Advertisement

ಶುಕ್ರವಾರದ ರಾಶಿಫಲ: ಈ ದಿನ ಯಾರಿಗೆ ಶುಭ? ಯಾರಿಗೆ ಲಾಭ?

07:20 AM Jun 04, 2021 | Team Udayavani |

4-6-2021

Advertisement

ಮೇಷ: ಭವಿಷ್ಯದ ಬಗ್ಗೆ ಜಾಗ್ರತೆ ವಹಿಸಬೇಕಾಗುತ್ತದೆ. ಯಾವುದೇ ಕೆಲಸ ಮಾಡುವ ಮುನ್ನ ದುಡುಕದೆ ಪೂರ್ವ ತಯಾರಿಯ ಅಗತ್ಯವಿದೆ. ಇನ್ನಷ್ಟು ಗೆಳೆಯರನ್ನು ಸಂಪಾದಿಸಲಿದ್ದೀರಿ. ವಿಶ್ವಾಸದ ದುರುಪಯೋಗವಾಗದಂತೆ ನೋಡಿ.

ವೃಷಭ: ನಿಮ್ಮ ಸ್ಪೂರ್ತಿಯು ನಿಮ್ಮನ್ನು ಮುನ್ನಡೆಸುವುದು. ಬ್ಯಾಂಕಿಂಗ್‌, ಫೈನಾನ್ಸ್‌ ವೃತ್ತಿಯವರಿಗೆ ಆದಾಯ ವೃದ್ಧಿಯಿದ್ದರೂ ಜವಾಬ್ದಾರಿಯ ಹೊರೆ ಹೆಚ್ಚಾಗಲಿದೆ. ಅವಿವಾಹಿತರಿಗೆವೈವಾಹಿಕ ಸಂಬಂಧಗಳು ಕಂಡುಬಂದಾವು. ಶುಭವಿದೆ.

ಮಿಥುನ: ಕೆಲವು ವಿಷಯಗಳು ಅನಿರೀಕ್ಷಿತವಾಗಿ ಘಟಿಸಿ ನಿಮ್ಮನ್ನು ಆಶ್ಚರ್ಯ ಚಕಿತರನ್ನಾಗಿಸಲಿದೆ. ನಿಮ್ಮ ಆತ್ಮವಿಶ್ವಾಸ ಹಾಗೂ ಭರವಸೆಗಳು ನಿಮ್ಮನ್ನು ಮುನ್ನಡೆಸಲಿದೆ. ಕಾರ್ಯರಂಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ.

ಕರ್ಕ: ಸಾಮಾಜಿಕ ಕ್ಷೇತ್ರದಲ್ಲಿ ಯಶಸ್ಸು, ಸೂಕ್ತ ಸ್ಥಾನಮಾನಗಳು ನಿಮ್ಮದಾಗಲಿದೆ. ಗೃಹದಲ್ಲಿ ಶುಭ ಮಂಗಲ ಕಾರ್ಯಗಳಿಂದಾಗಿ ಸಂಭ್ರಮ ಕಂಡುಬರಲಿದೆ. ಭವಿಷ್ಯಕ್ಕೆ ಒಳ್ಳೆಯ ಯೋಜನೆಗಳನ್ನು ರೂಪಿಸಲು ಇದು ಸಕಾಲವೆನ್ನಬಹುದು.

Advertisement

ಸಿಂಹ: ಆಗಾಗ ಅನಿರೀಕ್ಷಿತ ಖರ್ಚುವೆಚ್ಚಗಳು ಬಂದೊದಗಬಹುದು. ಅದನ್ನು ನಿಭಾಯಿಸಿಕೊಂಡು ಹೋಗುವುದರಲ್ಲಿ ನಿಮ್ಮ ಚಾಕಚಕ್ಯತೆ ಅಡಗಿದೆ. ಆದರೂ ಗೃಹಿಣಿಗೆ ಅನಾವಶ್ಯಕ ಕೋಪ, ಉದ್ವೇಗಗಳು ಹೆಚ್ಚಾದೀತು. ತಾಳ್ಮೆ ಮುಖ್ಯ.

