Advertisement

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಲಭಿಸಿದ ಸಮಾಧಾನ

07:13 AM Jan 03, 2024 | Team Udayavani |

ಮೇಷ: ದಿನಾರಂಭದಲ್ಲಿ ಸ್ವಲ್ಪ ಲಾಭ, ಬಳಿಕ ಸ್ವಲ್ಪನಷ್ಟದ ಅನುಭವ. ಉದ್ಯೋಗ ಸ್ಥಾನದಲ್ಲಿ ಕೊಂಚ ಅಹಿತ. ವ್ಯವಹಾರ ವಿಸ್ತರಣೆಗೆ ಪಾಲುದಾರರ ಅನುಮೋದನೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಯಲ್ಲಿ ಎಚ್ಚರ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.

Advertisement

ವೃಷಭ: ಸಮಗ್ರ ಅಭಿವೃದ್ಧಿಗೆ ಸವಿವರ ಚಿಂತನೆ. ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ ಉದ್ಯೋಗಸ್ಥರಿಗೆ ಪ್ರಶಂಸೆ ಉದ್ಯಮಗಳ ಬೆಳವಣಿಗೆ ಅಬಾಧಿತ. ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಗೆ ಪ್ರೋತ್ಸಾಹ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ.

ಮಿಥುನ: ಚಿಂತಾಮುಕ್ತರಾದರೆ ತಾನಾಗಿ ಆರೋಗ್ಯ ವೃದ್ಧಿ. ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ ಲಭಿಸಿದ ಸಮಾಧಾನ. ಕೃಷಿ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು ಯಶಸ್ವಿ. ಉದ್ಯಮಿಗಳಿಗೆ ಕೊಂಚ ಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳಿಂದ ಬಿಡುಗಡೆ.

ಕರ್ಕಾಟಕ: ಕಾರ್ಯಸಾಮರ್ಥ್ಯದ ಪೂರ್ಣ ಉಪಯೋಗಕ್ಕೆ ಅವಕಾಶ. ಉದ್ಯಮದ ಯಜಮಾನರು ಮತ್ತು ನೌಕರರ ನಡುವೆ ಸಾಮರಸ್ಯ ವೃದ್ಧಿ. ಪ್ರಾಪ್ತ ವಯಸ್ಕರಿಗೆ ಕಂಕಣ ಭಾಗ್ಯ. ವ್ಯವಹಾರದ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ ಸಂಭವ.

ಸಿಂಹ: ನಿಯೋಜಿತ ಕಾರ್ಯಗಳನ್ನು ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿಯೊಂದಿಗೆ ಹೊಸ ಖಾತೆ ನಿರ್ವಹಣೆಗೆ ಸಜ್ಜು. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ ನಿವಾರಣೆ. ಮನೆಯಲ್ಲಿ ಸರ್ವರಿಗೂ ಆರೋಗ್ಯ ವೃದ್ಧಿ. ಹತ್ತಿರದ ದೇವಾಲಯಕ್ಕೆ ಭೇಟಿ.

Advertisement

ಕನ್ಯಾ: ಒಪ್ಪಿಸಲಾದ ಕಾರ್ಯಗಳನ್ನು ಸಕಾಲದಲ್ಲಿ ಮಾಡಿ ಮುಗಿಸಿದ ಸಮಾಧಾನ. ಉದ್ಯೋಗದಲ್ಲಿ ಶಿಸ್ತಿನ ಕೆಲಸದಿಂದ ಗೌರವ. ಸರಕಾರಿ ಅಧಿಕಾರಿಗಳಿಗೆ ಅಧಿಕ ಕೆಲಸದ ಹೊರೆ. ಬಂಧುಗಳ ಮನೆಯಲ್ಲಿ ವಿಶೇಷತೆ, ಮಗಳ ಮನೆಯಲ್ಲಿ ದೇವತಾ ಕಾರ್ಯ.

ತುಲಾ: ದೇಹಕ್ಕೆ ಎರಗಿದ ಹಠಾತ್‌ ತೊಂದರೆ ಯಿಂದ ಸ್ವಲ್ಪ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ಹಗುರ ಕೆಲಸವಿದ್ದರೂ ಮನೆ ಕೆಲಸದಿಂದ ಬಿಡುಗಡೆ ಇಲ್ಲ. ಹೊಸಬರಿಗೆ ಕೆಲಸದಲ್ಲಿ ಮಾರ್ಗದರ್ಶನ ಮಾಡುವ ಅವಕಾಶ ಪ್ರಾಪ್ತಿ.

