Advertisement

ರಾಶಿ ಫಲ: ಅನಗತ್ಯ ತೊಂದರೆಗಳನ್ನು ತಂದುಕೊಳ್ಳದಿರಿ, ಆರೋಗ್ಯ ಗಮನಿಸಿ

07:16 AM Feb 14, 2023 | Team Udayavani |

ಮೇಷ: ಸಹೋದರ ಸಮಾನರಿಗೆ ಸಹಾಯ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ನಿಷ್ಠೆ ಪರಿಶ್ರಮ. ದಂಪತಿಗಳಲ್ಲಿ ಪರಸ್ಪರ ಪ್ರೋತ್ಸಾಹ. ಪರಊರಿನ ವ್ಯವಹಾರದ ಬಗ್ಗೆ ಹೆಚ್ಚಿದ ಆಲೋಚನೆ, ಯೋಜನೆ. ಆರ್ಥಿಕ ಪ್ರಗತಿ.

Advertisement

ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ. ಕೈಗೊಂಡ ಕೆಲಸ ಕಾರ್ಯಗಳಲ್ಲಿ ಸಫ‌ಲತೆ. ಕೀರ್ತಿ ಗೌರವ ಸಂಪಾದನೆ. ನೂತನ ಮಿತ್ರರ ಸಹಕಾರ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಆರ್ಥಿಕ ಸ್ಥಿತಿ ಅತ್ಯುತ್ತಮ.

ಮಿಥುನ: ಅಧಿಕ ಪರಿಶ್ರಮದಿಂದ ದೇಹಾಯಾಸ ಸಂಭವ. ಆರೋಗ್ಯ ಗಮನಿಸಿ. ಅನಗತ್ಯ ತೊಂದರೆಗಳನ್ನು ತಂದುಕೊಳ್ಳದಿರಿ. ಪರರಿಗೆ ವಾಗ್ಧಾನ ಮಾಡುವಾಗ ಎಚ್ಚರಿಕೆ ಅಗತ್ಯ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿಸಿದ ಸಫ‌ಲತೆ.

ಕರ್ಕ: ದೀರ್ಘ‌ ಪ್ರಯಾಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಭೂಮ್ಯಾದಿ ಆಸ್ತಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಪ್ರಗತಿ. ದೂರದ ವ್ಯವಹಾರಗಳಲ್ಲಿ ತಾಳ್ಮೆ ಸಮಾದಾನ ಅಗತ್ಯ. ದಾಂಪತ್ಯ ತೃಪ್ತಿದಾಯಕ.

ಸಿಂಹ: ಆರೋಗ್ಯ ಗಮನಿಸಿ. ಹೆಚ್ಚಿದ ಜವಾಬ್ದಾರಿ ಪರಿಶ್ರಮ. ಪರರಿಗೆ ಹಣಕಾಸಿನ ನೆರವು ನೀಡುವಾಗ ಜಾಗ್ರತೆ ಅಗತ್ಯ. ಸ್ಪಷ್ಟತೆಗೆ ಆದ್ಯತೆ ನೀಡಿ. ಗೃಹದಲ್ಲಿ ಸಂತಸದ ಪರಿಸ್ಥಿತಿ. ಬಂಧು ಮಿತ್ರರ ಆಗಮನ. ವಿದ್ಯಾರ್ಥಿಗಳಿಗೆ ಹೆಚ್ಚಿದ ಅನುಕೂಲತೆ.

Advertisement

ಕನ್ಯಾ: ಆರೋಗ್ಯದಲ್ಲಿ ಉತ್ತಮ ಚೇತರಿಕೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಆರ್ಥಿಕ ಪ್ರಗತಿ. ನಿಷ್ಠೆಯಿಂದ ವ್ಯವಹರಿಸಿದ ತೃಪ್ತಿ. ದಾಂಪತ್ಯ ತೃಪ್ತಿಕರ. ಮಕ್ಕಳಿಂದ ಸುವಾರ್ತೆ. ಅವಿವಾಹಿತರಿಗೆ ವಿವಾಹ ಭಾಗ್ಯ.

ತುಲಾ: ಅನಿರೀಕ್ಷಿತ ಧನ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗೌರವ ಮನ್ನಣೆ ಲಭ್ಯ. ಉತ್ತಮ ತಿಳುವಳಿಕೆ ಜ್ಞಾನ ವಾಕ್‌ಚತುರತೆಯಿಂದ ಕೂಡಿದ ಕಾರ್ಯವೈಖರಿ. ಬಹುಜನ ಸಂಪರ್ಕ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯ ಸುಖ ವೃದ್ಧಿ.

ವೃಶ್ಚಿಕ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಿರೀಕ್ಷಿತ ನೂತನ ಉದ್ಯೋಗ. ಕೆಲಸ ವ್ಯವಹಾರಗಳ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ, ಮನಃತೃಪ್ತಿ. ಭೂಮ್ಯಾದಿ, ವಾಹನಗಳ ಸುಖ ಪ್ರಾಪ್ತಿ. ನೂತನ ಮಿತ್ರರ ಭೇಟಿ. ಗೃಹದಲ್ಲಿ ಸಂತಸ.

ಧನು: ದೈರ್ಯ ಶೌರ್ಯ ಪರಾಕ್ರಮ ಪ್ರದರ್ಶನ. ಸಹೋದರ ಸಮಾನರಿಂದ ಸುಖ ಸಂತೋಷ. ಹಣಕಾಸಿನ ವಿಚಾರಗಳಲ್ಲಿ ಜಾಗರೂಕತೆ. ಅನಗತ್ಯ ಖರ್ಚುಗಳಿಗೆ ತಡೆ. ಸಣ್ಣ ಪ್ರಯಾಣ. ಪರರಿಂದ ಜ್ಞಾನ ತಿಳಿಯುವ ಹಂಬಲ. ಅಧ್ಯಯನಶೀಲತೆ ಸಂಭವ.

ಮಕರ: ಆರೋಗ್ಯ ಗಮನಿಸಿ. ಹೆಚ್ಚಿದ ಪರಿಶ್ರಮದಿಂದ ದೇಹಾಯಾಸ ಸಂಭವ. ಹಣಕಾಸಿನ ವಿಚಾರದಲ್ಲಿ ಆದಾಯ ಖರ್ಚು ಸಮನಾಗಿರುವುದು. ಆತುರದ ನಿರ್ಧಾರ ಮಾಡದಿರಿ. ಬಂಧು ಮಿತ್ರರ ಸಹಾಯ ಸಹಕಾರ ಲಭಿಸುವದು.

ಕುಂಭ: ಮನೋರಂಜನೆಯಲ್ಲಿ ಆಸಕ್ತಿ. ದೂರ ಪ್ರಯಾಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಉತ್ತಮ ವಾಕ್‌ಚತುರತೆ. ಕೆಲಸ ಕಾರ್ಯಗಳಲ್ಲಿ ಚುರುಕುತನ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

ಮೀನ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನವ್ಯಯ. ಮಾನಸಿಕ ನೆಮ್ಮದಿ ಕಂಡು ಬರುವುದು. ಬಂಧು ಮಿತ್ರರಿಗಾಗಿ ಹೆಚ್ಚಿದ ಸಮಯ ಕಳೆಯುವಿಕೆ. ಅನಗತ್ಯ ಸಾಲ ನೀಡದಿರಿ ಅಥವಾ ಪಡೆಯದಿರಿ. ದಾಕ್ಷಿಣ್ಯ ತೊರೆದು ವ್ಯವಹರಿಸಿ.

 

Advertisement

Udayavani is now on Telegram. Click here to join our channel and stay updated with the latest news.

Next