಯ ಖಟ್ಲೆ ಮುಕ್ತಾಯ. ನೂತನ ಯೋಜನೆಗಳನ್ನು ಅನುಷ್ಠಾನ.

ಮಿಥುನ: ಯುವಜನರಿಗೆ ಧಾರ್ಮಿಕ ಮಾರ್ಗದರ್ಶನದ ವ್ಯವಸ್ಥೆಯ ನೇತೃತ್ವ. ಯಾರಿಗೂ ಅಯಾಚಿತವಾಗಿ ಸಲಹೆ ನೀಡದಿರಿ. ಯೋಜನೆಗಳ ಅನುಷ್ಠಾನದ ವೇಗವರ್ಧನೆ ಪ್ರಕ್ರಿಯೆ. ತಾತ್ಕಾಲಿಕ ಉದ್ಯೋಗಸ್ಥರ ಅತಂತ್ರ ಸ್ಥಿತಿಗೆ ಪರಿಹಾರ.

ಕರ್ಕಾಟಕ:ಸುಲಭವಾಗಿ ಕಾರ್ಯಸಾಧಿಸಲು ಮಾರ್ಗ ಅನ್ವೇಷಣೆ. ಉದ್ಯೋಗಸ್ಥರ ಆರ್ಥಿಕ ತೊಂದರೆಗೆ ತಾತ್ಕಾಲಿಕ ಪರಿಹಾರ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಕೆಂಪು ಪಟ್ಟಿ ಅಡ್ಡಿ. ಸರಕಾರಿ ವ್ಯವಸ್ಥೆಗಳ ಸುಧಾರಣೆಗೆ ರಾಜಕಾರಣಿಗಳ ನಿರಾಸಕ್ತಿ.

ಸಿಂಹ: ಶೀಘ್ರಗತಿಯ ಕ್ರಮಗಳಿಂದ ಇನ್ನಷ್ಟು ಜವಾಬ್ದಾರಿಗಳ ಹೊರೆ. ಒಂದಕ್ಕಿಂತ ಹೆಚ್ಚು ವ್ಯವಹಾರಗಳ ಕಡೆಗೆ ಗಮನ ಕೊಡಲು ಒತ್ತಡ. ಹಿರಿಯ ಪರಿಣತರ ಸಕ್ರಿಯ ಪಾತ್ರ. ಕುಟುಂಬದ ಮನೆಯಲ್ಲಿ ದೇವತಾರ್ಚನೆ. ಎಲ್ಲರಿಗೂ ಉತ್ತಮ ಆರೋಗ್ಯ.

Advertisement

ಕನ್ಯಾ: ಪರಿಪೂರ್ಣ ವೃತ್ತಿ ಪರಿಣತಿಯಿಂದ ಸರ್ವವಿಧ ಲಾಭ. ಹೊಸ ಕಾರ್ಯಕ್ಷೇತ್ರದಲ್ಲಿ ಎಲ್ಲರ ಸಹಕಾರ. ಪ್ರತಿಭೆ ಹಾಗೂ ಕಾರ್ಯನಿಷ್ಠೆಗೆ ಮಾಲಕರಿಂದ ಶ್ಲಾಘನೆ. ಹಿರಿಯರ ಆಸ್ತಿಯಲ್ಲಿ ಕೃಷಿ ವಿಸ್ತರಣೆ ಆರಂಭ.

ತುಲಾ: ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಸ್ವಲ್ಪ ಸಡಿಲು. ಸಾಂದರ್ಭಿಕವಾದ ಎಲ್ಲ ಬಗೆಯ ಪರೀಕ್ಷೆಗಳಲ್ಲೂ ವಿಜಯ. ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ. ಲೇವಾದೇವಿ ವ್ಯವಹಾರದಿಂದ ದೂರವಿರಿ. ನ್ಯಾಯಾ ಲಯದಲ್ಲಿರುವ ಆಸ್ತಿ ವ್ಯಾಜ್ಯದಲ್ಲಿ ವಿಜಯ.

