Advertisement

ರಾಶಿ ಫಲ; ಎಲ್ಲರೂ ಶ್ಲಾಘಿಸುವಂತಹ ದಿನಚರಿ, ಅವಿವಾಹಿತರಿಗೆ ವಿವಾಹ ಭಾಗ್ಯ

07:10 AM Jan 19, 2023 | Team Udayavani |

ಮೇಷ: ಅಧ್ಯಯನಶೀಲರಿಗೆ, ಸರ್ಕಾರಿ ವೃತ್ತಿಪರರಿಗೆ, ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ. ಅನಾಯಾಸ ಧನಾಗಮನ. ಗುರುಹಿರಿಯರ ಉತ್ತಮ ಸಹಕಾರ. ಅವಿವಾಹಿತರಿಗೆ ಯೋಗ್ಯ ವಧು ವರ ಪ್ರಾಪ್ತಿ. ಮನೋರಂಜನೆಯಿಂದ ಸಮಯ ಕಳೆಯುವಿಕೆ.

Advertisement

ವೃಷಭ: ಸತ್ಕಾರ್ಯಕ್ಕೆ ಧನ ವ್ಯಯ. ದಾಂಪತ್ಯ ಸುಖ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಸಹೋದರಾದಿ ವರ್ಗದವರಿಂದ ಸುವಾರ್ತೆ. ಉದ್ಯೋಗ ವ್ಯವಹಾರಗಳಲ್ಲಿ ಕೀರ್ತಿ ಸಂಪಾದನೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಫ‌ಲತೆ.

ಮಿಥುನ: ಉತ್ತಮ ಜನ ಸಂಪರ್ಕ. ಎಲ್ಲರೂ ಶ್ಲಾಘಿಸುವಂತಹ ದಿನಚರಿ. ಗೌರವ ಆದರಗಳು ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರ ಪ್ರಯಾಣ. ನಷ್ಟ ವಸ್ತುಗಳಿಗಾಗಿ ಪುನಃ ಪ್ರಯತ್ನಿಸಿದರೆ ಸಿಗುವ ಸಮಯ. ದಂಪತಿಗಳಲ್ಲಿ ಪರಸ್ಪರ ಪ್ರೀತಿ ಅನುರಾಗ ವೃದ್ಧಿ.

ಕರ್ಕ: ಉತ್ತಮ ಯೋಗ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರಿಂದ ಕೀರ್ತಿ ಜನಮನ್ನಣೆ ಪ್ರಾಪ್ತಿ. ಆರೋಗ್ಯ ವೃದ್ಧಿ. ನಿರೀಕ್ಷಿತ ಧನ ಸಂಚಯನ. ಮಾತಿನಲ್ಲಿ ತಾಳ್ಮೆ ಪ್ರಾಮಾಣಿಕತೆ ಇರಲಿ. ಗುರು ಹಿರಿಯರಲ್ಲಿ ಭಯ ಭಕ್ತಿಯ ನಡವಣೆಯಿಂದ ಗೌರವ ಪ್ರಾಪ್ತಿ.

ಸಿಂಹ: ಆರೋಗ್ಯ ಗಮನಿಸಿ. ದೂರದ ವ್ಯವಹಾರ ನಿರ್ವಹಿಸುವಾಗ ಅನಗತ್ಯ ಖರ್ಚಿನ ಬಗ್ಗೆ ಗಮನಹರಿಸಿ. ಬಂಧುಮಿತ್ರರ ಸಹಕಾರ. ಅಧ್ಯಯನದಲ್ಲಿ ಪ್ರಗತಿ. ಹೊಸ ಚಿಂತನೆಗಳಿಗೆ ಆದ್ಯತೆ. ದಾಂಪತ್ಯ ತೃಪ್ತಿಕರ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

Advertisement

ಕನ್ಯಾ: ಗೃಹ ವಾಹನ ಆಸ್ತಿ ವಿಚಾರಗಳಲ್ಲಿ ಸಂತೋಷ. ಹೂಡಿಕೆಗಳಲ್ಲಿ ಆಸಕ್ತಿ. ಗೃಹಉಪಯೋಗಿ ಸಲಕರಣೆಗಳ ಖರೀದಿ. ಬಂಧುಮಿತ್ರರ ಅವಲಂಬನೆ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲದಿಂದ ಮನಃ ತೃಪ್ತಿ.

