Advertisement

ರಾಶಿ ಫಲ: ಅನ್ಯರಿಗೆ ಸಹಾಯ ಮಾಡಲು ಹೋಗಿ ತೊಂದರೆಗೊಳಗಾಗದಿರಿ

07:18 AM Feb 13, 2023 | Team Udayavani |

ಮೇಷ: ದೇವತಾ ಕಾರ್ಯಗಳಲ್ಲಿ ಭಕ್ತಿ ಶ್ರದ್ಧೆ. ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ. ಸ್ವಸಾಮರ್ಥ್ಯದಿಂದ ಪರಿಶ್ರಮದಿಂದ ಕೂಡಿದ ಅಧಿಕ ಧನಾರ್ಜನೆ. ಎಲ್ಲಾ ಜನರಿಂದಲೂ ಮನ್ನಣೆ ದೊರಕುವ ದಿನ.

Advertisement

ವೃಷಭ: ಸಂಪೂರ್ಣ ದೇವತಾನುಗ್ರಹದಿಂದ ಕೂಡಿದ ದಿನ. ಧಾರ್ಮಿಕ ಕಾರ್ಯಗಳ ನೇತೃತ್ವ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಗುರು ಹಿರಿಯರ ಪ್ರೋತ್ಸಾಹ. ಆಸ್ತಿ ವಿಚಾರಗಳಲ್ಲಿ ಉತ್ತಮ ಬೆಳವಣಿಗೆ. ಗೃಹದಲ್ಲಿ ಸಂತಸದ ವಾತಾವರಣ.

ಮಿಥುನ: ಹೆಚ್ಚಿದ ದೇಹಾಯಾಸ ಪರಿಶ್ರಮದಿಂದ ಕೂಡಿದ ಕಾರ್ಯ ವೈಖರಿ. ಅನ್ಯರಿಗೆ ಸಹಾಯ ಮಾಡಲು ಹೋಗಿ ತೊಂದರೆಗೊಳಗಾಗದಿರಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಹಣಕಾಸಿನ ವಿಚಾರಗಳಲ್ಲಿ ಸಾಹಸ ಪ್ರವೃತ್ತಿ ಸಲ್ಲದು. ಸಾಂಸಾರಿಕ ಸುಖ ತೃಪ್ತಿ.

ಕರ್ಕ: ಆರ್ಥಿಕ ವಿಚಾರದಲ್ಲಿ ಅಧಿಕ ಗಮನ ಹರಿಸುವಿಕೆ. ಸಾಹಸ ಪ್ರವೃತ್ತಿಯಿಂದ ಕೂಡಿದ ಕಾರ್ಯ. ಹೆಚ್ಚಿದ ಜನ ಸಂಪರ್ಕ. ಉದ್ಯೋಗ ವ್ಯವಹಾರಗಳಲ್ಲಿ ವಾಕ್‌ ಚತುರತೆಯ ನಡೆ. ಆಸ್ತಿ ವಿಚಾರಗಳಲ್ಲಿ ಗೊಂದಲ. ಅವಿವಾಹಿತರಿಗೆ ವಿವಾಹ ಯೋಗ.

ಸಿಂಹ: ಅಧ್ಯಯನದಲ್ಲಿ ಆಸಕ್ತಿ. ಅನ್ಯರಲ್ಲಿ ಅವಲಂಬಿತರಾಗದೇ ಗಾಂಭೀರ್ಯದಿಂದ ಕೂಡಿದ ವ್ಯವಹಾರದಿಂದ ಯಶಸ್ಸು. ಆರೋಗ್ಯದಲ್ಲಿ ಸುಧಾರಣೆ. ಹಣಕಾಸಿನ ವಿಚಾರದಲ್ಲಿ ಅಜಾಗ್ರತೆಯಿಂದ ನಷ್ಟ ಸಂಭವ. ಗುರುಹಿರಿಯರಿಂದ ಸಂತೋಷ ವೃದ್ಧಿ.

Advertisement

ಕನ್ಯಾ: ದೈಹಿಕ ಮಾನಸಿಕ ಸಂತುಷ್ಟತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಅಭಿವೃದ್ಧಿ ದಾಯಕ ದಿನ. ಗೌರವ ಆದರಗಳು ಲಭಿಸುವ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಕೀರ್ತಿ ತೃಪ್ತಿ.

