Advertisement

ಇಂದಿನ ಗ್ರಹಬಲ: ಈ ರಾಶಿಯವರಿಂದು ಉತ್ತಮ ಧಾರ್ಮಿಕ ನಡವಳಿಕೆಯಿಂದಾಗಿ ಜನ ಸಂಪರ್ಕ ಗಳಿಸುವಿರಿ

07:47 AM Feb 13, 2021 | Team Udayavani |

13-02-2021

Advertisement

ಮೇಷ: ಮಾನಸಿಕವಾಗಿ ದುರ್ಬಲರಾಗಿ ಭಾವೋದ್ರೇಕಕ್ಕೆ ಅನಾವಶ್ಯಕವಾಗಿ ವಶವಾಗುತ್ತೀರಿ. ಅತಿಯಾದ ವಿಶ್ವಾಸವನ್ನು ತೋರಿಸುವುದು ಮುಖ್ಯವಲ್ಲ. ಕೈಗೊಳ್ಳುವ ಕೆಲಸಕಾರ್ಯಗಳಲ್ಲಿ ವೈಪರೀತ್ಯ ಹೆಚ್ಚು. ಮನಸ್ಸನ್ನು ಸರಿಯಾಗಿಟ್ಟುಕೊಳ್ಳಿ.

ವೃಷಭ: ಉತ್ತಮ ಸಂಸ್ಕಾರವನ್ನು ಹೊಂದಿ ಸಾತ್ವಿಕ ಮೇಧಾಶಕ್ತಿಯನ್ನು ಹೊಂದಿರುವ ನಿಮಗೆ ಜೀವನದಲ್ಲಿ ಹತ್ತು ಹಲವು ಬಗೆಯ ಕಷ್ಟಗಳು ಎದುರಾದಾವು. ಆದರೆ ಎದೆಗುಂದದಿರಿ. ವಿಶ್ವಾಸ, ಆತ್ಮಸ್ಥೈರ್ಯವು ನಿಮ್ಮನ್ನು ಮುನ್ನಡೆಸೀತು.

ಮಿಥುನ: ಮಾನಸಿಕವಾಗಿ ಪ್ರಬುದ್ಧರಾದ ನೀವು, ವಿದ್ಯಾರ್ಜನೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ನಿಮಗೆ ಹೆಚ್ಚಿನ ವಿದ್ಯೆಯು ತಗಲುವ ಭಾಗ್ಯವಿದೆ. ಉತ್ತಮ, ಭವ್ಯ ಭವಿಷ್ಯಕ್ಕಾಗಿ ಎದುರು ನೋಡುವಿರಿ. ಆರೋಗ್ಯವು ಉತ್ತಮವಿದೆ.

ಕರ್ಕ: ಸಂಕಷ್ಟದಲ್ಲಿರುವವರಿಗೆ ಸಹಕಾರ, ಸಹಾಯ ನೀಡುವ ನಿಮಗೆ ಕೆಲವು ಸಮಸ್ಯೆಗಳು ಕಾಡುತ್ತಿರುತ್ತದೆ. ಆದರೆ ಸಮಸ್ಯೆ ಹೇಗೆ ಬರುವುದೋ ಹಾಗೇ ಹಿಂತಿರುಗಲಿದೆ. ಮಕ್ಕಳ ವಿದ್ಯೆಯ ಬಗ್ಗೆ ಹೆಚ್ಚಿನ ಚಿಂತೆ ಮಾಡದಿರಿ.

Advertisement

ಸಿಂಹ: ವಿಪರೀತ ಆತ್ಮಾಭಿಮಾನ ಹಾಗೂ ಆತ್ಮಸ್ಥೈರ್ಯ ದಿಂದ ಬೃಹತ್‌ ಕಾರ್ಯಗಳನ್ನು ಏಕಾಂಗಿಯಾಗಿ ಮಾಡಲು ಯತ್ನಿಸುವಿರಿ. ಅದರಲ್ಲಿ ಜಯ ಗಳಿಸುವಿರಿ. ಕೆಲವೊಮ್ಮೆ ಕಷ್ಟಗಳನ್ನು ಎದುರಿಸಿ ಕುಗ್ಗಿ ಹೋಗುವಿರಿ. ಎದೆಗುಂದದಿರಿ.

ಕನ್ಯಾ: ಉತ್ತಮ ಧಾರ್ಮಿಕ ನಡವಳಿಕೆಯಿಂದಾಗಿ ಜನ ಸಂಪರ್ಕ ಗಳಿಸುವಿರಿ. ಅತ್ಯಂತ ಕಡಿಮೆ ಗೆಳೆಯರನ್ನು ಹೊಂದಿರುವ ನಿಮಗೆ ಯಾರ ಮೇಲೂ ವಿಶ್ವಾಸವಿರದು. ಸಂಶಯಪ್ರವೃತ್ತಿಯಿಂದ ಕೆಡುವಿರಿ. ಜಾಗ್ರತೆ ಮಾಡಿರಿ.

