Advertisement

Daily Horoscope: ಗಣೇಶ,ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ತಾಳ್ಮೆಯಿಂದ ಕಾರ್ಯ ಯಶಸ್ಸು

07:28 AM Aug 27, 2023 | Team Udayavani |

ಮೇಷ: ಆರೋಗ್ಯ ಸ್ಥಿರ. ಉದ್ಯೋಗಸ್ಥರು ವ್ಯವಹಾರಸ್ಥರಿಗೆ ವಿಪುಲ ಅವಕಾಶ. ಹಲವು ಕಾಲದಿಂದ ಕಾಡುತ್ತಿರುವ ಜಟಿಲ ಸಮಸ್ಯೆಗೆ ಪರಿಹಾರ. ಶುಭ ಕಾರ್ಯಕ್ಕೊದಗಿದ ವಿಘ್ನ ದೂರ. ಗೃಹಿಣಿಯರಿಗೆ, ಮಕ್ಕಳಿಗೆ ಆನಂದದ ದಿನ.

Advertisement

ವೃಷಭ: ವೃತ್ತಿರಂಗದಲ್ಲಿ ಮುನ್ನಡೆ. ಸ್ವತಂತ್ರ ಉದ್ಯಮಿಗಳಿಗೆ ಎದುರಾಳಿಗಳಿಂದ ಸ್ಪರ್ಧೆ. ಗುರುಸಮಾನರ ಅಕಸ್ಮಾತ್‌ ಭೇಟಿ. ಸಂಗಾತಿಯ ಮನೋಗತವನ್ನು ಗೌರವಿಸಿ ನಡೆದುಕೊಂಡರೆ ಕ್ಷೇಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ. ಶುಭ ಕಾರ್ಯ ನಡೆಸುವ ಬಗ್ಗೆ ಚಿಂತನೆ. ಜೀವನದಲ್ಲಿ ಹಿರಿಯರ ಆರೋಗ್ಯದತ್ತ ಗಮನವಿರಲಿ. ಪಶ್ಚಿಮ ದಿಕ್ಕಿನಿಂದ ಶುಭ ಸಮಾಚಾರ ನಿರೀಕ್ಷೆ. ಗೃಹಿಣಿಯರಿಗೆ ಸಮಾಧಾನ.

ಕರ್ಕ: ನಾಮಸ್ಮರಣೆಯ ಮೂಲಕ ಖನ್ನತೆಯನ್ನು ತೊಲಗಿಸಿ. ಉದ್ಯೋಗ, ವ್ಯವಹಾರದಲ್ಲಿ ಯಶಸ್ಸಿನತ್ತ ದಾಪುಗಾಲು. ವೈವಾಹಿಕ ಜೀವನದಲ್ಲಿ ಸಂತೃಪ್ತಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಆನಂದ.

ಸಿಂಹ: ಕಾರ್ಯತತ್ಪರರಿಗೆ ಶ್ಲಾಘನೆ. ಹೊಸ ಅವಕಾಶ ಅನ್ವೇಷಣೆ. ಗೆಳೆಯರಿಂದ ಸಹಕಾರ. ಅನಿರೀಕ್ಷಿತ ಧನಾಗಮ. ಗುರುಹಿರಿಯರ ಮಾರ್ಗದರ್ಶನದಿಂದ ಕಾರ್ಯ ಯಶಸ್ವಿ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ.

Advertisement

ಕನ್ಯಾ: ಆವಶ್ಯಕತೆಗೆ ಸರಿಯಾಗಿ ಧನಾಗಮ. ದೂರದಿಂದ ಶುಭವಾರ್ತೆ. ವಾಹನ ಖರೀದಿ ಯೋಜನೆ ಮುನ್ನಡೆ. ಹಿರಿಯರ ಮತ್ತು ಗೃಹಿಣಿಯರ ಆರೋಗ್ಯ ಗಮನಿಸಿ. ವರ- ವಧು ಅನ್ವೇಷಣೆಯಲ್ಲಿ ಪ್ರಗತಿ.

