Advertisement

ರಾಶಿಫಲ; ನಿರೀಕ್ಷಿತ ಧನ ವೃದ್ಧಿ, ಹಿರಿಯರ ಗುರುಗಳ ಮಾರ್ಗದರ್ಶನ ಲಾಭ

07:19 AM Dec 11, 2022 | Team Udayavani |

ಮೇಷ: ದೀರ್ಘ‌ ಪ್ರಯಾಣ. ನೂತನ ಮಿತ್ರರ ಸಮಾಗಮ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಗಮನಹರಿಸಿ. ಗೌರವದಿಂದ ಕೂಡಿದ ಧನ ಸಂಪತ್ತು ಪ್ರಾಪ್ತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿದ ತಲ್ಲೀನತೆ.

Advertisement

ವೃಷಭ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನ ವ್ಯಯ. ದೂರದ ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಧನ ಸಂಪತ್ತು ವೃದ್ಧಿ. ಸರಿಸಮವಾದ ಖರ್ಚು. ಆರೋಗ್ಯದ ಬಗ್ಗೆ ಅಸಡ್ಡೆ ಮಾಡದಿರಿ. ದೀರ್ಘ‌ ಪ್ರಯಾಣ ಸಂಭವ.

ಮಿಥುನ: ಅಧ್ಯಯನ ಅಧ್ಯಾಪನದಲ್ಲಿ ತಲ್ಲೀನತೆ. ಮಕ್ಕಳಿಂದ ಸಂತೋಷ. ನಿರೀಕ್ಷಿತ ಧನ ವೃದ್ಧಿ. ಹಿರಿಯರ ಗುರುಗಳ ಮಾರ್ಗದರ್ಶನ ಲಾಭ. ಸಂದರ್ಭಕ್ಕೆ ಸರಿಯಾಗಿ ಸಹಾಯ ಒದಗಿ ಕೆಲಸ ಕಾರ್ಯಗಳಲ್ಲಿ ಪ್ರಗತಿ.

ಕರ್ಕ: ಆಸ್ತಿ ವಿಚಾರಗಳಲ್ಲಿ ನಿರ್ಣಯ. ದೂರದ ಮಿತ್ರರ ಭೇಟಿ. ಪರಸ್ಪರ ಸಹಕಾರ ಪ್ರೋತ್ಸಾಹ. ಅನಿರೀಕ್ಷಿತ ಬೆಳವಣಿಗೆಗಳು. ಧನಾರ್ಜನೆಗೆ ಸರಿಸಮನಾದ ವ್ಯಯ. ಪಾಲುದಾರಿಕಾ ವ್ಯವಹಾರಗಳಲ್ಲಿ ದುಡುಕು ನಿರ್ಧಾರ ಮಾಡದಿರಿ. ಸಾಂಸಾರಿಕ ಸುಖ ಮಧ್ಯಮ.

ಸಿಂಹ: ಜನಮನ್ನಣೆ ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಪರಿಶ್ರಮಕ್ಕೆ ಸರಿಯಾದ ನ್ಯಾಯಸಮ್ಮತವಾದ ಧನಾರ್ಜನೆ. ಆಸ್ತಿ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಬಂಧುಮಿತ್ರರೊಂದಿಗೆ ಸಹನೆ ತಾಳ್ಮೆಯಿಂದ ವ್ಯವಹರಿಸಿ. ಆರೋಗ್ಯದಲ್ಲಿ ವೃದ್ಧಿ.

Advertisement

ಕನ್ಯಾ: ಉತ್ತಮ ಆರೋಗ್ಯ. ಅಧ್ಯಯನದಲ್ಲಿ ಆಸಕ್ತಿ ವೃದ್ಧಿ. ಬಂಧುಮಿತ್ರರ ಸಹಾಯ ಸಹಕಾರ ಒದಗಿ ಬರುವ ಸಂಭವ. ಉತ್ತಮ ಧನಾರ್ಜನೆಗೆ ಅವಕಾಶ. ಮಾತಿನಲ್ಲಿ ಸ್ಪಷ್ಟತೆ ಇರಲಿ. ಮಕ್ಕಳ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ.