ತುಲಾ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಗೃಹೋಪಕರಣ ವಸ್ತುಗಳ ಸಂಗ್ರಹ. ದಾಂಪತ್ಯ ಸುಖ ಉತ್ತಮ. ಅವಿವಾಹಿತರಿಗೆ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಸವಲತ್ತುಗಳು ಲಭ್ಯ. ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಆರ್ಥಿಕ ಸ್ಥಿತಿ ಪ್ರಗತಿ.

ವೃಶ್ಚಿಕ: ದೈರ್ಯ ಶೌರ್ಯ ಉದಾರತೆಯಿಂದ ಕೂಡಿದ ಕಾರ್ಯ ವೈಖರಿ. ಜನಮನ್ನಣೆ. ಚುರುಕುತನದ ನಡವಳಿಕೆ. ವಿದ್ಯಾರ್ಥಿಗಳಿಗೆ ಶ್ರೇಯಸ್ಸು. ನಿರೀಕ್ಷಿತ ಫ‌ಲ ಪ್ರಾಪ್ತಿ. ದಾಂಪತ್ಯ ಅನುರಾಗ ವೃದ್ಧಿ. ಅವಿವಾಹಿತರಿಗೆ ವಿವಾಹ ಭಾಗ್ಯ.ಗುರು ಹಿರಿಯರ ಆಶೀರ್ವಾದ ಸಹಾಯ ಲಭ್ಯ.

ಧನು: ಆರೋಗ್ಯ ಗಮನಿಸಿ. ಕುಟುಂಬದಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ಪರಿಶ್ರಮ ಪ್ರಯತ್ನ ಪೂರ್ವಕ ಕಾರ್ಯ ಸಾಧನೆ. ಉತ್ತಮ ಅಭಿವೃದ್ಧಿದಾಯಕ ಧನಾರ್ಜನೆ. ಮಿತವ್ಯಯ ಬಂಧುಮಿತ್ರರ ಸಹಕಾರದಿಂದ ನೆಮ್ಮದಿ. ಅಧ್ಯಯನನಿರತರಿಗೆ ಅನುಕೂಲಕರ ಪರಿಸ್ಥಿತಿ.

ಮಕರ: ಆರೋಗ್ಯ ವೃದ್ಧಿ. ಗೃಹದಲ್ಲಿ ಸಂತಸದ ವಾತಾವರಣ. ಸಾಂಸಾರಿಕ ಅನುರಾಗ ವೃದ್ಧಿ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸಫ‌ಲತೆ. ಧನಾ ರ್ಜನೆಗೆ ಸಮವಾದ ಧನ ವ್ಯಯ. ಆಸ್ತಿ ವಿಚಾರದಲ್ಲಿ ಲಾಭ.

ಕುಂಭ: ನಿರಂತರ ಧನ ಸಂಚಯನ. ದೀರ್ಘ‌ ಪ್ರಯಾಣ. ಪರವೂರ ವ್ಯವಹಾರಗಳಲ್ಲಿ ಅಭಿವೃದ್ಧಿ ಪ್ರಗತಿ. ಸಂದಭೋìಚಿತ ವಾಕ್‌ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಸಾಂಸಾರಿಕ ಸುಖ ತೃಪ್ತಿದಾಯಕ. ನೂತನ ಮಿತ್ರರ ಭೇಟಿ.

ಮೀನ: ಆರೋಗ್ಯ ಗಮನಿಸಿ. ತಾಳ್ಮೆಯಿಂದ ವ್ಯವಹರಿಸಿ. ಆರ್ಥಿಕ ಸ್ಥಿತಿ ಸುದೃಢ. ಗೃಹ ವಾಹನ ಕಟ್ಟಡಾಧಿಗಳ ನಿಮಿತ್ತ ಧನವ್ಯಯ. ಸಾಂಸಾರಿಕ ಸುಖ ತೃಪ್ತಿದಾಯಕ. ಪರಊರ ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನಮಾನ ವೃದ್ಧಿ.

 

Advertisement

Udayavani is now on Telegram. Click here to join our channel and stay updated with the latest news.

Next