ವೃಶ್ಚಿಕ: ಅಪರೂಪದಲ್ಲಿ ಅನುಭವಕ್ಕೆ ಬಂದ ಸಂತೃಪ್ತಿಯ ದಿನ. ಉದ್ಯೋಗ,ಉದ್ಯಮದಲ್ಲಿ ಅಪೂರ್ವ ಯಶಸ್ಸು. ಸರಕಾರ ಪ್ರಾಯೋಜಿತ ದೀರ್ಘಾ ವಧಿ ಉಳಿತಾಯ ಯೋಜನೆಗಳಲ್ಲಿ ಹೂಡಿಕೆಯಿಂದ ಲಾಭ. ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.

ಧನು: ವೈಯಕ್ತಿಕ ಜೀವನಕ್ಕೆ ಒದಗಿಬಂದ ಭದ್ರತೆ. ಕೃಷಿ ಕ್ಷೇತ್ರದಲ್ಲಿ ಹೊಸ ಬಗೆಯ ಬೆಳೆಗಳ ಪ್ರಯೋಗ ತೃಪ್ತಿಕರ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಆದಾಯ ಹೆಚ್ಚಳ. ಉತ್ತರದ ಕಡೆಯಿಂದ ಶುಭ ಸಮಾಚಾರ. ಬಂಧುಗಳ ಮನೆಯಲ್ಲಿ ವಿವಾಹ ನಿಶ್ಚಯ.

ಮಕರ: ಬಂಧುಗಳ ಮನೆಯಲ್ಲಿ ದೇವತಾ ಕಾರ್ಯ. ಉದ್ಯೋಗ ಸ್ಥಾನದಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಾದ ಒತ್ತಡ. ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್ಸ್‌ ಸಾಧನಗಳ ದುರಸ್ತಿಯವರಿಗೆ ಒಳ್ಳೆಯ ಆದಾಯ. ಹಿರಿಯರ ಆರೋಗ್ಯ ಸುಧಾರಣೆ.

ಕುಂಭ: ಯುವ ಸಹೋದ್ಯೋಗಿಗಳ ಶೀಘ್ರ ಸ್ಪಂದನದಿಂದ ತ್ವರಿತ ಯಶಸ್ಸು. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆಯಿಂದ ಹೆಚ್ಚಿದ ಬೇಡಿಕೆ. ಗೃಹೋತ್ಪನ್ನಗಳಿಗೆ ಗ್ರಾಹಕರ ಮೆಚ್ಚುಗೆ. ಸಂಸಾರದಲ್ಲಿ ಎಲ್ಲರ ನಡುವೆ ಸಾಮರಸ್ಯ ವ್ಯವಹಾರದ ಸಂಬಂಧ ಹತ್ತಿರದ ಊರಿಗೆ ಪ್ರಯಾಣ.

ಮೀನ: ಉದ್ಯೋಗದ ವ್ಯಾಪ್ತಿ ಮತ್ತಷ್ಟು ವಿಸ್ತರಣೆ. ಸರಕಾರಿ ಕಾರ್ಯಾ ಲಯಗಳಲ್ಲಿ ಅನುಕೂಲಕರ ಸ್ಪಂದನ. ಧಾರ್ಮಿಕ ರಂಗದಲ್ಲಿ ಹೊಸ ಹೊಣೆಗಾರಿಕೆ ನಿರ್ವಹಣೆಯಿಂದ ಗೌರವ ವೃದ್ಧಿ. ಅಪೇಕ್ಷಿತ ಕಾರ್ಯಗಳು ಅವಧಿಗೆ ಮೊದಲೇ ಮುಗಿದು ನಿರಾಳ ಮನಸ್ಸು. ಮಕ್ಕಳ ಶಿಕ್ಷಣದಲ್ಲಿ ಪ್ರಗತಿ. ಸಂಸಾರದಲ್ಲಿ ನೆಮ್ಮದಿಯ ಅನುಭವ.

Advertisement

Udayavani is now on Telegram. Click here to join our channel and stay updated with the latest news.

Next