Advertisement
ವೃಷಭ: ಭವಿಷ್ಯದ ಯೋಜನೆಗಳ ಕುರಿತು ಚಿಂತನೆ ಅನ್ವೇಷಕರದು. ವಿಶಿಷ್ಟ ಅವಕಾಶಗಳ ಅನಾವರಣ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ಒಬ್ಬ ಪ್ರಮುಖ ವ್ಯಕ್ತಿಯ ಭೇಟಿ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ.
Related Articles
Advertisement
ಕನ್ಯಾ: ಸರಕಾರಿ ಉದ್ಯೋಗಸ್ಥರಿಗೆ ವಿರಾಮದ ಆನಂದ. ಸಹೋದ್ಯೋಗಿ ಮಿತ್ರರ ಸಂತೋಷ ಕೂಟ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ. ಕೆಲವರಿಗೆ ರಕ್ತದಾನ ಮಾಡುವ ಅವಕಾಶ.
ತುಲಾ: ಕೆಲವು ಕ್ಷೇತ್ರಗಳವರಿಗೆ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ಉದ್ಯೋಗ ಅರಸುವವರಿಗೆ ಆಶಾದಾಯಕ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ವಿದೇಶದಲ್ಲಿರುವ ಮಿತ್ರನ ಆಗಮನ.
ವೃಶ್ಚಿಕ: ಸದ್ಯೋಭವಿಷ್ಯದಲ್ಲಿ ಯಾವುದೇ ಹಾನಿಯಾಗದು. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಸಾಂಸಾರಿಕ ನೆಮ್ಮದಿ ಕೆಡಿಸುವವರಿಗೆ ಮುಖಭಂಗ.
ಧನು:ಉದ್ಯಮದ ವೈವಿಧಿÂàಕರಣ ಯೋಜನೆ ಅನುಷ್ಠಾನ ಆರಂಭ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ.ಮಕ್ಕಳ ಅಧ್ಯಯನಾಸಕ್ತಿ ಹಾಗೂ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ನೆರವಿನ ಯೋಜನೆಗಳಲ್ಲಿ ಭಾಗಿ.
ಮಕರ:ಮನೆಯವರ ಜೊತೆಯಲ್ಲಿ ವಿರಾಮದ ಆನಂದಾನುಭವ. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ದೊಡ್ಡ ಮೊತ್ತದ ಲಾಭ. ಹಿರಿಯರ, ಮಕ್ಕಳ ಆರೋಗ್ಯ ಸುಧಾರಣೆ.
ಕುಂಭ:ವಿರಾಮದಂದು ಮಂದಗತಿಯಲ್ಲಿ ಸಾಗುವ ಕೆಲಸ, ಕಾರ್ಯಗಳು. ಉದ್ಯೋಗಸ್ಥ ರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆ. ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ. ಕೃಷ್ಯುತ್ಪಾದನೆ ವೃದ್ಧಿಯಲ್ಲಿ ಯಶಸ್ಸು. ಟೈಲರಿಂಗ್, ವೈಂಡಿಂಗ್ ಬಲ್ಲವರಿಗೆ ಅಧಿಕ ಆದಾಯ.
ಮೀನ: ವಿರಾಮದ ಕಾರಣ ಮೈಮನಗಳಿಗೆ ಆಲಸ್ಯ. ಸೋದರ ಸೋದರಿಯ ಭೇಟಿ. ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.ಅನಾಥಾಶ್ರಮ, ವೃದ್ಧಾ ಶ್ರಮಕ್ಕೆ ಭೇಟಿ, ನೊಂದವರಿಗೆ ಸಾಂತ್ವನ.