Advertisement

ರಾಶಿ ಫಲ; ಕಾರ್ಯ ಒತ್ತಡವಿದ್ದರೂ ವಿದ್ಯಾರ್ಥಿಗಳಿಗೆ ಉದ್ಯೋಗಸ್ಥರಿಗೆ ಉತ್ತಮ ದಿನ

07:17 AM Jan 16, 2023 | Team Udayavani |

ಮೇಷ: ಗುರು ಹಿರಿಯರಲ್ಲಿ ಬೇಸರ ಬೇಡ. ವಿದ್ಯಾರ್ಥಿಗಳಿಗೆ ಉದ್ಯೋಗಿಗಳಿಗೆ ಉತ್ತಮ ಅವಕಾಶ. ಪ್ರಯಾಣದಿಂದ ಸುಖ. ಧನ ಲಾಭ. ಮನೆಯಲ್ಲಿ ಸಂತಸದ ವಾತಾವರಣ. ಉತ್ತಮ ಸ್ಥಾನಮಾನ ಗೌರವ ಪ್ರಾಪ್ತಿ.

Advertisement

ವೃಷಭ: ವಿದ್ಯಾರ್ಥಿಗಳಿಗೆ ಅನುಕೂಲಕರ. ಮಾತಿನಲ್ಲಿ ಎಚ್ಚರ ವಹಿಸಿ. ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡಬೇಡಿ. ಧೈರ್ಯದಿಂದ ಕಾರ್ಯ ಸಿದ್ಧಿ. ಧನಾಗಮನಕ್ಕೆ ಕೊರತೆ ಇರದು. ವಿದ್ಯಾರ್ಥಿಗಳಿಗೆ ಪ್ರಯತ್ನ ಪಟ್ಟರೆ ಶುಭ ಫ‌ಲ.

ಮಿಥುನ: ಚಟುವಟಿಕೆಯಿಂದ ಕೂಡಿದ ದಿನ. ಸಾಮಾಜಿಕ ಜನಪರ ಕಾರ್ಯದಲ್ಲಿ ತೊಡಗುವುದರಿಂದ ಗೌರವ. ಸುಖ ಸಂತೋಷ ವೃದ್ಧಿ. ಕಾರ್ಯ ಒತ್ತಡವಿದ್ದರೂ ವಿದ್ಯಾರ್ಥಿಗಳಿಗೆ ಉದ್ಯೋಗಸ್ಥರಿಗೆ ಉತ್ತಮ. ಫ‌ಲಿತಾಂಶ ಸಿಗುವ ಸಮಯ.

ಕರ್ಕ: ಆರೋಗ್ಯ ವಿಚಾರದಲ್ಲಿ ಉದಾಸೀನತೆ ಬೇಡ. ತಾಳ್ಮೆ ಕಳೆದುಕೊಳ್ಳದೇ ನೇರ ಸಾಮಾಜಿಕ ಜನಪರ ವ್ಯವಹಾರ ಕೆಲಸ ಕಾರ್ಯಗಳಿಂದ ಗೌರವ ಪ್ರಾಪ್ತಿ. ವಾಹನ ಗೃಹೋಪಕರಣ ವಸ್ತುಗಳಿಂದ ಲಾಭ. ಹಿರಿಯರ ಮಾರ್ಗದರ್ಶನದಿಂದ ಲಾಭ.

ಸಿಂಹ: ತೀಕ್ಷ್ಣ ಗುರಿ ನಡೆಯಿಂದ ದಿನಚರಿ ಆರಂಭಿಸಬೇಡಿ. ತಾಳ್ಮೆ ಇರಲಿ. ಕೋರ್ಟು ರಾಜಕೀಯ ಕ್ಷೇತ್ರದಲ್ಲಿ ಅನುಕೂಲ. ಚಿಕ್ಕ ಪ್ರಯಾಣದಿಂದ ಸಂತಸ. ಉದ್ಯೋಗದಿಂದ ಧನಾಗಮನದಲ್ಲಿ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸ್ಥಾನಮಾನ ವೃದ್ಧಿ.

