Advertisement

Daily Horoscope: ಉದ್ಯೋಗದಲ್ಲಿ ಕಿರಿಕಿರಿ, ಪ್ರತಿಭೆ ಅನಾವರಣಕ್ಕೆ ಹಿತಶತ್ರುಗಳ ಅಡ್ಡಗಾಲು

07:30 AM Jan 23, 2024 | Team Udayavani |

ಮೇಷ: ಇಷ್ಟಾರ್ಥಸಿದ್ಧಿಯ ದಿನ. ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಉತ್ತೇಜನದ ವಾತಾವರಣ. ಹೂಡಿಕೆಗಳಲ್ಲಿ ಅನಿರೀಕ್ಷಿತ ಲಾಭ. ಸ್ವಂತ ಉದ್ಯಮ ವಿಸ್ತರಣೆ ಪ್ರಕ್ರಿಯೆ ಆರಂಭ. ಪರಿಸರದ ಸಂಭ್ರಮದಲ್ಲಿ ಸೇರ್ಪಡೆ. ಕುಟುಂಬ ಕಲಹ ಶಾಂತವಾಗಿ ಪರಿಹಾರ.

Advertisement

ವೃಷಭ: ಹಳೆಯ ಉದ್ಯಮಗಳು ಯಥಾ ಸ್ಥಿತಿ ಯಲ್ಲಿ. ಹೊಸ ಪಾಲುದಾರಿಕೆ ವ್ಯವಹಾರ ದಲ್ಲಿ ದೊಡ್ಡ ಮೊತ್ತದ ಲಾಭ. ಉದ್ಯೋಗಸ್ಥರಿಗೆ ಶುಭವಾರ್ತೆ. ಸರಕಾರಿ ಯೋಜನೆಗಳ ಶೀಘ್ರ ಲಾಭ ಪಡೆಯುವ ಪ್ರಯತ್ನ ವಿಫ‌ಲ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.

ಮಿಥುನ: ವಿಕಸಿತ ಮನೋಬಲದಿಂದ ಕಾರ್ಯ ಸಾಮರ್ಥ್ಯ ವೃದ್ಧಿ. ಉದ್ಯೋಗದಲ್ಲಿ ಕಿರಿಕಿರಿ, ಪ್ರತಿಭೆ ಅನಾವರಣಕ್ಕೆ ಹಿತಶತ್ರುಗಳ ಅಡ್ಡಗಾಲು. ಧ್ಯಾನ, ಸ್ವಾಧ್ಯಾಯಗಳಲ್ಲಿ ಆಸಕ್ತಿ. ಹಳೆಯ ಗೆಳೆಯರ ಸಂಪರ್ಕದಿಂದ ನವೋತ್ಸಾಹ.

ಕರ್ಕಾಟಕ: ಸತ್ಕಾರ್ಯಗಳಿಗೆ ಮುಂದಾಗಲು ಮನಸ್ಸು ಸಜ್ಜು. ದೇವತಾರ್ಚನೆಯಲ್ಲಿ ಪಾಲುಗೊಂಡು ಧನ್ಯತೆಯ ಭಾವ ವೃದ್ಧಿ. ಉದ್ಯೋಗದಲ್ಲಿ ಆನಂದದ ಅನುಭವ. ಉದ್ಯಮದ ಅಭಿವೃದ್ಧಿಗೆ ಪಾಲುದಾರರೊಂದಿಗೆ ಸಮಾಲೋಚನೆ.

ಸಿಂಹ: ತಾಳ್ಮೆಯಿಂದ ಪರಿಶ್ರಮವನ್ನು ಮುಂದುವರಿಸಿದ್ದಕ್ಕೆ ತಕ್ಕ ಪ್ರತಿಫ‌ಲ ಪ್ರಾಪ್ತಿ. ಹಿತಶತ್ರುಗಳ ಒಳಸಂಚು ವಿಫ‌ಲ. ಉದ್ಯಮದ ಎಲ್ಲ ವಿಭಾಗಗಳಲ್ಲೂ ಸಾರ್ಥಕ ಮುನ್ನಡೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಕೃಷ್ಯುತ್ಪನ್ನಗಳ ಮಾರಾಟದಿಂದ ಮಧ್ಯಮ ಲಾಭ.

Advertisement

ಕನ್ಯಾ: ಇಂದು ಶುಭದಿನ. ಮೇಲಧಿಕಾರಿಗಳಿಂದ ಪ್ರೋತ್ಸಾಹದ ನುಡಿಗಳು. ಅಲ್ಪಾವಧಿಯ ಹೂಡಿಕೆಗಳ ಆಮಿಷದಿಂದ ದೂರವಿರಿ. ಸ್ವಂತ ಉದ್ಯಮದ ಗಾತ್ರವನ್ನು ಕಿರಿಯದಾಗಿಟ್ಟುಕೊಳ್ಳಲು ಪ್ರಯತ್ನಿಸಿರಿ. ಪಿತ್ರಾರ್ಜಿತ ಕೃಷಿಭೂಮಿ ಅಭಿವೃದ್ಧಿಯಿಂದ ಹಿತ.

