Advertisement

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

07:17 AM Feb 03, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ಸಮಾಧಾನದ ವಾತಾವರಣ. ವ್ಯವಹಾರ ಕೌಶಲದಿಂದ ಕಾರ್ಯ ಸಿದ್ಧಿ. ಉದ್ಯಮದ ವ್ಯಾಪ್ತಿ ವಿಸ್ತರಣೆಗೆ ಬ್ಯಾಂಕ್‌ ನೆರವು. ದವಸ ಧಾನ್ಯ ವ್ಯಾಪಾರಿಗಳಿಗೆ ಲಾಭ. ವಸ್ತ್ರ, ಆಭರಣ ಖರೀದಿಗೆ ಧನವ್ಯಯ. ಲೇವಾದೇವಿ ವ್ಯವಹಾರದಲ್ಲಿ ಲಾಭ ಇಲ್ಲ.

Advertisement

ವೃಷಭ: ಹೊಸ ಹಣಕಾಸು ಮೂಲಗಳಿಂದ ವ್ಯವಹಾರಕ್ಕೆ ಸಹಾಯ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ.ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಪ್ರಾಪ್ತವಯಸ್ಕ ಹುಡುಗರಿಗೆ ವಿವಾಹ ಯೋಗ.

ಮಿಥುನ: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ.ಅಪೇಕ್ಷಿತ ಆರ್ಥಿಕ ನೆರವು ಲಭ್ಯ. ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಶುಭದಿನ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ಗೃಹೋಪಯೋಗಿ ಸಾಮಗ್ರಿ ಖರೀದಿ.ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿ.

ಕರ್ಕಾಟಕ:ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಹಿರಿಯರ ಆರೋಗ್ಯ ಸುಧಾರಣೆ. ಆಪ್ತ ರಿಂದ ನಿರೀಕ್ಷಿತ ಸಹಾಯ ಲಭ್ಯ.ವ್ಯವಹಾರ ಸಂಬಂಧ ದಕ್ಷಿಣ ದಿಕ್ಕಿಗೆ ಪ್ರಯಾಣ. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು. ಒಟ್ಟಿನಲ್ಲಿ ದಿನವಿಡೀ ಮಿಶ್ರ ಫ‌ಲಗಳ ಅನುಭವ.

ಸಿಂಹ: ಸಹನೆ, ವಿವೇಕಗಳೊಂದಿಗೆ ಕಾಲಕ್ಕೆ ಸರಿಯಾಗಿ ಸ್ಪಂದನೆ. ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ. ತೀವ್ರ ಪ್ರಾರ್ಥನೆಯಿಂದ ದೇವತಾನುಗ್ರಹ ಪ್ರಾಪ್ತಿ. ಕಟ್ಟಡ ನಿರ್ಮಾಪಕರಿಗೆ ಕೆಲಸ ಮುಗಿಸುವ ಒತ್ತಡ. ಹಿರಿಯರ ಆರೋಗ್ಯ ಸುಧಾರಣೆ.

Advertisement

ಕನ್ಯಾ: ಕೆಲವರಿಗೆ ಉದ್ಯೋಗದಲ್ಲಿ ಸುಯೋಗ.. ಅವಿವಾಹಿತ ಹುಡುಗರಿಗೆ ಶೀಘ್ರ ವಿವಾಹ ಯೋಗ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ.ವಿದ್ಯಾರ್ಥಿಗಳಿಗೆ ಏಕಾಗ್ರತೆ ವೃದ್ಧಿ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಗೃಹಿಣಿಯರ ಸೊÌàದ್ಯೋಗ ಯೋಜನೆ ಪ್ರಗತಿ.

ತುಲಾ: ಮಕ್ಕಳ ಭವಿಷ್ಯ ಭದ್ರ. ಉದ್ಯೋಗ ಸ್ಥಾನದಲ್ಲಿ ಕಾರ್ಯ ನಿರ್ವಹಣೆಗೆ ಅಡ್ಡಿಯೊದಗದು.ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ. ಕ್ರೀಡೆ, ಸಂಗೀತಾದಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ . ಕೃಷಿ , ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಆಸಕ್ತಿ.

ವೃಶ್ಚಿಕ: ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರ… ತಾಳ್ಮೆಯ ವರ್ತನೆಯಿಂದ ಹಿರಿಯರ ಒಲವು ಲಭ್ಯ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಗಣನಾರ್ಹ ಸುಧಾರಣೆ. ವ್ಯವಹಾರದ ಸಂಬಂಧ ಸಣ್ಣ ಪ್ರಯಾಣ ಸಂಭವ. ಹವೆಯ ಏರು ಪೇರಿನಿಂದ ವ್ಯತ್ಯಾಸಗೊಂಡಿದ್ದ ಹಿರಿಯರ ಆರೋಗ್ಯ ಸುಧಾರಣೆ.

ಧನು: ವ್ಯವಹಾರಕ್ಕೋಸ್ಕರ ಅನಿರೀಕ್ಷಿತ ಸಹಾಯ ಪ್ರಾಪ್ತಿ. ಕೆಲವು ದಿನಗಳಿಂದ ಕಾಡುತ್ತಿದ್ದ ಕೌಟುಂಬಿಕ ಸಮಸ್ಯೆ ಪರಿಹಾರ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಲಭಿಸುವ ಭರವಸೆ.. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆರಂಭಿಸಲು ಕೆಲವರಿಗೆ ಆಸಕ್ತಿ.

ಮಕರ: ಸಹೋದ್ಯೋಗಿಗಳಿಂದ ಸಹಕಾರ. ಕುಟುಂಬದ ಸದಸ್ಯರೊಂದಿಗೆ ಪ್ರೀತಿ, ವಾತ್ಸಲ್ಯದ ಸಂಬಂಧ ವೃದ್ಧಿ. ಸಣ್ಣ ಉದ್ಯಮಿಗಳ ಆದಾಯ ವೃದ್ಧಿ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಪ್ರಮಾಣದ ಲಾಭ. ಮಹಿಳೆಯರ ಗೃಹೋದ್ಯಮ ಯೋಜನೆಗೆ ಪ್ರಚಂಡ ಯಶಸ್ಸು.

ಕುಂಭ: ಸಂಚಿತ ಧನ ಸದುದ್ದೇಶಕ್ಕೆ ವಿನಿಯೋಗ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸೇವೆ, ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಗೌರವ ಮತ್ತು ಜನಪ್ರಿಯತೆ ವೃದ್ಧಿ.. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ. ವೈದ್ಯರ ಭೇಟಿಯಿಂದ ಸಣ್ಣ ತೊಂದರೆ ಪರಿಹಾರ.

ಮೀನ: ಉದ್ಯೋಗದಲ್ಲಿ ವಿಶೇಷ ಸಾಧನೆ, ವ್ಯವಹಾರದಲ್ಲಿ ಅಪರಿಮಿತ ಮುನ್ನಡೆ.ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ. ಹಳೆಯ ಸಹಚರರ ಭೇಟಿ. ನೂತನ ವಾಹನ, ನಿವೇಶನ ಖರೀದಿ.. ದಂಪತಿಗಳ ನಡುವೆ ಅನುರಾಗ ವೃದ್ಧಿ.ಮಕ್ಕಳಿಂದ ಹಿರಿಯರಿಗೆ ಆನಂದ.

Advertisement

Udayavani is now on Telegram. Click here to join our channel and stay updated with the latest news.

Next