Advertisement

ಕನ್ಯಾ: ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಅನಿರೀಕ್ಷಿತ ಸ್ಥಾನ ಗೌರವದ ಸುಖ. ಹಣಕಾಸಿನ ವಿಚಾರದಲ್ಲಿ ಹಿಡಿತವಿರಲಿ. ಹಿರಿಯರ ಆರೋಗ್ಯದ ವಿಚಾರದಲ್ಲಿ ಗಮನವಿರಲಿ. ಮನೆಯಲ್ಲಿ ಸಂಭ್ರಮಾಚರಣೆ.ದೇವತಾ ಕಾರ್ಯಗಳಿಂದ ಶುಭ.

ತುಲಾ: ಉದ್ಯೋಗದಲ್ಲಿ ಸ್ಥಾನಮಾನ ವೃದ್ಧಿ, ಧನ ಸಂಪಾದನೆ ವಿಚಾರದಲ್ಲಿ ಸ್ವಲ್ಪ ಅಭಿವೃದ್ಧಿ. ಬಂದ ಅವಕಾಶವನ್ನು ಉಪಯೋಗಿಸಿ ನಿಮ್ಮ ವಿನಯ ನಮ್ರತೆಯ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಸಂಪಾದಿಸುವ ದಿನ. ದಂಪತಿಗಳಿಗೆ ಉತ್ತಮ ಆರೋಗ್ಯ.

ವೃಶ್ಚಿಕ: ಗುರು ಹಿರಿಯರಿಂದ ಅತ್ಯುತ್ತಮ ಮಾರ್ಗದರ್ಶನ ಸಲಹೆ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ತಾಳ್ಮೆಯ ಪರೀಕ್ಷೆ‌. ಪ್ರಯಾಣ. ಉದ್ಯೋಗದಲ್ಲಿ ಪ್ರಗತಿ. ಧನ ಸಂಪಾದನೆ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ. ಮಾನಸಿಕ ಒತ್ತಡ.

ಧನು: ವಿಚಾರ ವಿನಿಮಯದಲ್ಲಿ ಚರ್ಚೆಗೆ ಅವಕಾಶ ಕೊಡಬೇಡಿ. ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆರ್ಥಿಕ ಹಿಡಿತವಿರಲಿ. ಸಣ್ಣ ಪ್ರಯಾಣದಿಂದ ಲಾಭ. ಜಲೋತ್ಪನ್ನ ವ್ಯವಹಾರ ನಡೆಸುವವರಿಗೆ ಉತ್ತಮ ಲಾಭ.

ಮಕರ: ಆರೋಗ್ಯದಲ್ಲಿ ನಿರ್ಲಕ್ಷ್ಯ ಬೇಡ. ಪಾಲುದಾರಿಕಾ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಅಧಿಕ ಶ್ರಮವಿದ್ದರೂ ಅಂತಿಮವಾಗಿ ಗುರಿ ಸಾಧಿಸುವಿರಿ. ಭೂಮ್ಯಾದಿ ವಿಚಾರಗಳಲ್ಲಿ ಚರ್ಚೆ.

ಕುಂಭ: ಅನಿರೀಕ್ಷಿತ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಧನಾಗಮನಕ್ಕೆ ಕೊರತೆ ಇರದು. ಮಿತ್ರರಲ್ಲಿ ನಿಷ್ಠುರ ಬೇಡ. ಗೃಹದಲ್ಲಿ ಅಶಾಂತಿಗೆ ಅವಕಾಶ ನೀಡದಿರಿ. ದಂಪತಿಗಳು ಸಾಮರಸ್ಯ ಕಾಪಾಡಿ.

ಮೀನ: ವಿದ್ಯಾರ್ಥಿಗಳು ಆತುರದ ನಿರ್ಧಾರ ಮಾಡದಿರಿ. ಆರೋಗ್ಯದ ಕಡೆಗೆ ಗಮನಹರಿಸಿ. ಮಾನಸಿಕ ಗೊಂದಲಕ್ಕೆ ಅವಕಾಶ ನೀಡದಿರಿ. ವಿಶ್ರಾಂತಿಯಿಂದ ದಿನ ಕಳೆಯಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವುದು.

Advertisement

Udayavani is now on Telegram. Click here to join our channel and stay updated with the latest news.

Next