ವೃಶ್ಚಿಕ: ಎಲ್ಲ ಬಗೆಯ ಪರಿಸ್ಥಿತಿಗಳಲ್ಲೂ ಅನುಕೂಲದ ಪರಿಣಾಮ. ಉದ್ಯೋಗಸ್ಥರ ಸ್ಥಾನ ಗೌರವಕ್ಕೆ ಹಾನಿ ಇಲ್ಲ. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ ಕೊಂಚ ದೂರ. ರಾಜಕಾರಣಿ ಗಳಿಗೆ ಬಿಗಿಯಾದ ಇಕ್ಕಟ್ಟಿನ ಪರಿಸ್ಥಿತಿ.

ಧನು: ನಿರಂತರ ಜನ್ಮಜಾತ ಉದ್ಯಮಶೀಲತೆಗೆ ಸಹಚರರ ಮೆಚ್ಚುಗೆ. ಪರಿಸರದ ಸ್ವರೂಪ ಬದಲಾವಣೆಗೆ ಆದ್ಯತೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ. ಮಕ್ಕಳ ಅಧ್ಯಯನಾಸಕ್ತಿ ಬೆಳೆಸಲು ಪ್ರೋತ್ಸಾಹ.

ಮಕರ: ಸಂದಿಗ್ಧ ಪರಿಸ್ಥಿತಿಗಳಿಂದ ಸದ್ಯಕ್ಕೆ ಮುಕ್ತಿ. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಪರೀಕ್ಷೆಗಳಲ್ಲಿ ವಿಜಯ. ಬಂಧುವರ್ಗದಲ್ಲಿ ವೈಷಮ್ಯ ನಿವಾರಣೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಗೃಹೋಪಯೋಗಿ ಸಾಮಗ್ರಿಗಳ ದುರಸ್ತಿಗೆ ಧನವ್ಯಯ.

ಕುಂಭ: ಮೇಲಿಂದ ಮೇಲೆ ಕಾಡುವ ಹಲವು ಬಗೆಯ ಜವಾಬ್ದಾರಿಗಳು. ಉದ್ಯೋಗಸ್ಥರಿಗೆ ಯಥಾರೀತಿಯ ಅನುಭವ. ಸರಕಾರಿ ನೌಕರರಿಗೆ ಹೆಚ್ಚುವರಿ ಜವಾಬ್ದಾರಿಗಳು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಲ್ಲಿ ಲಾಭ. ಕೃಷಿಕರಿಗೆ ನೂತನ ಬೆಳೆಗಳಲ್ಲಿ ಆಸಕ್ತಿ.

ಮೀನ: ಸಪ್ತಾಹ ಪ್ರಾರಂಭದ ದಿನದ ಹಿತಾನುಭವಗಳ ಮುಂದುವರಿಕೆ. ಉದ್ಯೋಗ ಸ್ಥಾನದಲ್ಲಿ ಸಹಚರರಿಂದ ವಿಶೇಷ ಸಹಾಯ. ಸೇವಾರೂಪದಕಾರ್ಯಗಳು ಸಂಬಂಧಪಟ್ಟವರ ಸಹಕಾರದಿಂದ ಮುನ್ನಡೆಕೊಂಚಕಾಲದಿಂದ ನಿಲ್ಲಿಸಿದ್ದ ಉದ್ಯಮ ಮುಂದುವರಿಕೆ. ದೇವತಾ ಸಾನ್ನಿಧ್ಯಕ್ಕೆ ಭೇಟಿ.ಪರಿಸರ ಸುಧಾರಣ ಕಾರ್ಯಗಳಲ್ಲಿ ಆಸಕ್ತಿ. ಹಿರಿಯರ ಆರೋಗ್ಯದತ್ತ ಗಮನವಿರಲಿ.

Advertisement

Udayavani is now on Telegram. Click here to join our channel and stay updated with the latest news.

Next