Advertisement

Daily Horoscope: ಹಲವು ದಿಕ್ಕುಗಳಿಂದ ಒತ್ತಡವಿದ್ದರೂ ಪ್ರಶಂಸೆಗೆ ಪಾತ್ರರಾಗುವಿರಿ

07:23 AM Dec 12, 2023 | Team Udayavani |

ಮೇಷ: ಮಧ್ಯಮ ಫ‌ಲಗಳೇ ಹೆಚ್ಚಾಗಿರುವ ದಿನ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳಲ್ಲಿ ಕುಗ್ಗದ ಉತ್ಸಾಹ. ಹೊಸದಾಗಿ ಆರಂಭಿಸಿದ ಉದ್ಯಮದ ಪ್ರಗತಿ ಮಧ್ಯಮ ಗತಿಯಲ್ಲಿ. ಕಾರ್ಯ ವಿಸ್ತರಣೆಗೆ ಬ್ಯಾಂಕ್‌ ನೆರವು ಕೋರಿಕೆ.

Advertisement

ವೃಷಭ: ಉದ್ಯೋಗದಲ್ಲಿ ಸ್ಥಿರವಾದ ಗೌರವ. ಸರಕಾರಿ ನೌಕರರಿಗೆ ನಿರೀಕ್ಷೆಯಿರದ ಸ್ಥಾನಕ್ಕೆ ವರ್ಗಾವಣೆ ಸಂಭವ. ವಸ್ತ್ರ, ಯಂತ್ರೋಪ ಕರಣ ಹಾಗೂ ಗೃಹಸಾಮಗ್ರಿ ಉದ್ಯಮಿಗಳ ಆದಾಯ ವೃದ್ಧಿ. ಪಿತ್ರಾರ್ಜಿತ ಕೃಷಿಭೂಮಿಯಲ್ಲಿ ಅಭಿವೃದ್ಧಿ ಕಾರ್ಯ.

ಮಿಥುನ: ಕಾರ್ಯನಿರ್ವಹಣೆಯಲ್ಲಿ ಉತ್ಸಾಹ ಉಳಿಸಿಕೊಳ್ಳುವುದು ಅನಿವಾರ್ಯವಾದ ಪರಿಸ್ಥಿತಿ. ಹಲವು ದಿಕ್ಕುಗಳಿಂದ ಒತ್ತಡವಿದ್ದರೂ ಪ್ರಶಂಸೆಗೆ ಪಾತ್ರರಾಗುವಿರಿ. ಉದ್ಯಮಕ್ಕೆ ಹೊಸ ಪಾಲುದಾರರ ಸೇರ್ಪಡೆಯ ಮೂಲಕ ಸುಧಾರಣೆಗೆ ಯತ್ನ.

ಕರ್ಕಾಟಕ: ಸಂಸಾರದಲ್ಲಿ ಹರ್ಷ ತುಂಬುವ ಘಟನೆ. ಉದ್ಯೋಗದಲ್ಲಿ ಸ್ಥಾನಬಲ ವೃದ್ಧಿ ಉದ್ಯಮ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆ. ಉತ್ಪನ್ನಗಳ ಮತ್ತು ಸೇವೆಗಳ ಗುಣಮಟ್ಟ ಏರಿಕೆಯಿಂದ ಜನಪ್ರಿಯತೆ ಹೆಚ್ಚಳ. ಹೈನುಗಾರಿಕೆ ಉದ್ಯಮವನ್ನು ವಿಸ್ತರಿಸಲು ಚಿಂತನೆ.

ಸಿಂಹ: ಉದ್ಯಮದ ನೌಕರರ ಸಮಸ್ಯೆ ಸಂಧಾನ ಮೂಲಕ ಪರಿಹಾರ. ಉದ್ಯೋಗಸ್ಥರಿಗೆ ಗೌರವದ ಸ್ಥಾನ. ಊರಿನ ಅಭಿವೃದ್ಧಿ ಕ್ರಮಗಳಿಗೆ ಸರಕಾರಿ ನೆರವು ದೊರ ಕಿ ಸಲು ಯತ್ನ. ಖಾದಿ, ಸ್ವದೇಶಿ ಉದ್ಯಮಗಳಿಗೆ ಉತ್ಕರ್ಷದ ಕಾಲ. ಲೋಹ ಉದ್ಯಮಗಳ ಅಭಿವೃದ್ಧಿ ಅಬಾಧಿತ.

Advertisement

ಕನ್ಯಾ: ಕ್ರಿಯಾಶೀಲ ಪ್ರವೃತ್ತಿಗೆ ಪೋಷಣೆ ನೀಡಿದ ಹೆಚ್ಚುವರಿ ಜವಾಬ್ದಾರಿ. ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಲು ಒತ್ತಡ. ಸಂಸ್ಥೆಯ ಪ್ರಮುಖರಿಂದ ಪ್ರತ್ಯಕ್ಷ ಕಾರ್ಯ ವೀಕ್ಷಣೆ. ಸ್ವಂತ ಉದ್ಯಮ ಬೆಳವಣಿಗೆಗೆ ಹಿತೈಷಿಗಳ ಅಯಾಚಿತ ನೆರವು.

