Advertisement
ಮೇಷ: ವೃತ್ತಿರಂಗದಲ್ಲಿ ಆಗಾಗ ಭಿನ್ನಾಭಿಪ್ರಾಯಗಳು ಕಂಡುಬಂದಾವು. ತಾಳ್ಮೆ ಸಂಯಮದಿಂದ ಬಗೆಹರಿಸಿ ಕೊಳ್ಳಿರಿ. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡುಬಂದೀತು.
Related Articles
Advertisement
ಸಿಂಹ: ಉದ್ಯೋಗ ವ್ಯವಹಾರದಲ್ಲಿ ಮುನ್ನಡೆ ಇರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ನಡೆಯಲಿವೆ. ಜಾಗ ಯಾ ನಿವೇಶನ ಖರೀದಿಗೆ ಈಗ ಉತ್ತಮ ಕಾಲವಾಗಿದೆ. ಆರ್ಥಿಕವಾಗಿ ಎಷ್ಟು ದುಡಿದರೂ ಸಾಲದೆಂಬಂತಿರುತ್ತದೆ.
ಕನ್ಯಾ: ಉದ್ಯೋಗಸ್ಥರಿಗೆ ಅಡೆತಡೆಗಳು ಕಂಡುಬಂದಾವು. ಸಾಂಸಾರಿಕವಾಗಿ ನೆಮ್ಮದಿಯ ಜೀವನವಿರುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಮುಂಭಡ್ತಿ ಯೋಗವಿದೆ. ಕೋರ್ಟುಕಚೇರಿಯ ಕಾರ್ಯಭಾಗದಲ್ಲಿ ಹಿನ್ನಡೆ ಕಂಡುಬರಲಿದೆ.
ತುಲಾ: ಈಗ ನಿಮಗೆ ಮಿಶ್ರಫಲದಾಯಕ ವಾತಾವರಣ. ಅಷ್ಟಮದ ರಾಹು ನಾನಾ ರೀತಿಯ ಕಿರಿಕಿರಿಗೆ ಕಾರಣನಾದಾನು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ. ದೈಹಿಕ ವಾಗಿ ಆರೋಗ್ಯದ ಬಗ್ಗೆ ಗಮನಹರಿಸಿರಿ. ವಿದ್ಯಾರ್ಥಿಗಳಿಗೆ ಅಶುಭ.
ವೃಶ್ಚಿಕ: ಅಡೆತಡೆಗಳಿಂದ ಕಾರ್ಯಸಾಧನೆಯಾಗಲಿದೆ. ಮನೆಯ ವಾತಾವರಣ, ಸಾಂಸಾರಿಕ ಜೀವನ ಉತ್ತಮವಿರುತ್ತದೆ. ಕೂಲಿ ಕಾರ್ಮಿಕರಿಗೆ ಉತ್ತಮ ಆದಾಯವಿರುತ್ತದೆ. ರೈತ ವರ್ಗದವರಿಗೂ ಉತ್ತಮ ಫಲ ದೊರಕೀತು.
ಧನು: ವೃತ್ತಿರಂಗದಲ್ಲಿ ಮುನ್ನಡೆಯ ದಿನಗಳಿವು. ಆದರೂ ಹಿರಿಯ ಅಧಿಕಾರಿಗಳ ಕಿರಿಕಿರಿ ಮನಸ್ಸನ್ನು ನೋಯಿಸಲಿದೆ. ವಿದ್ಯಾರ್ಥಿಗಳು ವಿದ್ಯಾಸಂಪನ್ನರಾದಾರು. ಉತ್ತಮ ಫಲಿತಾಂಶವನ್ನು ಪಡೆಯಲಿದ್ದಾರೆ. ದೂರ ಸಂಚಾರವಿದೆ.
ಮಕರ: ಅನಿರೀಕ್ಷಿತವಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ನ್ಯಾಯಾಲಯದ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ಯಶಸ್ಸು ಪಡೆಯಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಗಮನಹರಿಸಬೇಕಾದೀತು. ಕಿರು ಸಂಚಾರವಿದೆ.
ಕುಂಭ:ಕೆಲಸ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ಆಗಲಾರದು. ಸಾಂಸಾರಿಕ ಜೀವನವು ಅಸ್ತವ್ಯಸ್ತ ವಾದೀತು. ಕ್ರೀಡಾಗಾರರಿಗೆ ಯಶಸ್ಸು ಕಂಡುಬರಲಿದೆ. ದೂರ ಸಂಚಾರದಲ್ಲಿ ಆರೋಗ್ಯ ಕೆಡಲಿದೆ. ವಿದ್ಯಾರ್ಥಿಗಳಿಗೆ ಯಶಸ್ಸಿದೆ.
ಮೀನ: ಆಗಾಗ ಅಡೆತಡೆಗಳಿಗೆ ನಿಮ್ಮ ಉದಾಸೀನವೇ ಕಾರಣವಾಗಲಿದೆ. ಬಂದ ಅವಕಾಶವನ್ನು ಪಡೆದು ಕೊಳ್ಳಿರಿ. ಅನಿರೀಕ್ಷಿತ ದೂರ ಸಂಚಾರದ ಯೋಗವಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಹೊಂದಲಿದ್ದಾರೆ.
ಎನ್.ಎಸ್. ಭಟ್