Advertisement

ರಾಶಿ ಫಲ: ಧನಾಗಮನಕ್ಕೆ ಸರಿಯಾಗಿ ಧನವ್ಯಯ ಸಂಭವ, ದೂರದ ವ್ಯವಹಾರಗಳಲ್ಲಿ ಪ್ರಗತಿ

07:14 AM Feb 20, 2023 | Team Udayavani |

ಮೇಷ: ದೀರ್ಘ‌ ಪ್ರಯಾಣ. ನಷ್ಟದ್ರವ್ಯವನ್ನು ಪಡೆಯಲು ಪ್ರಯತ್ನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ದೂರದ ವ್ಯವಹಾರಗಳಿಂದ ಧನಾಗಮನ. ಅಧ್ಯಯನ ಪ್ರವೃತ್ತರಿಗೆ ಪರಿಶ್ರಮದಿಂದ ನಿರೀಕ್ಷಿತ ಸ್ಥಾನ ಲಾಭ.

Advertisement

ವೃಷಭ: ಅನಿರೀಕ್ಷಿತ ಸ್ಥಾನ ವೃದ್ಧಿ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ನಡೆ. ಧನ ಸಂಪತ್ತಿನ ಅಭಿವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮಾನಸಿಕ ತೃಪ್ತಿ.

ಮಿಥುನ: ಮಕ್ಕಳಿಂದ ಸಂತೋಷ ವೃದ್ಧಿ. ಅದ್ಯಯನ ಪ್ರವೃತ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಬಂಧುಮಿತ್ರರ ಸಹಕಾರ. ಗುರುಹಿರಿಯರಿಂದ ಪ್ರೋತ್ಸಾಹ ಮಾರ್ಗದರ್ಶನ. ದೈಹಿಕ ಮಾನಸಿಕ ವೃದ್ಧಿ. ಧನಾಗಮನಕ್ಕೆ ಸರಿಯಾಗಿ ಧನವ್ಯಯ ಸಂಭವ.

ಕರ್ಕ: ಆರೋಗ್ಯ ಗಮನಿಸಿ. ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿ. ದಂಪತಿಗಳಿಗೆ ಪರಸ್ಪರ ಪ್ರೋತ್ಸಾಹ ಅಗತ್ಯ. ಪಾಲುದಾರಿಕಾ ವ್ಯವಹಾರಗಳಲ್ಲಿ ಸ್ಪಷ್ಟತೆ ಇರಲಿ. ಆಸ್ತಿ ಕ್ರಯವಿಕ್ರಯದಲ್ಲಿ ಮುನ್ನಡೆ. ಮಕ್ಕಳಿಂದಲೂ ಹಿರಿಯರಿಂದಲೂ ಮನೆಯಲ್ಲಿ ಸಂತಸ.

ಸಿಂಹ: ಆರೋಗ್ಯ ಗಮನಿಸಿ. ಹಠಮಾರಿ ತನದಿಂದ ನಷ್ಟ ಸಂಭವ. ಆರ್ಥಿಕ ವಿಚಾರಗಳಲ್ಲಿ ಪ್ರಗತಿ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ಚರ್ಚೆಗೆ ಅವಕಾಶ ನೀಡದಿರಿ. ಸಾಂಸಾರಿಕ ಸುಖ ಮಧ್ಯಮ. ಆರ್ಥಿಕ ವಿಷಯದಲ್ಲಿ ಜಾಗರೂಕತೆ.

Advertisement

ಕನ್ಯಾ: ಉತ್ತಮ ವಾಕ್‌ಚತುರತೆ ಪ್ರದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಗೌರವ ಸುಖಾದಿ ಲಭ್ಯ. ಉತ್ತಮ ಧನಾರ್ಜನೆ. ಅಧ್ಯಯನ ಪ್ರವೃತ್ತರಿಗೆ ಸರ್ವ ಸೌಲಭ್ಯ ಪ್ರಾಪ್ತಿ. ದಂಪತಿಗಳಿಗೆ ಪರಸ್ಪರರಿಂದ ಲಾಭ.

