Advertisement
ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಕರ್ನಾಟಕ ಸಂಘ ಅಂಧೇರಿ, ಚೆಂಬೂರು ಕರ್ನಾ ಟಕ ಸಂಘ ಹಾಗೂ ಕರ್ನಾಟಕ ಗಡಿ ಪ್ರದೇಶ ಪ್ರಾಧಿಕಾರ, ಪ್ರವಾಸೋದ್ಯಮ ಇಲಾಖೆ ಮತ್ತು ಮುಂಬಯಿಯ ವಿವಿಧ ಕನ್ನಡ ಸಂಘ-ಸಂಸ್ಥೆಗಳ ಸಹಯೋಗದಿಂದ ಜು. 17ರಂದು ಜರಗಿದ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮವನ್ನು ಅತಿಥಿಗಳ ಜತೆಗೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ ಕನ್ನಡ ಬೆಳೆದು ವಿಜೃಂಭಿಸುತ್ತಿರುವುದು ನಮ್ಮ ಸೌಭಾಗ್ಯ. ದೇಶದ ಯಾವುದೇ ಭಾಗದಲ್ಲಿ ಕನ್ನಡಿಗರ ಸಂಘಟನೆ ಇದ್ದಲ್ಲಿ, ಅವರ ಜತೆ ಕರ್ನಾಟಕ ಸರಕಾರ ಇದೆ. ಪರರ ಜತೆ ಜೀವಿಸುವ ಜತೆಗೆ ಭಾಷಾ ಬಾಂಧವ್ಯ ಮೇಳೈಸುವ ಪ್ರಬುದ್ಧ ಕಾರ್ಯಕ್ರಮ ಇಂದು ನಡೆದಿದೆ. ಇಂತಹ ಸುಂದರ ಸಮೃದ್ಧ ಕನ್ನಡಿಗರ ಒಗ್ಗಟ್ಟಿನ ಕಾರ್ಯಕ್ರಮ ಸದಾ ಜರಗುತ್ತಿರಲಿ. ಸರಕಾರ, ಪ್ರಾಧಿಕಾರ ಸದಾ ನಿಮ್ಮ ಜತೆಗೆ ಇದೆ ಎಂದು ತಿಳಿಸಿ ಶುಭ ಹಾರೈಸಿದರು.
Related Articles
Advertisement
ಕನ್ನಡ ಸಾಧಕರ ಭಾವಚಿತ್ರ ಅನಾ ವರಣಗೊಳಿಸಿದ ಮಹಾನಗರ ಹಿರಿಯ ಆರ್ಥಿಕ ತಜ್ಞ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, 40 ಲಕ್ಷ ಹೊರನಾಡ ಕನ್ನಡಿಗರ ಬಗ್ಗೆ ಗಾಢವಾಗಿ ಚಿಂತಿಸುವ ಪರಿಪಕ್ವ ಕಾಲದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಕವಿಚಿಂತನೆಯ ಗೀತೆಯನ್ನು ಸ್ಮರಿಸುವುದು ಇಂದು ಅನಿವಾರ್ಯ. ಮುಂಬಯಿ ಕನ್ನಡಿಗರು ಬೆಳೆಸಿಕೊಂಡ ಭಾಷಾಭಿಮಾನದ ಪ್ರೀತಿ ಇಂದಿನ ಈ ಕನ್ನಡ ಉತ್ಸವಕ್ಕೆ ಸಾಕ್ಷಿಯಾಗಿದೆ. ಒಂದು ಸಾವಿರ ವರ್ಷಗಳಿಂದ ಮಾರ್ಪಾಡು ಹೊಂದದ ಶುದ್ಧ ಭಾಷೆಯಿದ್ದರೆ ಅದು ಕನ್ನಡ ಮಾತ್ರ. ಹೊರನಾಡಿನಲ್ಲೂ ನಮ್ಮ ಭಾಷೆ, ಸಂಸ್ಕೃತಿಗೆ ಗೌರವ ನೀಡಬೇಕು. ಇದು ಪ್ರತಿಯೋರ್ವ ಕನ್ನಡಿಗರ ಆದ್ಯ ಕರ್ತವ್ಯ ಎಂದರು.
ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಸಧಾಕರ ಅರಾಟೆ ಕಾರ್ಯಕ್ರಮದ ಮಹತ್ವವನ್ನು ವಿವರಿಸಿ, ಈ ಸಂಭ್ರಮವು ಸಮಸ್ತ ಮುಂಬಯಿ ಕನ್ನಡಿಗರಿಗೆ ಸಂಧ ಗೌರವವಾಗಿದೆ ಎಂದು ತಿಳಿಸಿ, ಸಂಘದ ವಿಸ್ತೃತ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಬಗ್ಗೆ ವರದಿ ನೀಡಿದರು. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಪತ್ರಕರ್ತ ದಯಾ ಸಾಗರ್ ಚೌಟ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಬಳಿಕ ಗಣ್ಯರಿಗೆ ಹೊರನಾಡ ಕನ್ನಡ ಸಂಸ್ಕೃತಿ ಸಂಭ್ರಮದ ಕಿರುಕಾಣಿಕೆಯನ್ನಿತ್ತು ಗೌರವಿಸಲಾಯಿತು.
