Advertisement

ರಾಶಿ ಫಲ: ದೂರದ ವ್ಯವಹಾರ ಪ್ರಗತಿ, ಧನಾಗಮನಕ್ಕೆ ಸರಿಯಾಗಿ ಧನ ವ್ಯಯ

07:21 AM Apr 05, 2023 | Team Udayavani |

ಮೇಷ: ದೀರ್ಘ‌ ಪ್ರಯಾಣ. ನಷ್ಟ ದ್ರವ್ಯವನ್ನು ಪಡೆಯಲು ಪ್ರಯತ್ನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ದೂರದ ವ್ಯವಹಾರಗಳಿಂದ ಧನಾಗಮನ. ಅಧ್ಯಯನ ಪ್ರವೃತ್ತರಿಗೆ ಪರಿಶ್ರಮದಿಂದ ನಿರೀಕ್ಷಿತ ಸ್ಥಾನ ಲಾಭ.

Advertisement

ವೃಷಭ: ಅನಿರೀಕ್ಷಿತ ಸ್ಥಾನ ವೃದ್ಧಿ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಉತ್ತಮ ವಾಕ್‌ ಚತುರತೆಯಿಂದ ಕೂಡಿದ ನಡೆ. ಧನ ಸಂಪತ್ತಿನ ಅಭಿವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮಾನಸಿಕ ತೃಪ್ತಿ.

ಮಿಥುನ: ಮಕ್ಕಳಿಂದ ಸಂತೋಷ ವೃದ್ಧಿ. ಅಧ್ಯಯನ ಪ್ರವೃತ್ತಿ. ದೂರದ ವ್ಯವಹಾರ ಪ್ರಗತಿ. ಬಂಧು ಮಿತ್ರರ ಸಹಕಾರ. ಗುರು ಹಿರಿಯರಿಂದ ಪ್ರೋತ್ಸಾಹ, ಮಾರ್ಗದರ್ಶನ. ದೈಹಿಕ ಮಾನಸಿಕ ಆರೋಗ್ಯ ವೃದ್ಧಿ. ಧನಾಗಮನಕ್ಕೆ ಸರಿಯಾಗಿ ಧನ ವ್ಯಯ.

ಕರ್ಕ: ಆರೋಗ್ಯ ಗಮನಿಸಿ. ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿ. ದಂಪತಿಗಳಿಗೆ ಪರಸ್ಪರ ಪ್ರೋತ್ಸಾಹ ಅಗತ್ಯ. ಪಾಲುದಾರಿಕಾ ವ್ಯವಹಾರಗಳಲ್ಲಿ ಸ್ಪಷ್ಟತೆ ಇರಲಿ. ಆಸ್ತಿ ಕ್ರಮ ವಿಕ್ರಯ ವಿಚಾರದಲ್ಲಿ ಮುನ್ನಡೆ.

ಸಿಂಹ: ಆರೋಗ್ಯ ಗಮನಿಸಿ. ಹಠಮಾರಿತನ ದಿಂದ ನಷ್ಟ ಸಂಭವ. ಆರ್ಥಿಕ ವಿಚಾರಗಳಲ್ಲಿ ಪ್ರಗತಿ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ಚರ್ಚೆಗೆ ಅವಕಾಶ ನೀಡದಿರಿ. ಸಾಂಸಾರಿಕ ಸುಖ ಮಧ್ಯಮ.

Advertisement

ಕನ್ಯಾ: ಉತ್ತಮ ವಾಕ್‌ಚತುರತೆ ಪ್ರದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಗೌರವ ಸುಖಾದಿ ಲಭ್ಯ. ಉತ್ತಮ ಧನಾರ್ಜನೆ. ಅಧ್ಯಯನ ಪ್ರವೃತ್ತರಿಗೆ ಸರ್ವ ಸೌಲಭ್ಯ ಪ್ರಾಪ್ತಿ. ದಂಪತಿಗಳಿಗೆ ಪರಸ್ಪರರಿಂದ ಲಾಭ.