ಕನ್ಯಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ಬಾರದೆ ನಿರಾಸೆ ತಂದೀತು. ಕೃಷಿಕಾರರಿಗೆ ತುಂಬಾ ಸಂತಸದ ದಿನಗಳಿವು. ವೃತ್ತಿರಂಗದಲ್ಲಿ ಸ್ತ್ರೀ ಮೂಲಕ ಅಪವಾದ ಭೀತಿ ತೋರಿಬರಲಿದೆ. ಯಾವುದಕ್ಕೂ ಅವಸರಿಸದಿರಿ.

ತುಲಾ: ಸಂಬಂಧಗಳನ್ನು ಸೂಕ್ಷ್ಮವಾಗಿ ನಿಭಾಯಿಸಿರಿ. ಹಿತಶತ್ರುಗಳಿಂದ ಕಿರುಕುಳ ಕಂಡುಬಂದೀತು. ಮುಂದೆ ಸುಧಾರಿಸುವುದೆಂದು ಭರವಸೆಯನ್ನಿಡಿರಿ. ಸರಕಾರೀ ಕೆಲಸ ಕಾರ್ಯಗಳು ಕಾರ್ಯರೂಪಕ್ಕೆ ಬರಲಿವೆ. ಭಿನ್ನಾಭಿಪ್ರಾಯಕ್ಕೆ ಬಲಿಯಾಗದಿರಿ .

ವೃಶ್ಚಿಕ: ವೃತ್ತಿರಂಗದಲ್ಲಿ ನಿಮ್ಮ ಯೋಚನೆಗಳಾವುವೂ ನಿಯಂತ್ರಣದಲ್ಲಿಲ್ಲದೆ ಅನ್ಯಮಸ್ಕರಾಗುವ ಪ್ರಸಂಗವು ಒದಗಿ ಬಂದೀತು. ಕೆಲವೊಂದು ಸಣ್ಣಪುಟ್ಟ ಬದಲಾವಣೆಯನ್ನು ಮಾಡಿಕೊಂಡರೆ ಉತ್ತಮ. ಮೌನವೇ ಲೇಸು.

ಧನು: ಕಿರು ಪ್ರಯಾಣವು ನಿಮ್ಮನ್ನು ಸಂತಸಗೊಳಿಸಲಿದೆ. ಆದರೆ ಅದರೊಡನೆ ಕಿರಿಕಿರಿಯು ಕಂಡುಬಂದೀತು ಮಕ್ಕಳಿಗೆ ಮನೆಯಲ್ಲೇ ಕುಳಿತು ಸಮಯ ಕಳೆಯಲು ಕಷ್ಟವಾದೀತು. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿರಿ.

ಮಕರ: ವಿವಿಧ ರೀತಿಯ ಉದ್ಯೋಗಾವಕಾಶಗಳು ಒದಗಿ ಬರಲಿದೆ. ಉದ್ಯೋಗ ಬದಲಾವಣೆಯ ಸಾಧ್ಯತೆಯೂ ಕಂಡು ಬರಲಿದೆ. ನವದಂಪತಿಗಳಿಗೆ ಶುಭ ಸಮಾಚಾರ ಕಂಡುಬರಲಿದೆ.

ಕುಂಭ: ಎಲ್ಲಾ ಕೆಲಸ ಕಾರ್ಯಗಳಲ್ಲಿ ಧೈರ್ಯದಿಂದ ಹೆಜ್ಜೆ ಇರಿಸಿದ್ದಲ್ಲಿ ಮುಂದೆ ಒಳ್ಳೆಯ ಭವಿಷ್ಯವು ಕಂಡು ಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವು ಕಂಡುಬರಲಿದೆ. ಆದಾಯದ ಮೂಲವು ಬೆಳೆಯಲಿದೆ.

ಮೀನ: ಮನೆಯಲ್ಲಿ ಧಾರ್ಮಿಕ ಕೃತ್ಯಗಳು ನಡೆದಾವು. ಚಿಂತೆಯ ಜೊತೆಗೆ ದೇಹಾರೋಗ್ಯವು ಸರಿಯಾಗಿ ಇರಲಾರದು. ಕೌಟುಂಬಿಕವಾಗಿ ಕಲಹಗಳು ಆಗಾಗ ಗೋಚರಕ್ಕೆ ಬಂದಾವು. ವ್ಯಾಪಾರದಲ್ಲಿ ತೊಡಕುಗಳು ಇದ್ದಾವು.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next