ತುಲಾ: ಭವಿಷ್ಯದ ಕುರಿತು ವೃಥಾ ಚಿಂತೆ ಮಾಡದಿರಿ. ದೈವಾನುಗ್ರಹ ಉತ್ತಮ. ಬಾಳಸಂಗಾತಿ ಯಿಂದ ಸರ್ವ ಸಹಕಾರ. ಉದ್ಯೋಗದಲ್ಲಿ ಯಥಾಸ್ಥಿತಿ ಮುಂದುವರಿಕೆ. ಸ್ವಂತ ಉದ್ಯಮದ ಸಮಸ್ಯೆ ಪರಿಹಾರ. ಉತ್ಪನ್ನಗಳ ಗುಣಮಟ್ಟ ಏರಿಕೆ.

ವೃಶ್ಚಿಕ: ಕಳೆದುಕೊಂಡದ್ದಕ್ಕಿಂತ ಪಡೆದದ್ದೇ ಹೆಚ್ಚೆಂಬುದು ಮನವರಿಕೆಯಾಗದಾಗ ನಿರಾಶೆ ದೂರ. ಉದ್ಯೋಗದಲ್ಲಿ ಅಗಾಧ ಪ್ರಗತಿಯಾಗದಿದ್ದರೂ ಜೀವನ ನಿರ್ವಹಣೆಗೆ ಕೊರತೆ ಇಲ್ಲ. ಸ್ವಂತ ಉದ್ಯಮ ದೊಂದಿಗೆ ಮಕ್ಕಳ ಉದ್ಯಮವೂ ಅಭಿವೃದ್ಧಿ ಪಥದಲ್ಲಿ.

ಧನು: ನಿಧಾನವಾಗಿ ಸುಧಾರಣೆಯ ಹಾದಿ ಯಲ್ಲಿ ಮುಂದುವರಿಕೆ. ಉದ್ಯೋಗದಲ್ಲಿ ಮುನ್ನಡೆಯಲು ಸಹೋದ್ಯೋಗಿಗಳಿಂದ ಸಹಕಾರ. ಸ್ವಂತ ಉದ್ಯಮ ಸ್ಥಿರವಾಗಿ ಮುನ್ನಡೆ. ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆಯಿಂದ ಲಾಭ.

ಮಕರ: ನಿರಾಶೆಯನ್ನು ದೂರವಿಡುವ ಪ್ರಯತ್ನ ದಲ್ಲಿ ಜಯ. ಉದ್ಯೋಗದಲ್ಲಿ ಒತ್ತಡವಿದ್ದರೂ ನಿಗದಿತ ಸಮಯದಲ್ಲಿ ಕಾರ್ಯಮುಗಿಸಿದ ಸಮಾಧಾನ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ. ವಸ್ತ್ರ, ಉಡುಪು, ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ. ತಾಯಿಯ ಕಡೆಯ ಬಂಧುಗಳ ಆಗಮನ.

ಕುಂಭ: ಕಾರ್ಯಸಾಧನೆಯ ತೃಪ್ತಿ. ಉದ್ಯೋಗ, ವ್ಯವಹಾರಗಳ ಚಿಂತೆ. ಮರು ದಿನದ ಕಾರ್ಯಗಳಿಗೆ ಇಂದೇ ಸಿದ್ಧತೆ. ಮನೆಯಲ್ಲಿ ಶುಭ ಕಾರ್ಯದ ಸಂಭ್ರಮ. ಬಂಧು, ಮಿತ್ರರೊಂದಿಗೆ ಸಮಾಗಮ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.

ಮೀನ: ಉದ್ಯೋಗದಲ್ಲಿ ಅಪೂರ್ವ ಯಶಸ್ಸು. ಸರಕಾರಿ ನೌಕರರ ಪೂರ್ಣ ಸಹಕಾರ. ದೀರ್ಘ‌ಕಾಲದಿಂದ ಸಂಪರ್ಕ ಇಲ್ಲದಿದ್ದ ಬಂಧುಗಳೊಂದಿಗೆ ಪುನರ್ಮಿಲನ. ಸೋದರಿಯ ಮಗನಿಗೆ ಉದ್ಯೋಗ ಪ್ರಾಪ್ತಿ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಮರುದಿನದ ಮುಖ್ಯ ವ್ಯವಹಾರದ ಚಿಂತನೆ. ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next