ತುಲಾ: ಚುರುಕು ಗ್ರಹಣಶಕ್ತಿ ಹೊಂದಿರುವ ನೀವು ಬೇಡದ ವಿಚಾರಗಳನ್ನು ಮನಸ್ಸಿಗೆ ತಂದುಕೊಂಡು ಮಾನಸಿಕವಾಗಿ ಪರದಾಡುವಿರಿ. ಪ್ರತಿಯೊಂದನ್ನೂ ತೂಗಿ ಅಳೆಯುವ ಪ್ರವೃತ್ತಿ ಬಿಟ್ಟುಬಿಡಿರಿ. ಸಾವಕಾಶವಾಗಿ ಇದ್ದರೆ ಉತ್ತಮ.

ವೃಶ್ಚಿಕ: ಜೀವನದಲ್ಲಿ ಉತ್ತೇಜನವನ್ನು ಕೊಡದಿದ್ದರೆ ಆಕಾಶವೇ ತಲೆ ಮೇಲೆ ಬಿದ್ದಂತೆ ಕೈಕಟ್ಟಿ ಕುಳಿತು ಕೊಳ್ಳದಿರಿ. ಹಾಗೂ ಮಾನಸಿಕವಾಗಿ ಕುಗ್ಗದಿರಿ. ಉತ್ಸಾಹದಿಂದ ಮುನ್ನಡೆದರೆ ಕಾರ್ಯಸಿದ್ಧಿಯಾಗಲಿದೆ. ಶುಭವಾರ್ತೆ ಇದೆ.

ಧನು: ವಿವಾಹದ ನಂತರ ನಿಮಗೆ ಎಲ್ಲಾ ರೀತಿಯ ಸಕಲ ಸೌಭಾಗ್ಯಗಳ ಯೋಗ ಮೂಡಿ ಬಂದು ದೈವಾನುಗ್ರಹವಾಗಲಿದೆ. ಪತ್ನಿಯ ಉದ್ಯೋಗದ ತಲೆಬಿಸಿಯು ಕಡಿಮೆಯಾಗಲಿದೆ. ಉತ್ತಮ ನಿರೀಕ್ಷೆಯನ್ನು ಮಾಡಿರಿ.

ಮಕರ: ಎಲ್ಲವನ್ನು ಸಮಭಾವದಿಂದ ಸ್ವಿಕರಿಸಿದ್ದಲ್ಲಿ ನೀವು ಧನ್ಯರಾದೀರಿ. ಇಲ್ಲದಿದ್ದಲ್ಲಿ ತಲೆಬಿಸಿ ತಪ್ಪದು. ನಿಮ್ಮ ಎಣಿಕೆಗೆ ವಿರೋಧವಾಗಿ ನಡೆಯುವುದರಿಂದ ಆಶಾಭಂಗದ ಅನುಭವವಾದೀತು. ಚಿಂತಿಸದೆ ಮುನ್ನಡೆಯಿರಿ.

ಕುಂಭ: ಮಕ್ಕಳ ಮೇಧಾಶಕ್ತಿಯಲ್ಲಿ ಅಪಾರ ನೀರೀಕ್ಷೆ ಇಟ್ಟುಕೊಂಡ ನಿಮಗೆ ಆಶಾಭಂಗವಾದೀತು. ಸಕಾಲಕ್ಕೆ ಮಿತ್ರರ ಸಹಾಯ ಒದಗಿ ಬಂದೀತು. ದ್ರವ್ಯ ವಸ್ತುಗಳ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದ್ದರೂ ಅಷ್ಟೇ ಖರ್ಚಿದೆ.

ಮೀನ: ವ್ಯವಹಾರದಲ್ಲಿ ಹೆಚ್ಚಿನ ಲಾಭ ಬಂದರೂ ವಂಚನೆಗೆ ಅವಕಾಶ ತಂದೀತು. ಯಾವುದೇ ವಿಚಾರದಲ್ಲಿ ಕಾದು ನೋಡುವ ಪ್ರವೃತ್ತಿ ರೂಢಿಸಿಕೊಳ್ಳಿರಿ. ತಟ್ಟನೆ ಯಾವುದಕ್ಕೂ ಉತ್ತರಿಸದಿರಿ. ಉದ್ವೇಗವು ನಿಮಗೆ ಒಳ್ಳೆಯದಲ್ಲ

 

ಎನ್.ಎಸ್. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next