ತುಲಾ: ಪರ ಸ್ತ್ರೀ ಪುರುಷರಿಂದ ಸಹಾಯ. ಕೆಲಸ ಕಾರ್ಯಗಳಲ್ಲಿ ಚುರುಕುತನ. ಬುದ್ಧಿವಂತಿಕೆಯಿಂದ ಕೂಡಿದ ಪ್ರವೃತ್ತಿ. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಗೃಹದಲ್ಲಿ ಮನೋರಂಜನೆ ಸಂಭ್ರಮ. ಸೌಂದರ್ಯ ಪದಾರ್ಥಗಳ ಖರೀದಿ. ಮಕ್ಕಳಿಂದ ಸುಖ ಸಂತೋಷ.

ವೃಶ್ಚಿಕ: ದೂರ ಪ್ರಯಾಣ. ಆರೋಗ್ಯದ ಬಗ್ಗೆ ಉದಾಸೀನತೆ ಮಾಡದಿರಿ. ಮಿತ್ರರ ಸಹಕಾರ. ನಿರಂತರ ಧನ ಸಂಚಯನ. ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಸಾಮಾಜಿಕ ಸುಧಾರಣೆ ಕಾರ್ಯಗಳಲ್ಲಿ ಆಸಕ್ತಿ.

ಧನು: ಕೆಲಸ ಕಾರ್ಯಗಳಲ್ಲಿ ಮಗ್ನತೆ. ನಿರೀಕ್ಷಿಸಿದಂತೆ ಸಫ‌ಲತೆ. ಕೀರ್ತಿ ಶ್ರೇಯಸ್ಸು ಲಭಿಸಿದ ಸಂತೋಷ. ಪರಊರು, ಪರ ದೇಶದ ವ್ಯವಹಾರಗಳಲ್ಲಿ ನೆಮ್ಮದಿ. ಅನಿರೀಕ್ಷಿತ ಧನ ಲಾಭ. ವಿದ್ಯಾರ್ಥಿಗಳಿಗೆ ಜ್ಞಾನ ಸಂಪಾದನೆಯಲ್ಲಿ ಪ್ರಗತಿ.

ಮಕರ: ಆರೋಗ್ಯ ಗಮನಿಸಿ. ದೇಹಕ್ಕೆ ಹೆಚ್ಚು ಶ್ರಮ ನೀಡಿದಂತೆ ಕಾರೊÂàನ್ಮುಖರಾಗಿರಿ. ಮಿತ್ರರಿಂದ ಸಹಾಯ. ಅನಿರೀಕ್ಷಿತ ಬಹು ಉದ್ಯೋಗ ಜವಾಬ್ದಾರಿ. ಸಫ‌ಲತೆ. ಜ್ಞಾನಾರ್ಜನೆಯಲ್ಲಿ ತಲ್ಲೀನತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಕುಂಭ: ವಿದ್ಯೆ ಅಧ್ಯಯನ ಸಂಬಂಧ ವಿಚಾರಗಳಲ್ಲಿ ಪ್ರಗತಿ. ಉತ್ತಮ ಸ್ಥಾನ ಗೌರವಾದಿ ಪ್ರಾಪ್ತಿ. ಸಂದಭೋìಚಿತವಾಗಿ ಪ್ರತಿಭೆ ಪ್ರದರ್ಶನ. ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ.

ಮೀನ: ದೂರ ಪ್ರಯಾಣ. ನೂತನ ಮಿತ್ರರ ಭೇಟಿ. ಗೃಹೋಪಕರಣ ವಸ್ತುಗಳ ಸಂಗ್ರಹ. ಮಿತ್ರರಿಂದ ಉತ್ತಮ ಸಹಕಾರ. ಅವಿವಾಹಿತರಿಗೆ ವಿವಾಹ ಭಾಗ್ಯ. ಮಕ್ಕಳಿಂದ ಸುವಾರ್ತೆ.

 

Advertisement

Udayavani is now on Telegram. Click here to join our channel and stay updated with the latest news.

Next