ತುಲಾ: ಆರೋಗ್ಯ ವೃದ್ಧಿ. ದೈಹಿಕ ಸುಖಕ್ಕೆ ಬೇಕಾಗುವ ವಸ್ತುಗಳ ಸಂಗ್ರಹ. ವಸ್ತ್ರ, ಆಭರಣ ಖರೀದಿ. ವಿವಾಹಾದಿ ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿಕೆ. ಸುಖ ಸಂತೋಷ ವೃದ್ಧಿ. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ.

ವೃಶ್ಚಿಕ: ಸರಕಾರಿ ಕಾರ್ಯಗಳಲ್ಲಿ ಮುನ್ನಡೆ. ಗಣ್ಯರ ಸಂಪರ್ಕ. ಗೌರವಾದಿ ವೃದ್ಧಿ. ಬಂಧುಜನರೊಂದಿಗೆ ವಿಲಾಪ. ಧಾರ್ಮಿಕ ವಿಚಾರ ಆಸಕ್ತಿ. ಜನಮೆಚ್ಚುವ ಕೆಲಸ ಕಾರ್ಯಗಳಿಂದ ಕೀರ್ತಿ ಸಂಪಾದನೆ. ಗೃಹದಲ್ಲಿ ಸಂತಸದ ವಾತಾವರಣ.

ಧನು: ಆರೋಗ್ಯ ವೃದ್ಧಿ. ಸತ್ಕಮ ಸದಾಚಾರತೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗಿ ದಾನ ಧರ್ಮ ನಿರತ. ಗುರು ಹಿರಿಯರ ಪ್ರೀತಿ ಸಂಪಾದನೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಮನೆಯಲ್ಲಿ ಸಂತಸದ ಸಂಭ್ರಮ.

ಮಕರ: ಪಾರದರ್ಶಕತೆಗೆ ಆದ್ಯತೆ ನೀಡಿ. ಯಾರ ಮಾತಿಗೂ ಮರುಳಾಗದಿರಿ. ಉದ್ಯೋಗ ವ್ಯವಹಾರಗಳಲ್ಲಿ ಆಸ್ತಿ ವಿಚಾರಗಳಲ್ಲಿ ಸ್ಪಷ್ಟತೆ ಆದ್ಯತೆ ನೀಡಿ. ಅನ್ಯರ ಸಹಾಯ ಅಪೇಕ್ಷಿಸದೇ ಸ್ವಂತ ಪರಿಶ್ರಮದಲ್ಲಿ ವಿಶ್ವಾಸವಿಡಿ. ದಾಂಪತ್ಯ ಸುಖ ವೃದ್ಧಿ.

ಕುಂಭ: ನಯವಿನಯದಿಂದ ಕಾರ್ಯಪ್ರವೃತ್ತರಾಗಿ. ಯಾವುದೇ ಆತುರದ ನಿರ್ಧಾರ ಮಾಡದಿರಿ. ಪರರ ಮಾತನ್ನು ಆಲಿಸುವಾಗ ನಿಮ್ಮ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಗುಟ್ಟನ್ನು ಕಾಪಾಡಿಕೊಳ್ಳಿ. ಉತ್ತಮ ಧನಸಂಪತ್ತು ವೃದ್ಧಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ಮೀನ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಸಾಹಸ ಪ್ರವೃತ್ತಿ. ಪ್ರತಿ ಸ್ಪರ್ಧಿಗಳಿಗೆ ಅವಕಾಶವಿಲ್ಲದಂತೆ ಕಾರ್ಯಮಗ್ನರಾಗಿ. ಉತ್ತಮ ಧನಾರ್ಜನೆ. ಮಾತಿನಲ್ಲಿ ಸ್ಪಷ್ಟತೆ ತಾಳ್ಮೆ ಇರಲಿ. ದಾಂಪತ್ಯ ತೃಪ್ತಿಕರ. ವಿದ್ಯಾರ್ಥಿಗಳಿಗೆ ಹೆಚ್ಚಿದ ಪರಿಶ್ರಮ.

Advertisement

Udayavani is now on Telegram. Click here to join our channel and stay updated with the latest news.

Next