ತುಲಾ: ಮನೋಬಲ ವೃದ್ಧಿಯ ಪರಿಣಾಮವಾಗಿ ನಿಶ್ಚಿಂತೆಯಿಂದ ದಿನಚರಿ ಆರಂಭ. ಸಹೋದ್ಯೋಗಿಗಳಿಂದ ವಿಶೇಷ ಪ್ರೀತಿ ಪ್ರಕಟನೆ. ಮಕ್ಕಳ ಪ್ರತಿಭೆಗೆ ಶಿಕ್ಷಕ ವೃಂದ ದಿಂದ ವಿಶೇಷ ಪೋಷಣೆ. ಕುಶಲಕರ್ಮಿಗಳ ಕೃತಿ ಗಳಿಗೆ ಅಧಿಕ ಬೇಡಿಕೆ.

ವೃಶ್ಚಿಕ: ಕೆಲವೇ ದಿನಗಳಲ್ಲಿ ಆಗುವ ಆನಂದ ದಾಯಕ ಅನುಭವಗಳು ನಿಮ್ಮದಾಗಲಿವೆ. ಉದ್ಯೋಗದಲ್ಲಿ ತಪ್ಪು ಹುಡುಕುವವರಿಂದಲೇ ಪ್ರಶಂಸೆ. ಜನಸೇವಾಸಕ್ತ ಪ್ರಾಮಾಣಿಕ ಅಧಿಕಾರಿಗಳಿಗೆ ಮನ್ನಣೆ. ಉಪಕೃತರಾದವರಿಂದ ಬಹಿರಂಗವಾಗಿ ಕೃತಜ್ಞತೆ ಸಲ್ಲಿಕೆ.

ಧನು: ಕ್ರಿಯಾಶೀಲತೆಗೆ ಪೂರಕವಾದ ಹೊಸ ಬಗೆಯ ಕೆಲಸಗಳು. ಉದ್ಯೋಗ ಸ್ಥಾನದಲ್ಲಿ ಮತ್ತೂಂದು ವಿಭಾಗದ ಜವಾಬ್ದಾರಿ. ಪೂರಕ ವಾತಾವರಣದಲ್ಲಿ ಉದ್ಯಮ ಅಭಿವೃದ್ಧಿ. ವಸ್ತ್ರ, ಸಿದ್ಧವಸ್ತ್ರ, ಪಾದರಕ್ಷೆ, ಶೋಕಿಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷಿತ ಆದಾಯ.

ಮಕರ: ಒತ್ತಡವಿದ್ದರೂ ಸಮಾಧಾನದ ಸ್ಥಿತಿಯಲ್ಲಿ ದಿನದ ಕಾರ್ಯಾರಂಭ. ನಿಗದಿತ ಸಮಯದಲ್ಲಿ ಕಾರ್ಯ ಮುಗಿಸುವ ಭರವಸೆ. ಸರಕಾರಿ ಉದ್ಯೋಗಸ್ಥರಿಗೆ ವರ್ಗಾವಣೆಯ ಚಿಂತೆ. ಉದ್ಯೋಗಾಸಕ್ತ ಕುಶಲ ಕರ್ಮಿಗಳಿಗೆ ಉತ್ತಮ ಅವಕಾಶ. ಸಿದ್ಧ ಉಡುಪು ವ್ಯಾಪಾರಿಗಳಿಗೆ ವಿಶೇಷ ಲಾಭ.

ಕುಂಭ: ವೃತ್ತಿಪರರಿಗೆ ದಿನದಿನವೂ ಎದು ರಾಗುವ ಹೊಸ ಸವಾಲುಗಳು. ಸ್ವಂತ ಉದ್ಯಮದ ಅಭಿ ವೃದ್ಧಿಗೆ ಎದುರಾದ ವಿಘ್ನಗಳ ನಿವಾರಣೆ. ಕಟ್ಟಡ ನಿರ್ಮಾಣ ಕಾರ್ಯಗಳು ತ್ವರಿತವಾಗಿ ಮುನ್ನಡೆ. ಸಿವಿಲ್‌ ಎಂಜಿ ನಿಯರಿಂಗ್‌ ವೃತ್ತಿಯವರಿಗೆ ಉನ್ನತ ಹು¨ªೆ ಪ್ರಾಪ್ತಿ.

ಮೀನ: ಉನ್ನತ ಸ್ಥಾನದಲ್ಲಿರುವವರ ಒಡನಾಟ. ಉದ್ಯೋಗದಲ್ಲಿ ಹೊಸ ವಿಭಾಗಗಳ ಉಸ್ತುವಾರಿಯ ಜವಾಬ್ದಾರಿ. ಸೇವಾ ತತ್ಪರತೆಯಿಂದ ವಿಶ್ವಾಸ ವೃದ್ಧಿ. ನೂತನ ಗೃಹ ನಿರ್ಮಾಣಕ್ಕೆ ಯೋಜನೆ. ದೇವೀ ಕ್ಷೇತ್ರ ಭೇಟಿ ಸಂಭವ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಹಾಗೂ ಲವಲವಿಕೆ.

Advertisement

Udayavani is now on Telegram. Click here to join our channel and stay updated with the latest news.