Advertisement

Daily Horoscope: ದೃಢಕಾಯ, ದೃಢ ಮನಸ್ಸು ಇವೆರಡರಿಂದ ಕಾರ್ಯ ನಿರ್ವಹಣೆ ಸುಲಭ

07:28 AM Jan 15, 2024 | Team Udayavani |

ಮೇಷ: ದೇವಾಲಯಗಳಲ್ಲಿ ಉತ್ಸವ, ಊರುಗಳಲ್ಲಿ ಹಬ್ಬದ ವಾತಾವರಣ. ಉದ್ಯೋಗಕ್ಕೆ ವಿರಾಮ, ಚಿಂತನೆಗೆ ವಿರಾಮ ಇಲ್ಲ. ಉದ್ಯೋಗ ಸ್ಥಾನದಲ್ಲಿ ಮಾಮೂಲು ಕೆಲಸ. ಮುಂದುವರಿದ ಉದ್ಯಮದ ವ್ಯವಹಾರಗಳು.

Advertisement

ವೃಷಭ: ಅನೇಕ ಬಗೆಯ ಸಂತೋಷದ ಘಟನೆಗಳಿಗೆ ಸಾಕ್ಷಿಯಾಗುವಿರಿ. ಸಹೋ ದ್ಯೋಗಿಗಳ ಸಹಕಾರದಿಂದ ಕಾರ್ಯ ಸುಗಮ. ಉದ್ಯಮಕ್ಕೆ ಹೊಸ ಪರಿಣತರ ಸೇರ್ಪಡೆ. ಸೌಲಭ್ಯಗಳ ಹೆಚ್ಚಳದಿಂದ ನೌಕರರಿಗೆ ಹರ್ಷ.

ಮಿಥುನ: ಭಗವತ್‌ ಕೃಪೆಯಿಂದ ಎಲ್ಲ ಜಟಿಲ ಸಮಸ್ಯೆಗಳು ಪರಿಹಾರ. ಆಪ್ತರು ಮತ್ತು ಸಹೋದ್ಯೋಗಿಗಳ ಪ್ರೋತ್ಸಾಹದ ಮಾತುಗಳಿಂದ ಮುನ್ನುಗ್ಗುವ ಧೈರ್ಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸರಕಾರಿ ಕಚೇರಿಗಳಲ್ಲಿ ಕಾರ್ಯ ವಿಳಂಬ.

ಕರ್ಕಾಟಕ: ದಿಟ್ಟ, ಸರಳ ವರ್ತನೆಯಿಂದ ಗೌರವಾದರ ವೃದ್ಧಿ. ಸಾಮಾಜಿಕ ರಂಗದಲ್ಲಿ ಸಜ್ಜನಿಕೆಗೆ ಯೋಗ್ಯ ಗೌರವ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಕೆಲಸದ ತರಾತುರಿ. ಲೇವಾದೇವಿ ವ್ಯವಹಾರ ಕೈಹಿಡಿಯದು.

ಸಿಂಹ: ದೃಢಕಾಯ, ದೃಢ ಮನಸ್ಸು ಇವೆರಡರಿಂದ ಕಾರ್ಯ ನಿರ್ವಹಣೆ ಸುಲಭ. ಉತ್ಸವದ ವಾತಾವರಣದಲ್ಲಿ ದೈನಂದಿನ ಕಾರ್ಯ. ಲೇವಾದೇವಿ ವ್ಯವಹಾರದಲ್ಲಿ ಸಾಧಾರಣ ಲಾಭ. ಅವಿವಾಹಿತರಿಗೆ ಶೀಘ್ರ ವಿವಾಹ.

Advertisement

ಕನ್ಯಾ: ಚಿತ್ತಚಾಂಚಲ್ಯದಿಂದ ಬಿಡುಗಡೆ. ಹೊಸ ಉದ್ಯೋಗ ಲಭಿಸುವ ಸಾಧ್ಯತೆ. ಕೌಟುಂಬಿಕ ವಿವಾದಗಳಿಂದ ದೂರವಿರಿ. ಪಶುಪಾಲನೆ, ಹೈನುಗಾರಿಕೆಯಿಂದ ಪ್ರಯೋಜನ. ಸಕಾಲಕ್ಕೆ ಒದಗಿ ಬರುವ ಸಹಾಯ.

ತುಲಾ: ಭಗವತ್‌ ಶಕ್ತಿಯ ಅನುಗ್ರಹದಿಂದ ಎಲ್ಲ ಕಾಟಗಳ ನಿವಾರಣೆ. ಹಿರಿಯರಿಂದ ನೈತಿಕ ಧೈರ್ಯ ನೀಡಿಕೆ. ಆಪ್ತಮಿತ್ರರ ಭೇಟಿಯಿಂದ ಸಮಾಧಾನ. ಗೃಹೋದ್ಯಮದ ಕ್ಷೇತ್ರಕ್ಕೆ ಪದಾರ್ಪಣೆಯಿಂದ ಲಾಭ.