ತುಲಾ: ಚಿತ್ತ ಚಾಂಚಲ್ಯಕ್ಕೆ ಎಡೆಗೊಡದಿರಿ. ಪತಿ- ಪತ್ನಿಯರೊಳಗೆ ಪರಸ್ಪರ ಸಹಾಯ. ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ.ಗುರುಹಿರಿಯರ ಮಾರ್ಗದರ್ಶನ ಲಭ್ಯ.ಮಕ್ಕಳಿಂದ ಮನೆಯಲ್ಲಿ ಸಂತಸದ ವಾತಾವರಣ.

ವೃಶ್ಚಿಕ: ಸತ್ಕರ್ಮಗಳ ಫ‌ಲ ಲಭಿಸುವ ಸಮಯ ಒದಗಿ ಬರಲಿದೆ. ಹಿರಿಯರಿಗೆ ಆರೋಗ್ಯ ಉತ್ತಮ. ತಾಳ್ಮೆಯಿಂದ ಕಾರ್ಯದಲ್ಲಿ ಯಶಸ್ಸು. ಪಶ್ಚಿಮ ದಿಕ್ಕಿಗೆ ಪಯಣ ಸಂಭವ. ಗೃಹಿಣಿಯರಿಗೆ, ಮಕ್ಕಳಿಗೆ ಶುಭ.

ಧನು: ಸಮಾಧಾನದ ವರ್ತನೆಯಿಂದ ಸಕಲ ಕಾರ್ಯಸಿದ್ಧಿ. ವಸ್ತ್ರೋದ್ಯಮಿಗಳಿಗೆ ಅಧಿಕ ಲಾಭ. ಉದ್ಯೋಗಸ್ಥರಿಗೆ ಮಂದ ಗತಿಯಲ್ಲಿ ಮುನ್ನಡೆ. ವಿವಾಹ ಮಾತುಕತೆ ಯಶಸಿಯಾಗಲಿದೆ. ಮಕ್ಕಳ ವಿದ್ಯಾಭ್ಯಾಸ ಮುನ್ನಡೆ‌.

ಮಕರ: ಅಭಿಪ್ರಾಯ ವ್ಯಕ್ತಪಡಿಸಲು ಆತುರ ಬೇಡ. ಉದ್ಯೋಗ, ವ್ಯವಹಾರ ಪ್ರಗತಿ. ಸಾಗರೋತ್ಪನ್ನ ವ್ಯಾಪಾರಿಗಳಿಗೆ ಹೇರಳ ಲಾಭ. ದೇವತಾರ್ಚನೆಯಲ್ಲಿ ಆಸಕ್ತಿ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಶುಭ.

ಕುಂಭ: ಸೇವಾ ಕಾರ್ಯಗಳಲ್ಲಿ ಆಸಕ್ತಿ ಉದ್ಯೋಗಸ್ಥರಿಗೆ ಹುದ್ದೆಯಲ್ಲಿ ಪದೋನ್ನತಿ ಸಂಭವ. ಗೃಹಿಣಿಯರಿಗೆ ದ್ರವ್ಯಲಾಭ. ಉನ್ನತ ವ್ಯಾಸಂಗಾಸಕ್ತರಿಗೆ ಅನುಕೂಲದ ವಾತಾವರಣ. ಹಿರಿಯರಿಗೆ, ಮಕ್ಕಳಿಗೆ ಸಂತಸದ ವಾತಾವರಣ.

ಮೀನ: ದೂರದ ಸ್ಥಳಕ್ಕೆ ಭೇಟಿ ಸಂಭವ. ಹೊಸ ಕಾರ್ಯಾರಂಭಕ್ಕೆ ವಿಘ್ನ ಸಾಧ್ಯತೆ . ಹಳೆಯ ವಿವಾದ ಪರಿಹಾರ. ಕೃಷ್ಯುತ್ಪನ್ನಗಳಿಂದ ಲಾಭ ಗಳಿಸುವಿರಿ. ಹಿರಿಯರ, ಗೃಹಿಣಿಯರ,ಮಕ್ಕಳ ಆರೋಗ್ಯ ಸ್ಥಿರ.

Advertisement

Udayavani is now on Telegram. Click here to join our channel and stay updated with the latest news.

Next