ತುಲಾ: ದೇವತಾ ಕಾರ್ಯಗಳಲ್ಲಿ ತತ್ಪರತೆ. ಭಾಗ್ಯ ವೃದ್ಧಿ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಕೀರ್ತಿ ಸ್ಥಾನ ಸುಖಾದಿ ಪ್ರಾಪ್ತಿ. ಸಾಂಸಾರಿಕ ಸುಖ ವೃದ್ಧಿ. ಆಸ್ತಿ ವಿಚಾರದಲ್ಲಿ ಮುನ್ನಡೆ. ನೂತನ ಬಂಧುಮಿತ್ರರ ಸಹಕಾರ.

ವೃಶ್ಚಿಕ: ಬಹು ಐಶ್ವರ್ಯ ಸಿಗುವ ಸಂಭವ. ರಾಜಕೀಯ ಸರಕಾರೀ ಕಾರ್ಯಗಳಲ್ಲಿ ಮುನ್ನಡೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ಸಾಧಿಸಿದರಿಂದ ತೃಪ್ತಿ. ದೀರ್ಘ‌ ಸಂಚಾರ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಮೇಲಧಿಕಾರಿಗಳ ಸಹಕಾರ ಪ್ರೋತ್ಸಾಹ ಲಭ್ಯ.

ಧನು: ಉತ್ತಮ ಆರೋಗ್ಯ. ತಾಳ್ಮೆ ಸಹನೆಯಿಂದ ನಿರ್ವಹಿಸಿದ ಕಾರ್ಯದಿಂದ ಕೀರ್ತಿ ಯಶಸ್ಸು ಲಭಿಸಿದ್ದರಿಂದ ಸಂತೋಷ. ನಿರಂತರ ಧನಾರ್ಜನೆ. ಗುರುಹಿರಿಯರ ಸಹಕಾರ ಪ್ರೋತ್ಸಾಹದಿಂದ ಹೆಚ್ಚಿದ ಸ್ಥಾನಮಾನ. ದಾಂಪತ್ಯ ತೃಪ್ತಿಕರ.

ಮಕರ: ತಂದೆ ತಾಯಿಯಿಂದ ಸುಖ ಪ್ರಾಪ್ತಿ. ಬಂಧುಮಿತ್ರರ ಆಗಮನದಿಂದ ಗೃಹದಲ್ಲಿ ಸಂತಸದ ವಾತಾವರಣ. ಭೋಜನಾದಿ ಸಂಭ್ರಮ. ಆಸ್ತಿ ವಿಚಾರದಲ್ಲಿ ಮುನ್ನಡೆ. ದಾಂಪತ್ಯ ತೃಪ್ತಿಕರ. ಪಾಲುದಾರಿಕಾ ವ್ಯವಹಾರದಲ್ಲಿ ಹೆಚ್ಚಿದ ಪ್ರಗತಿ.

ಕುಂಭ: ನೂತನ ಮಿತ್ರರ ಭೇಟಿ. ಧಾರ್ಮಿಕ ಚಟುವಟಿಕೆಗಳಿಗಾಗಿ ಪ್ರಯಾಣ. ದೂರದ ವ್ಯವಹಾರದಲ್ಲಿ ಹೆಚ್ಚಿದ ವರಮಾನ. ಪಾಲುದಾರಿಕಾ ಕ್ಷೇತ್ರದಲ್ಲಿ ಗೌರವ ವೃದ್ಧಿ. ಆರೋಗ್ಯದಲ್ಲಿ ಉತ್ತಮ ಬದಲಾವಣೆ.

ಮೀನ: ದೂರ ಪ್ರಯಾಣ. ಜನಪದದ ಸಹಕಾರ ಸಹಾಯದಿಂದ ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಅನಿರೀಕ್ಷಿತ ಧನಾಗಮನ. ಅವಿವಾಹಿತರಿಗೆ ವಿವಾಹ ಭಾಗ್ಯ. ವಿದ್ಯಾರ್ಥಿಗಳಿಗೆ ಸರ್ವ ಸೌಲಭ್ಯ ಪ್ರಾಪ್ತಿ.

Advertisement

Udayavani is now on Telegram. Click here to join our channel and stay updated with the latest news.

Next