ಸಾಗರ: ಇಲ್ಲಿನ ಚಾಮರಾಜಪೇಟೆಯ ವ್ಯಾಪ್ತಿಯಲ್ಲಿ ಹೋರಿಯೊಂದಕ್ಕೆ ಕೊಂಬು ಮುರಿದು ಗಾಯವಾಗಿದ್ದ ಹಿನ್ನೆಲೆಯಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಮತ್ತಿತರ ಗೋಪ್ರೇಮಿ ಸಂಘಟನೆಗಳು ಸೂಕ್ತ ಚಿಕಿತ್ಸೆ ನೀಡಿ, ಪುಣ್ಯಕೋಟಿ ಗೋಶಾಲೆಗೆ ಕಳುಹಿಸಿಕೊಟ್ಟ ಘಟನೆ ಸೋಮವಾರ ನಡೆದಿದೆ.
ಕಳೆದ ನಾಲ್ಕಾರು ದಿನಗಳಿಂದ ಬೀಡಾಡಿ ಹೋರಿಯೊಂದರ ಕೊಂಬು ಕಿತ್ತು ತೀವ್ರವಾದ ರಕ್ತಸ್ರಾವವಾಗುತ್ತಿತ್ತು. ಖಾಸಗಿ ಬಸ್ ಹಳೆಯ ನಿಲ್ದಾಣ, ನಗರಠಾಣೆ ವ್ಯಾಪ್ತಿ ಪರದಾಡುತ್ತಿದ್ದ ಹೋರಿಯನ್ನು ಗಮನಿಸಿದ ಬಜರಂಗದಳ, ವಿಶ್ವಹಿಂದುಪರಿಷತ್ ಕಾರ‍್ಯಕರ್ತರು ಸುಮಾರು 6 ತಾಸುಗಳ ಕಾರ‍್ಯಾಚರಣೆ ನಡೆಸಿ, ಪೇಟೆ ಠಾಣೆಯ ಮುಂಭಾಗದಲ್ಲಿ ಹೋರಿಯನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ.
ನಂತರ ಪಶು ಇಲಾಖೆಯ ತಜ್ಞರ ನೆರವಿನಿಂದ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ಪಡೆದುಕೊಂಡ ಹೋರಿಯನ್ನು ಸಮೀಪದ ಪುಣ್ಯಕೋಟಿ ಗೋಶಾಲೆಗೆ ಕಳಿಸಿಕೊಡಲಾಗಿದೆ.
ಇದನ್ನೂ ಓದಿ:ಸಂಘಟನೆಯ ಹೆಸರಿನಲ್ಲಿ ಶೋಚನೀಯ ಪರಿಸ್ಥಿತಿ ನಿರ್ಮಾಣ : ಶ್ರೀಈಶ್ವರಾನಂದಪುರಿ ಸ್ವಾಮೀಜಿ ವಿಷಾದ
ಬಜರಂಗದಳ ಸಂಚಾಲಕ ಸಂತೋಷ ಶಿವಾಜಿ, ರಾಘವೇಂದ್ರ ಕಾಮತ್, ಸುನೀಲ್, ರುದ್ರಪ್ಪ, ಕಿರಣ್ ಗೌಡ, ಮಂಜು ಗೌಡ, ಆಟೋ ಕಿರಣ್, ಆಟೋ ಆಶೋಕ, ಸುದರ್ಶನ, ದೀಪು, ಉಲ್ಲಾಸ, ವರ್ಷಿತ್, ಅಭಿಷೇಕ್ ಆಟೋ ಗಣೇಶ್ ಮತ್ತಿತರರು ಸಹಕಾರ ನೀಡಿದ್ದರು.