Advertisement

ಗುರುವಾರದ ರಾಶಿಫಲ: ಯಾರಿಗೆ ಶುಭ-ಯಾರಿಗೆ ಲಾಭ

08:22 AM Aug 19, 2021 | Team Udayavani |

19-08-2021

Advertisement

ಮೇಷ: ದೈಹಿಕ ಸುಖ ಹಾಗೂ ಮಾನಸಿಕ ಸುಖಕ್ಕೆ ಹೆಚ್ಚಿನ ಪರಿಶ್ರಮ. ಉದ್ಯೋಗ, ವ್ಯವಹಾರ ನಿಮಿತ್ತ ಪ್ರಯಾಣ ಸಂಭವ. ನಿರೀಕ್ಷಿತ ಸ್ಥಾನ ಗೌರವಾದಿ ಲಭ್ಯ. ಉತ್ತಮ ಅಭಿವೃದ್ಧಿದಾಯಕ ಧನಾರ್ಜನೆ. ವಾಕ್‌ಚತುರತೆಯಿಂದ ಜನಮನ್ನಣೆ.

ವೃಷಭ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿನ ಸ್ಥಾನಮಾನ ಗೌರವ. ಅಧಿಕ ಧನಾರ್ಜನೆ. ಗೃಹ ದಲ್ಲಿ ಸಣ್ಣ ಬದಲಾವಣೆಗಳು ತೋರಿಬಂದಾವು. ಸಹೋದರಾದಿ ವರ್ಗದವರಿಂದ ನೆಮ್ಮದಿ ಸಂತೋಷ.

ಮಿಥುನ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಅಧಿಕಾರ ಗೌರವಾದಿ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ಪಾಲುದಾರಿಕಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿದಾಯಕ ಬದಲಾವಣೆ. ಗೃಹದಲ್ಲಿ ಸಂತಸದ ವಾತಾವರಣ.

ಕರ್ಕ: ಹಲವು ಚಟುವಟಿಕೆಗಳಿಂದ ಕೂಡಿದ ದಿನ. ದೂರದ ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಸಂದರ್ಭಕ್ಕೆ ಸರಿಯಾದ ಆಲೋಚನೆ ನಿರ್ಣಯದಿಂದ ನಿರೀಕ್ಷಿತ ಸ್ಥಾನ ಲಾಭ. ಆಸ್ತಿ ವಿಚಾರದಲ್ಲಿ ತಾಳ್ಮೆ ಎಚ್ಚರಿಕೆಯ ನಡೆ ಅಗತ್ಯ.

Advertisement

ಸಿಂಹ: ದೈಹಿಕ ಆರೋಗ್ಯ ವೃದ್ಧಿ ಹಾಗೂ ಸಂತುಷ್ಟತೆ. ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ಬಂಧುಗಳಿಂದ ಸಹಕಾರ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಅಧ್ಯಯನಶೀಲರಿಗೆ ಎಲ್ಲಾ ವಿಧದಲ್ಲೂ ಲಾಭ. ದಾಂಪತ್ಯದಲ್ಲಿ ಸುಖ ವೃದ್ಧಿ.

ಕನ್ಯಾ: ಆರೋಗ್ಯವು ಸುಧಾರಣೆಯ ಹಾದಿಯಲ್ಲಿ. ಸರಿಯಾದ ಶಿಸ್ತು ಪಾಲನೆ ಅಗತ್ಯ. ಉದ್ಯೋಗ ವ್ಯವಹಾರ ಗಳಲ್ಲಿ ಮಾನಸಿಕ ನೆಮ್ಮದಿ ವೃದ್ಧಿ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ನಿರ್ವಹಿಸುವ ಚಟುವಟಿಕೆಗಳಲ್ಲಿ ಪ್ರಗತಿ.

