Advertisement

ಗ್ರಹಬಲ:ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫ‌ಲ ಸಂತಸ ತಂದೀತು

07:45 AM Apr 26, 2021 | Team Udayavani |

26-04-2021

Advertisement

ಮೇಷ: ಅನಾವಶ್ಯಕವಾಗಿ ಹಣವನ್ನು ದುಂದುವೆಚ್ಚ ಮಾಡಿ ಕೊನೆಗೆ ಪಶ್ಚಾತ್ತಾಪ ಪಡುವಿರಿ. ಯಾರ ಮಾತಿಗೂ ಸೊಪ್ಪು ಹಾಕದೆ ನಿಮ್ಮ ಮನಸ್ಸಿನಂತೆಯೇ ನಡೆಯುವಿರಿ. ಹಿರಿಯರ ಮಾತನ್ನು ಆಲಿಸುವುದು.

ವೃಷಭ: ಒಳಿತು ಕೆಡಕನ್ನು ಸಮಚಿತ್ತದಿಂದ ಸ್ವೀಕರಿಸುವುದು ಒಳಿತು. ಹೃದ್ಗತ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳದಿರಿ ಹಲವನ್ನು ಹಂಬಲಿಸಿ ಏಕಕಾಲದಲ್ಲಿ ಮುನ್ನುಗದಿರಿ. ತಾಳ್ಮೆ ಸಮಾಧಾನ ಇರಲಿ.

ಮಿಥುನ: ವೈಯಕ್ತಿಕ ಸಮಸ್ಯೆಗಳನ್ನು ದಿಟ್ಟ ನಿರ್ಧಾರಗಳಿಂದ ಎದುರಿಸಬೇಕಾಗುತ್ತದೆ. ಮುಂದೂಡಿಕೆಯ ವೈವಾಹಿಕ ಮಾತುಕತೆಗಳು ಪುನಃ ಚಾಲನೆಗೆ ಬರುತ್ತವೆ. ಧಾರ್ಮಿಕ ಕಾರ್ಯಗಳು ಆಸಕ್ತಿಯಿಂದ ನೆರವೇರುತ್ತವೆ.

ಕರ್ಕ: ಮಂಗಲ ಕಾರ್ಯವನ್ನು ನಡೆಸಲು ಇದು ಸಕಾಲ. ವಾಹನ ಖರೀದಿ ಹಾಗೂ ವಿಲೇವಾರಿಯಲ್ಲಿ ಅಪಾರ ಲಾಭ ತಂದೀತು. ಕುಟುಂಬ ವ್ಯವಸ್ಥೆಯನ್ನು ಪುನಃ ರೂಪಿಸುವುದರಿಂದ ಘನತೆ ಹಾಗೂ ನೆಮ್ಮದಿ ಕಂಡು ಬಂದೀತು.

Advertisement

ಸಿಂಹ: ನೌಕರಿಯಲ್ಲಿ ಭಡ್ತಿ ಕುರಿತು ಉನ್ನತಾಧಿಕಾರಿಗಳ ಸಹಕಾರ ಮುನ್ನಡೆಗೆ ಸಾಧಕವಾಗುತ್ತದೆ. ರಾಜಕೀಯ ಧುರೀಣರಿಗೆ ಪ್ರತಿಷ್ಠೆ, ಮನ್ನಣೆ ಸಾಧ್ಯ. ಭಾಗ್ಯದ ಸಂಬಂಧಿತ ಕ್ರಿಯಾಶೀಲ ಸಿದ್ಧಿಗೆ ದೈವಾನುಗ್ರಹವಿದೆ.

ಕನ್ಯಾ: ಸುಖದ ಬಿಂದಿಗೆಯಲ್ಲಿ ಹುಳಿ ಹಿಂಡುವ ಕಾರ್ಯ ಸಾಂಸಾರಿಕವಾಗಿ ಅನುಭವಕ್ಕೆ ಬಂದೀತು. ಅವಿವಾಹಿತರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರೀಕ್ಷಿತ ಫ‌ಲ ಸಂತಸ ತಂದೀತು.

