Advertisement

Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬ ಸಹಜವಾದರೂ ಕ್ರಿಯೆ ನಿಲ್ಲದು

07:13 AM Dec 17, 2023 | Team Udayavani |

ಮೇಷ: ವಿರಾಮದ ದಿನ ಮನಸ್ಸು ಸಾಧ್ಯವಾದಷ್ಟು ಹಗುರವಾಗಿರಲಿ. ನೌಕರ ವರ್ಗ ದವರಿಗೆ ನೆಮ್ಮದಿ. ಸಹೋದ್ಯೋಗಿಗಳಿಂದ ಸದ್ಭಾವನೆಯ ಭೇಟಿ.ಬಂಧುವರ್ಗದಲ್ಲಿ ವಿವಾಹದ ಸಂಭ್ರಮ. ಪಿತ್ರಾರ್ಜಿತ ಆಸ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ.

Advertisement

ವೃಷಭ: ನಾಳೆಯ ನಿಯೋಜಿತ ಕಾರ್ಯಗಳ ಬಗ್ಗೆ ಸಿದ್ಧತೆಗಳು. ಉದ್ಯೋಗ ಕ್ಷೇತ್ರದ ಗೆಳೆಯ ರೊಂದಿಗೆ ಭೇಟಿ. ಕೃಷಿಕ್ಷೇತ್ರದಲ್ಲಿ ಹೊಸ ಬಗೆಯ ಬೆಳೆಯ ಕುರಿತು ಸಮಾಲೋಚನೆ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ.

ಮಿಥುನ: ಎಲ್ಲರಿಗೂ ಕ್ಷೇಮದ ಅನುಭವ. ಉದ್ಯಮಿಗಳಿಗೆ ಸಮಾಧಾನದ ಸಮಾಚಾರ. ನೂತನ ವಾಹನ ಖರೀದಿ. ವಸ್ತ್ರ, ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ. ಸರಕಾರದ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ.

ಕರ್ಕ: ಸಮಗ್ರ ಅಭಿವೃದ್ಧಿಯ ಕುರಿತು ವಿಸ್ತಾರವಾದ ಚಿಂತನೆ. ಕಿರಿಯ ಬಂಧುವಿನ ವಿದ್ಯಾರ್ಜನೆಗೆ ಸಹಾಯ. ಉದ್ಯೋಗದಲ್ಲಿ ವೇತನ ಏರಿಕೆಯ ಸೂಚನೆ. ಉದ್ಯಮದ ವ್ಯಾಪ್ತಿ ವಿಸ್ತರಣೆಗೆ ಆರಂಭ. ಮನೆಯಲ್ಲಿ ದೇವತಾ ಕಾರ್ಯದ ಸಂಭ್ರಮ.

ಸಿಂಹ: ಹೊಸ ಲಾಭದಾಯಕ ಉದ್ಯಮ ಕೈಗೊಳ್ಳಲು ವಿರಾಮದ ದಿನ ಚಿಂತನೆ. ದೂರದ ಊರಿನಿಂದ ಬಂಧುಗಳ ಆಗಮನ. ಕಟ್ಟಡ ನಿರ್ಮಾಪಕರಿಗೆ ಕೆಲಸ ಪೂರ್ಣಗೊಳಿಸಲು ಒತ್ತಡ. ಉದ್ಯೋಗಾಸಕ್ತರಿಗೆ ನೌಕರಿ ಹುಡುಕಲು ಸಹಾಯ.

Advertisement

ಕನ್ಯಾ: ನಿರಂತರ ಕ್ರಿಯಾಶೀಲರಿಗೆ ಕಾರ್ಯವೇ ವಿರಾಮ. ಸಮಗ್ರ ಸಮಾಜದ ಅಭಿವೃದ್ಧಿ ಯೋಜನೆ ಗಳ ಕುರಿತು ಪ್ರಮುಖರೊಂದಿಗೆ ಸಮಾಲೋಚನೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸ ಸಂಭವ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ.

ತುಲಾ: ಅಸಾಧ್ಯವೆಂದು ಎಣಿಸಿದ ಕಾರ್ಯಗಳು ಸಾಧ್ಯವಾಗುತ್ತವೆ. ಹಿರಿಯರ ಭವಿಷ್ಯದ ಕುರಿತು ನಿಶ್ಚಿಂತರಾಗಿರಿ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ಭೇಟಿ. ಗೃಹೋತ್ಪನ್ನ ಘಟಕಕ್ಕೆ ಸಂದರ್ಶನ. ಹತ್ತಿರದ ದೇವಮಂದಿರಕ್ಕೆ ಭೇಟಿ.

