Advertisement
ವೃಷಭ: ದೈವಾನುಗ್ರಹದಿಂದ ಜೀವನ ಸುಖಕರ. ಅನೇಕ ಮಂದಿ ಪ್ರಭಾವಿ ವ್ಯಕ್ತಿ ಗಳೊಂದಿಗೆ ಸಂಪರ್ಕ. ಸರಕಾರಿ ನೌಕರರಿಗೆ ಆರಾಮದ ಭಾವ. ಕುಟುಂಬದವರೊಡನೆ ಸಣ್ಣ ಪ್ರಯಾಣ. ಹಣದ ವಿಷದಲ್ಲಿ ಜಾಗ್ರತೆಯಿರಲಿ.
Related Articles
Advertisement
ಕನ್ಯಾ: ಉದ್ಯೋಗಸ್ಥರಿಗೆ ಮೇಲಿನವರಿಂದ ಉತ್ತೇಜನ. ವ್ಯವಹಾರಸ್ಥರಿಗೆ ಹೊಸ ಅವಕಾಶ ಗಳು ಲಭ್ಯ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಔಷಧರಹಿತ ಚಿಕಿತ್ಸಕರಿಂದ ಸಹಾಯ.
ತುಲಾ: ಬಹು ಸಮಯದಿಂದ ಕಾಡು ತ್ತಿದ್ದ ಅನಾರೋಗ್ಯ ಪರಿಹಾರ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ. ಆಹಾರಪದಾರ್ಥ ವ್ಯಾಪಾರದಲ್ಲಿ ಪ್ರಗತಿ. ಹೈನುಗಾರಿಕೆ ಉತ್ಪನ್ನಗಳಿಂದ ಆದಾಯ ವೃದ್ಧಿ. ಗೃಹಿಣಿಯರಿಗೆ ಉಲ್ಲಾಸದ ದಿನ.
ವೃಶ್ಚಿಕ: ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಸಮಾಧಾನ. ಮಾಲಕ- ನೌಕರರ ಬಾಂಧವ್ಯ ಸುಧಾರಣೆ. ಆಸ್ತಿ ಖರೀದಿ, ಮಾರಾಟ ಮಾತುಕತೆ ಫಲಪ್ರದ. ಅಕ್ಕಿ ಗಿರಣಿ ವ್ಯಾಪಾರಿಗಳಿಗೆ ಉತ್ತಮ ಲಾಭ. ಮಗನ ವಿದ್ಯಾಭ್ಯಾಸದ ಬಗ್ಗೆ ಆತಂಕ.
ಧನು: ದೈವಾನುಗ್ರಹ, ಕಾರ್ಯನಿಷ್ಠೆ ಜತೆಗೂಡಿ ಯಶಸ್ಸು. ಸಹೋದ್ಯೋಗಿಗಳ ಅಸೂಯೆಗೆ ಗುರಿಯಾಗದಿರಿ. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಸಂಗಾತಿಯ ಆರೋಗ್ಯದ ಕಡೆಗೆ ಗಮನವಿರಲಿ.
ಮಕರ: ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಕೆಲವರಿಗೆ ಅಯಾಚಿತ ಧನಪ್ರಾಪ್ತಿ. ಪಾಲುದಾರಿಕೆ ವ್ಯವಹಾರಸ್ಥರಿಗೆ ಸಾಮಾನ್ಯ ಲಾಭ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಕಾಡೀತು. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ.
ಕುಂಭ: ಅನಾವಶ್ಯಕವಾಗಿ ಯಾರೊಂದಿಗೂ ವಾಗ್ವಾದಕ್ಕಿಳಿಯಬೇಡಿ. ಉದ್ಯೋಗ ರಂಗದಲ್ಲಿ ಪ್ರಶಂಸೆಯ ಯೋಗ. ದಿನವಿಡೀ ಬಿಡುವಿಲ್ಲದ ಚಟುವಟಿಕೆಗಳು. ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ.
ಮೀನ: ಸಪ್ತಾಹದ ನಿರ್ದಿಷ್ಟ ಕಾರ್ಯಗಳು ಮುಕ್ತಾಯದ ಹಂತಕ್ಕೆ. ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ಸ್ಪಂದನ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ಸಮಾನ ಆಸಕ್ತಿಯುಳ್ಳವರಿಂದ ಸಹಕಾರ. ಗೃಹಾಲಂಕಾರ ಸಾಮಗ್ರಿ ಖರೀದಿ.