ತುಲಾ: ಅನೇಕಾನೇಕ ಕಷ್ಟಗಳನ್ನು ಎದುರಿಸುವ ಸಮಯವಿದು. ಗುರು, ರಾಹುಗಳ ಪ್ರತಿಕೂಲತೆ ಆಗಾಗ ಕಂಗೆಡಿಸುವುದು. ತಾಳ್ಮೆ ಸಮಾಧಾನದಿಂದ ವರ್ತಿಸಿರಿ. ವಿರುದ್ಧ ಲಿಂಗಿಗಳಿಂದ ಎಚ್ಚರವಿರಲಿ.

ವೃಶ್ಚಿಕ: ಪ್ರತಿಭಾಶಾಲಿಗಳಾದರೂ ದುರ್ದೈವ ನಿಮ್ಮನ್ನು ಕಾಡಲಿದೆ. ರಾಜಕೀಯ ವರ್ಗದವರು ತಮ್ಮ ಕ್ಷೇತ್ರದಲ್ಲಿ ಕಸರತ್ತುಗಳನ್ನು ತೋರಿಸಬೇಕಾದೀತು. ಸಾಂಸಾರಿಕವಾಗಿ ಧರ್ಮಪತ್ನಿಯ ಸಹಕಾರ ತುಸು ಹಾಯಾಗಿಸಲಿದೆ.

ಧನು: ವೈಯಕ್ತಿಕ ತಪ್ಪುಗಳಿಂದ ಸಮಸ್ಯೆಗಳ ಸುಳಿಯಲ್ಲಿ ಒದ್ದಾಡುವಂತಾದೀತು. ವಿವಾಹಿತರಿಗೆ ಅನಾವಶ್ಯಕ ತಪ್ಪು ಅಭಿಪ್ರಾಯ ಕಲಹಕ್ಕೆ ಕಾರಣವಾಗಲಿದೆ. ಹಣಕಾಸಿನ ವಿಚಾರದಲ್ಲಿ ಧನ ಸಂಗ್ರಹ ಸಮಾಧಾನ ತಂದರೂ ಖರ್ಚು-ವೆಚ್ಚಗಳಲ್ಲಿ ಲೆಕ್ಕಾಚಾರವಿರಬೇಕು.

ಮಕರ: ದೂರ ಸಂಚಾರದ ಬಗ್ಗೆ ಜಾಗ್ರತೆ ಅಗತ್ಯವಿರಬೇಕು. ವಿದ್ಯಾರ್ಥಿಗಳಿಗೆ ತಕ್ಕ ಮಟ್ಟಿನ ಫ‌ಲ ತೋರಿಬರಲಿದೆ. ಮಿತ್ರವರ್ಗದವರ ಸಹಾಯ, ಸಹಕಾರದಿಂದ ನೆಮ್ಮದಿ ತಂದರೂ ಉದಾಸೀನತೆ ಸಲ್ಲದು.

ಕುಂಭ: ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾದೀತು. ಮನೆಯಲ್ಲಿ ಮಕ್ಕಳ ಹಾಗೂ ಕುಟುಂಬ ವರ್ಗದವರ ಆಗಮನದಿಂದ ಸಂತಸವಾದೀತು. ಸಣ್ಣಪುಟ್ಟ ಪ್ರಯಾಣವು ಕಂಡುಬಂದೀತು. ಮುನ್ನಡೆ ಇರುತ್ತದೆ.

ಮೀನ: ಮಂಗಲ ಕಾರ್ಯದ ನಿಮಿತ್ತ ಸ್ವಲ್ಪ ಗೊಂದಲಗಳು ಕಂಡು ಬಂದು ತಲೆಕೆಡಲಿದೆ. ಉಳಿದೆಲ್ಲ ವಿಷಯಕ್ಕೆ ತಲೆ ಕೆಡಿಸದಿರಿ. ನೀವು ಲೆಕ್ಕ ಹಾಕಿದ ಹಾಗೆ ಕೆಟ್ಟದು ಆಗಲಾರದು. ಧನಾತ್ಮಕವಾಗಿ ಚಿಂತಿಸಿರಿ. ಉತ್ತಮ ಫ‌ಲಿತಾಂಶವಿದೆ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next