Advertisement

ರಾಶಿ ಫಲ; ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ, ಆರೋಗ್ಯ ಗಮನಿಸಿ

07:15 AM Jan 14, 2023 | Team Udayavani |

ಮೇಷ: ಅನಿರೀಕ್ಷಿತ ಧನಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಪರರಿಂದ ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಬರುವುದು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಉತ್ತಮ ಜವಾಬ್ದಾರಿಯುತ ವಾಕ್‌ಚತುರತೆ. ಗುರುಹಿರಿಯರಿಂದ ಸಂತೋಷ.

Advertisement

ವೃಷಭ: ದೂರದ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗುರಿ ಸಾಧನೆಯಿಂದ ನೆಮ್ಮದಿ. ಉತ್ತಮ ಧನಾರ್ಜನೆ. ಬಂಧು ಮಿತ್ರರ ಸಹಕಾರ. ದಾಂಪತ್ಯದಲ್ಲಿ ಪ್ರೀತಿ ಅನುರಾಗ ವೃದ್ಧಿ. ಆಸ್ತಿ ವಿಚಾರದಲ್ಲಿ ಪರಿಶ್ರಮದಿಂದು ಮುನ್ನಡೆ.

ಮಿಥುನ: ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಸ್ವಚ್ಛತೆಗೆ ಆದ್ಯತೆ ನೀಡಿ. ದೂರದ ವ್ಯವಹಾರಗಳಲ್ಲಿ, ಪಾಲುದಾರಿಕಾ ವೃತ್ತಿಯಲ್ಲಿ ಪ್ರಗತಿ. ನಿರೀಕ್ಷಿತ ಧನಾಗಮನ. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ನಿಮಿತ್ಯ ಶ್ರಮ.

ಕರ್ಕ: ಹೆಚ್ಚಿನ ಸ್ಥಾನ ಗೌರವಕ್ಕಾಗಿ ಪರಿಶ್ರಮ. ಅಗತ್ಯಕ್ಕೂ ಮೀರಿದ ಜವಾಬ್ದಾರಿಯಿಂದ ಮಾನಸಿಕ ಒತ್ತಡ ಎದುರಾದೀತು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗುರು ಸಮಾನರಿಂದ ಲಾಭ. ಭೂಮ್ಯಾದಿ ವ್ಯವಹಾರಗಳಲ್ಲಿ ಅಡತಡೆ. ಅನಗತ್ಯ ಖರ್ಚು ಎದುರಾದೀತು.

ಸಿಂಹ: ನಿರೀಕ್ಷೆಗೂ ಮೀರಿದ ಧನಲಾಭ. ಉತ್ತಮ ವಾಕ್‌ಚಾತುರ್ಯದಿಂದ ಕೂಡಿದ ಕಾರ್ಯವೈಖರಿ. ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡುವುದರಿಂದ ಗೌರವ ಆದರಗಳು ವೃದ್ಧಿ. ಗುರು ಹಿರಿಯರ ಆರೋಗ್ಯ ಗಮನಿಸಿ. ದಾಂಪತ್ಯ ಸುಖ ಮಧ್ಯಮ.

Advertisement

ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರ ಅವಲಂಬನೆ ಮಾರ್ಗದರ್ಶನದ ಲಾಭ. ದಾಂಪತ್ಯ ಸುಖ ತೃಪ್ತಿದಾಯಕ. ಮಿತ್ರರ ಸಹಾಯದಿಂದ ಕೆಲಸಗಳಲ್ಲಿ ಪ್ರಗತಿ.

ತುಲಾ: ಜ್ಞಾನ, ವಿವೇಕ, ನಿಷ್ಠೆಯಿಂದ ಕೂಡಿದ ಧಾರ್ಮಿಕ ಚಟುವಟಿಕೆಗಳು. ಗುರುಹಿರಿಯರ ಸೂಕ್ತ ಮಾರ್ಗದರ್ಶನದ ಲಾಭ.ಮಾನಸಿಕ ನೆಮ್ಮದಿ. ತೃಪ್ತಿದಾಯಕ ದಿನ. ಭೂಮಿ ವಾಹನ ಆಸ್ತಿ ವಿಚಾರದಲಿಲ ಪ್ರಗತಿ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.

ವೃಶ್ಚಿಕ: ಆರೋಗ್ಯ ಗಮನಿಸಿ. ದೈಹಿಕವಾಗಿ ಶ್ರಮ ವಹಿಸದೇ ಕಾರ್ಯಪ್ರವೃತ್ತರಾಗಿ. ದೀರ್ಘ‌ ಪ್ರಯಾಣ ಸಂಭವ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಅನಗತ್ಯ ಅಧಿಕ ಚಿಂತಿಸದಿರಿ. ಪರರಿಗೆ ಜವಾಬ್ದಾರಿ ವಹಿಸುವಾಗ ತಿಳಿದು ನಿರ್ಣಯಿಸಿರಿ.

ಧನು: ನಿರೀಕ್ಷಿತ ಸ್ಥಾನ ಮಾನ ಗೌರವಾದಿ ಸಿಕ್ಕಿದ ಸಂತೋಷ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರಿಕಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ. ದಂಪತಿ ಗಳಿಂದ ಸಾಮರಸ್ಯ ಕಾಪಾಡಲು ಅಧಿಕ ಶ್ರಮ ಎದುರಾಗ ದೀತು. ಹಣಕಾಸಿನ ವಿಚಾರದಲ್ಲಿ ಕೊರತೆ ಆಗದು.

ಮಕರ: ಪರರಿಗೆ ಸಹಾಯ ಮಾಡುವಾಗ ಪೂರ್ವಪರ ವಿಚಾರ ತಿಳಿದು ಕಾರ್ಯ ನಿರ್ವಹಿಸಿ. ದೂರ ಪ್ರಯಾಣ ಅನುಕೂಲಕಾರಿಯಾಗಲಾರದು. ಖರ್ಚಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫ‌ಲತೆ. ದಾಂಪತ್ಯ ತೃಪ್ತಿಕರ.

ಕುಂಭ: ನಿರೀಕ್ಷಿತ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿಗಳು ತೋರೀತು. ನೂತನ ಮಿತ್ರರ ಸಂಪರ್ಕ ಸರಿಯಾಗಿ ಉಪಯೋಗಿಸಿಕೊಳ್ಳುವುದರಿಂದ ಪ್ರಗತಿ. ಪ್ರಯಾಣ ಲಾಭಕರ. ಘರ್ಷಣೆಗೆ ಅವಕಾಶ ನೀಡದಿರಿ.

ಮೀನ: ಮಾನಿಸಿಕ ಆರೋಗ್ಯ ಸುದೃಢವಾಗಿದ್ದರೂ ದೈಹಿಕ ಆರೋಗ್ಯದ ಬಗ್ಗೆ ಗಮನವಿರಲಿ. ದಾಂಪತ್ಯ ತೃಪ್ತಿ ಸುಖ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನಾರ್ಜನೆ. ಆಲೋಚನೆಗೆ ತಕ್ಕಂತೆ ಕಾರ್ಯನಿರ್ವಹಿಸಿ ಸಫ‌ಲತೆ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಪ್ರಗತಿ.ಜನಮನ್ನಣೆ. ಹಿರಿಯರ ಆರೋಗ್ಯ ವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next