ತುಲಾ: ಆರೋಗ್ಯ ಉತ್ತಮ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಅಧಿಕ ಧನಾರ್ಜನೆ. ಗುರುಹಿರಿಯರ ಮೇಲಾಧಿಕಾರಿಗಳ ಸಹಕಾರ ಮಾರ್ಗದರ್ಶನದ ಲಾಭ. ಸಹೋದ್ಯೋಗಿಗಳಿಂದಲೂ ಸಹೋದರಾದಿ ವರ್ಗದವರಿಂದ ಪ್ರೋತ್ಸಾಹ.

ವೃಶ್ಚಿಕ: ಈ ದಿನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಗೌರವ, ಅಧಿಕ ಧನಾರ್ಜನೆ, ಗುರುಹಿರಿಯರ ಪ್ರೋತ್ಸಾಹ, ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಮುನ್ನಡೆ ಹೀಗೆ ಹಲವಾರು ಶುಭಫ‌ಲಗಳು ಕೂಡಿ ಬರುವ ಸಮಯ.

ಧನು: ಆರೋಗ್ಯದಲ್ಲಿ ಸುಧಾರಣೆ ಜವಾಬ್ದಾರಿಯುತ ಕೆಲಸ ಕಾರ್ಯ ವೈಖರಿಯಿಂದ ಜನಮನ್ನಣೆ. ಸ್ಥಾನ ಸುಖವೃದ್ಧಿ . ಅನ್ಯರ ಸಹಕಾರ ನಿರೀಕ್ಷಿಸದೆ ಕಾರ್ಯ ಪ್ರವೃತ್ತರಾಗಿ. ಆಸ್ತಿ ವಿಚಾರದಲ್ಲಿ ಮುನ್ನಡೆ. ಹಿರಿಯರ ಆರೋಗ್ಯ ಗಮನಿಸಿ.

ಮಕರ: ಆರೋಗ್ಯ ಸ್ಥಿರ. ದೂರದ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ. ಸ್ಥಾನಾದಿ ಸುಖ. ರಾಜಕೀಯ, ಸರಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ . ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಸಾಂಸಾರಿಕ ಸುಖ ಹರ್ಷದಾಯಕ. ಮಕ್ಕಳ ವಿಚಾರದಲ್ಲಿ ನೆಮ್ಮದಿ.

ಕುಂಭ: ಉತ್ತಮ ವಾಕ್‌ಚತುರತೆ. ಗಾಂಭಿರ್ಯ ಪ್ರದರ್ಶನ ದಿಂದ ಎಲ್ಲಾ ವ್ಯವಹಾರಗಳಲ್ಲಿ ಜಯ. ಆಸ್ತಿ ವಾಹನಾದಿ ಲಾಭ. ಅಧಿಕ ಗೌರವದಿಂದ ಕೂಡಿದ ಧನಾರ್ಜನೆ. ಧಾರ್ಮಿಕ ಚಟುವಟಿಕೆಗಳಲ್ಲಿ ನೇತೃತ್ವ. ಆರೋಗ್ಯದಲ್ಲಿ ವೃದ್ಧಿ.

ಮೀನ: ಜವಾಬ್ದಾರಿಯುತ ಉದ್ಯೋಗ ವ್ಯವಹಾರದಿಂದ ಎಲ್ಲರ ಪ್ರಶಂಸೆ ಸಂಭವ. ಸಂದರ್ಭಕ್ಕೆ ಸರಿಯಾದ ಉಪಾಯ, ಆಲೊಚನೆಯಿಂದ ಕೂಡಿದ ಕಾರ್ಯ ವೈಖರಿ. ವಿದ್ಯಾರ್ಥಿಗಳಿಗೆ ಗುರುಹಿರಿಯರ ಉತ್ತಮ ಪ್ರೋತ್ಸಾಹ.

 ಜಯತೀರ್ಥ ಆಚಾರ್ಯ

Advertisement

Udayavani is now on Telegram. Click here to join our channel and stay updated with the latest news.

Next