ವೃಶ್ಚಿಕ: ಸಮಾಜಕ್ಕೆ ಮಾದರಿಯಾಗಿರುವ ಬದುಕು. ಬಂಧುಗಳಿಗೆ ಅಪೇಕ್ಷಿತ ಸಹಾಯ. ಉದ್ಯೋಗ ಸ್ಥಾನದಲ್ಲಿ ಉತ್ಸಾಹದ ವಾತಾವರಣ. ಮನೆಯಲ್ಲಿ ದೇವತಾಕಾರ್ಯ. ಆಸ್ಪತ್ರೆ, ಅನಾಥಾಲಯಗಳಿಗೆ ಭೇಟಿ. ಭಜನೆ, ಸತ್ಸಂಗದಲ್ಲಿ ಆಸಕ್ತಿ. ಸಂಸಾರದಲ್ಲಿ ಎಲ್ಲರಿಗೂ ಆರೋಗ್ಯ ಭಾಗ್ಯ.

ಧನು: ಬದುಕಿಗೊಂದು ಸ್ಪಷ್ಟ ಮಾರ್ಗದ ಅರಸುವಿಕೆಯಲ್ಲಿ ಯಶಸ್ಸು. ಪರೋಪಕಾರ ಗುಣದಿಂದ ಪ್ರೀತ್ಯಾದರ ವೃದ್ಧಿ. ಜೀವನಕ್ಕೆ ಆಧಾರವಾದ ಸಣ್ಣ ಉದ್ಯಮ ಪ್ರಗತಿಯಲ್ಲಿ. ನ್ಯಾಯಾಲಯದಲ್ಲಿರುವ ವ್ಯಾಜ್ಯ ತೀರ್ಮಾನ ವಿಳಂಬ.ಇಷ್ಟದೇವರ ಪೂಜೆ.

ಮಕರ: ಕುಟುಂಬದ ಆಸ್ತಿ ವಿವಾದ ಪರಿಹಾರ . ಹಬ್ಬದ ವಾತಾವರಣದಲ್ಲಿ ಕಡಿಮೆಯಾದ ಕೆಲಸದ ಒತ್ತಡ. ಹೊಸ ಉದ್ಯೋಗ ಅರಸುವ ಕಾರ್ಯ ಮುಂದುವರಿಕೆ. ಸ್ನಾತಕೋತ್ತರ ಶಿಕ್ಷಣ ಮುಂದುವರಿಸಲು ಅಚಲ ನಿರ್ಧಾರ.

ಕುಂಭ: ಹೊಸ ಉದ್ಯಮ ಆರಂಭಿಸಲು ಪಾಲುದಾರರ ಪ್ರಸ್ತಾವ. ಉದ್ಯೋಗ ಸ್ಥಾನದಲ್ಲಿ ಮತ್ತೂಮ್ಮೆ ನಿಯೋಜನೆ.ಉದ್ಯಮದ ಹೊಸ ಉತ್ಪನ್ನಗಳ ಪ್ರಚಾರಕ್ಕೆ ಕ್ರಮ. ಬರಬೇಕಾದ ಬಾಕಿ ವಸೂಲಿಯ ಚಿಂತೆ. ಸಮಾಜಸೇವೆ ಮುಂದುವರಿಕೆ.

ಮೀನ: ಹಬ್ಬದ ವಾತಾವರಣದಲ್ಲಿ ನಿಧಾನಗತಿಯಲ್ಲಿ ಕಾರ್ಯ ನಿರ್ವಹಣೆ.ಸರಕಾರಿ ನೌಕರರಿಂದ ಆರಾಮದ ಮನೋಭಾವದಲ್ಲಿ ಕಾರ್ಯ ನಿರ್ವಹಣೆ. ಸಮಾಜದ ಹಿರಿಯರ ಸಮ್ಮಾನಕ್ಕೆ ಸಿದ್ಧತೆ. ಕೃಷಿಭೂಮಿಯಲ್ಲಿ ನೀರಾವರಿಗೆ ಸ್ವಂತ ವ್ಯವಸ್ಥೆ ಮಾಡುವ ತಯಾರಿ. ಸಮಾಜ ಬಾಂಧವರ ಸಹಾಯದ ಕರೆಗೆ ಸ್ಪಂದನ.

Advertisement

Udayavani is now on Telegram. Click here to join our channel and stay updated with the latest news.

Next