ವೃಶ್ಚಿಕ: ಅನಿರೀಕ್ಷಿತವಾಗಿ ಸಂಭವಿಸಿದ ಒಳ್ಳೆಯ ಘಟನೆಗಳು. ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳ ಸಾಧನೆಗೆ ಸರ್ವತ್ರ ಪ್ರಶಂಸೆ. ಕೃಷಿಕ್ಷೇತ್ರಕ್ಕೆ ಕಿರಿಯರ ಪ್ರವೇಶ.ಪಾಲಯದಾರಿಕೆಯಲ್ಲಿ ಹೈನೋದ್ಯಮ ಆರಂಭಿಸಲು ಸಂಕಲ್ಪ. ಮನೆಯಲ್ಲಿ ಪ್ರೀತಿಯ ವಾತಾವರಣ.

ಧನು: ತಾತ್ಕಾಲಿಕ ಹಿನ್ನಡೆಗಳಿಂದ ವಿಚಲಿತರಾಗ ದಿರಿ. ಸಹೋದ್ಯೋಗಿ ಮಿತ್ರರೊಂದಿಗೆ ಸಣ್ಣ ತೀರ್ಥಯಾತ್ರೆ. ಸಮಾಜದ ಏಳಿಗೆ. ಪರಿಸರ ಸ್ವತ್ಛತೆಯ ಕಾರ್ಯಗಳಲ್ಲಿ ಆಸಕ್ತಿ. ದೇವತಾನುಗ್ರಹ ಉತ್ತಮ. ಕೃಷಿ ಸಂಬಂಧಿ ಉದ್ಯಮ ಪ್ರಗತಿ.

ಮಕರ: ದೇವತಾರ್ಚನೆಯಲ್ಲಿ ಪಾಲ್ಗೊಳ್ಳುವ ಸಂದರ್ಭ. ಮಕ್ಕಳಿಗೆ ಪಾಠೇತರ ಚಟುವಟಿಕೆ ಗಳಲ್ಲಿ ಒಳ್ಳೆಯ ಹೆಸರು. ಆಪ್ತ ಸಲಹೆಯಿಂದ ವ್ಯಕ್ತಿತ್ವ ಬೆಳವಣಿಗೆಗೆ ಪ್ರಯತ್ನ. ದಕ್ಷಿಣ ದಿಕ್ಕಿನಲ್ಲಿರುವ ತಂದೆಯ ಕಡೆಯ ಬಂಧುಗಳಿಂದ ಶುಭ ಸಮಾಚಾರ.

ಕುಂಭ: ಬಿಡುವಿಲ್ಲದೆ ಕ್ರಿಯಾನಿರತಾಗಿರುವವರಿಗೆ ಕೆಲಸದÇÉೇ ಮನೋರಂಜನೆ. ವಿರಾಮದ ದಿನದಲ್ಲೂ ಹೊಸ ಹೊಣೆಗಾರಿಕೆಗಳನ್ನು ವಹಿಸಿಕೊಳ್ಳಲು ಆಹ್ವಾನ. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ. ಗ್ರಾಹಕರ ಬೇಡಿಕೆಗಳಿಗೆ ಶೀಘ್ರ ಸ್ಪಂದಿಸಲು ಕ್ರಮ.

ಮೀನ: ಶನಿ ಪ್ರಭಾವದಿಂದ ಕಾರ್ಯ ವಿಳಂಬ ಸಹಜವಾದರೂ ಕ್ರಿಯೆ ನಿಲ್ಲದು. ಅರ್ಧದಲ್ಲಿ ನಿಂತ ಕಾರ್ಯಗಳನ್ನು ಪೂರ್ಣಗೊಳಿಸಲು ಯತ್ನ. ಸಾಮಾಜಿಕ ಕಾರ್ಯಗಳಿಂದ ಕೀರ್ತಿ ವರ್ಧನೆ. ವೃತ್ತಿರಂಗದ ಮಿತ್ರರೊಡನೆ ಸಮಾಲೋಚನೆ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಹಣ್ಣು ವಿತರಣೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next