ತುಲಾ: ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಲಾಭ. ಗೌರವಾದಿ ವೃದ್ಧಿ. ಎಲ್ಲರೂ ನೆನಪಿಡುವಂತಹ ಕಾರ್ಯಶೈಲಿ. ಸ್ವಾರ್ಜಿತ ಧನ ಸಂಪತ್ತು ವೃದ್ಧಿ. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಚರ್ಚೆಗೆ ಆಸ್ಪದ ನೀಡದೆ ದೂರದ ವ್ಯವಹಾರಗಳಲ್ಲಿ ಪ್ರಗತಿ. ಆರೋಗ್ಯ ಉತ್ತಮ.

ವೃಶ್ಚಿಕ: ಅನಿರೀಕ್ಷಿತ ಧನ ಸಂಪತ್ತಿನ ವೃದ್ಧಿ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಬಂಧು ಮಿತ್ರರ ಸಹಾಯ ಲಭಿಸದು. ನಿಮ್ಮ ಪರಿಶ್ರಮದಲ್ಲಿ ವಿಶ್ವಸವಿಟ್ಟು ಕಾರ್ಯ ಸಾಧಿಸಿ. ಮಕ್ಕಳಿಂದ ಸಂತೋಷ. ಗುರು ಹಿರಿಯರಿಂದ ಉತ್ತಮ ಸಹಕಾರ.

ಧನು: ಕೆಲಸ ಕಾರ್ಯಗಳಲ್ಲಿ ಚಾಣಾಕ್ಷತನ ಜವಾಬ್ದಾರಿಯಿಂದ ಯಶಸ್ಸು. ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯದಿಂದ ನಷ್ಟ ಸಂಭವ. ವಿದ್ಯಾರ್ಥಿಗಳಿಗೆ ವಿಫ‌ುಲ ಅವಕಾಶ. ಪ್ರಗತಿಪರ ಬದಲಾವಣೆ. ದಾಂಪತ್ಯ ತೃಪ್ತಿಕರ. ಗುರು ಹಿರಿಯರ ಆರೋಗ್ಯ ಸ್ಥಿರ.

ಮಕರ: ಮಕ್ಕಳ ನಿಮಿತ್ತ ಹೆಚ್ಚಿದ ಜವಾಬ್ದಾರಿ. ಮನೆಯಲ್ಲಿ ಸಂತಸದ ವಾತಾವರಣಕ್ಕೆ ತೊಂದರೆ ಆಗದಂತೆ ಕಾರ್ಯ ಪ್ರವೃತ್ತರಾಗಿ. ಮಾತಿನಲ್ಲಿ ತಾಳ್ಮೆ ಸಹಕಾರ ಅಗತ್ಯ. ಬಂಧು ಮಿತ್ರರಲ್ಲಿ ನಿಷ್ಠರ ವರ್ತನೆ ಸಲ್ಲದು. ಹಣಕಾಸಿನ ವಿಚಾರದಲ್ಲಿ ಪ್ರಗತಿ.

ಕುಂಭ: ಸಣ್ಣ ಪ್ರಯಾಣ ಸಂಭವ. ಅಧ್ಯಯನದಲ್ಲಿ ಮಗ್ನತೆ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಆರೋಗ್ಯ ಗಮನಿಸಿ. ಸಾಂಸಾರಿಕ ಸುಖ ಮಧ್ಯಮ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ದೂರದ ಮಿತ್ರರ ಭೇಟಿ.

ಮೀನ: ನಷ್ಟ ವಸ್ತುಗಳು ಪ್ರಯತ್ನಿಸಿದರೆ ಸಿಗುವ ಸಂಭವ. ಧನ ಸಂಪತ್ತಿನ ಅನಿರೀಕ್ಷಿತ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಆದರದ ಮನ್ನಣೆ. ಸಹೋದ್ಯೋಗಿಗಳಿಂದ ಅಲ್ಪ ಸಹಾಯ. ಅಸ್ತಿ ವಿಚಾರದಲ್ಲಿ ಬದಲಾವಣೆ ಸಂಭವ. ಅಧ್ಯಯನದಲ್ಲಿ ತಲ್ಲೀನತೆಯಿಂದ ಮಾನಸಿಕ ತೃಪ್ತಿ. ಸಾಂಸಾರಿಕ ಸುಖ ತೃಪ್ತಿದಾಯಕ. ದೇವತಾ ಸ್ಥಳ ಸಂದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next