ಕೃತಿ ಬಿಡುಗಡೆ :
ಈ ಸಂದರ್ಭ ಕವಿ ಭೋಜರಾಜ್ ಶೆಟ್ಟಿ ಅವರ ಕಲ್ಪವೃಕ್ಷ ಮತ್ತು ಕಾಮಧೇನು ಕೃತಿಯನ್ನು ಸಭಾಪತಿ ರಘುನಾಥ್ ರಾವ್ ಮಲಕಾಪುರೆ ಬಿಡುಗಡೆಗೊಳಿಸಿದರು. ಲೇಖಕಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಕೃತಿ ಪರಿಚಯಿಸಿದರು. ತುಳು ಅಧ್ಯಯನ ಪೀಠ ಮಂಗಳೂರು ವಿವಿ ಸದಸ್ಯ ಪ್ರವೀಣ್ ಕುಮಾರ್ ಕೊಡಿಯಾಲ್‌ಬೈಲು, ತುಳು ಅಧ್ಯಯನ ಪೀಠ ಮಂಗಳೂರು ವಿವಿಯ ನವೀನ್‌ಚಂದ್ರ ಸನಿಲ್, ವಾಸ್ತುತಜ್ಞ, ಕವಿ, ಸಾಹಿತಿ, ಯಕ್ಷಗಾನ ಪ್ರಸಂಗಕರ್ತ ಉದನೇಶ್ವರ ಪ್ರಸಾದ್ ಭಟ್ ಮೂಲಡ್ಕ ಅವರನ್ನು ಸಮ್ಮಾನಿಸಲಾಯಿತು.
ಕವಿಗೋಷ್ಠಿ, ನೃತ್ಯ ಸ್ಪರ್ಧೆ :
ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಷ್ಟ್ರ-ನಾಡ ಪ್ರೀತಿ ಕನ್ನಡ ಸಮೂಹ ಗಾಯನ ಸ್ಪರ್ಧೆ ಜರಗಿತು. ಮಧು ಅಶೋಕ್ ವಸ್ತ್ರದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ವೇಣುಗೋಪಾಲ್ ಶೆಟ್ಟಿ ಇನ್ನಂಜೆ, ಆಲೂರು ಪಿ. ಸುಧಾಕರ್, ಗಾಯತ್ರಿ ನಾಗೇಶ್, ಜಯಲಕ್ಷ್ಮೀ ಪಿ. ಶೆಟ್ಟಿ, ಪ್ರಫುಲ್ಲಾ ಡಿ. ಶೆಟ್ಟಿ, ಪ್ರಭಾಕರ ಶೆಟ್ಟಿ ಕವನ ವಾಚಿಸಿದರು. ವಿವಿಧ ಕನ್ನಡ ಸಂಸ್ಥೆಗಳಿಂದ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ನಡೆಯಿತು.
ನಾಗರಾಜ ಶೆಟ್ಟಿ ಪಡುಕೋಣೆ, ಮಾಧವ ಶೆಟ್ಟಿ, ಕರ್ನಾಟಕ ಗಡಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಉದ್ಯಮಿ ಗಣಪತಿ, ಚೆಂಬೂರು ಕರ್ನಾಟಕ ಸಂಘದ ಉಪಾಧ್ಯಕ್ಷ ದೇವದಾಸ್ ಶೆಟ್ಟಿಗಾರ್, ಕರ್ನಾಟಕ ಸಂಘ ಅಂಧೇರಿ ಮಾಜಿ ಅಧ್ಯಕ್ಷ ಹ್ಯಾರಿ ಸಿಕ್ವೇರಾ, ಪಿ. ಧನಂಜಯ ಶೆಟ್ಟಿ, ಸಮಾಜ ಸೇವಕ, ಉದ್ಯಮಿ ಮಹೇಶ್ ಶೆಟ್ಟಿ, ಅಂಧೇರಿ ಕರ್ನಾಟಕ ಸಂಘದ ಸಂಸ್ಥಾಪಕ ಕೃಷ್ಣ ಬಿ. ಶೆಟ್ಟಿ, ಅಧ್ಯಕ್ಷ ಭಾಸ್ಕರ ಸುವರ್ಣ ಸಸಿಹಿತ್ಲು, ಕಾರ್ಯದರ್ಶಿ ಉದಯ ಕಾರ್ಗಲ್, ಜಂಟಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ವಾಗತ ಸಮಿತ ಸಮಿತಿಯ ಸಂಚಾಲಕ ಬಾಬಾ ಪ್ರಸಾದ್ ಅರಸ, ಅಮೃತಾ ಶೆಟ್ಟಿ, ವಿದುಷಿ ಶ್ಯಾಮಲಾ ರಾಧೇಶ್, ನಾರಾಯಣ ನಂದಳಿಕೆ, ಬಾಲಕೃಷ್ಣ ಶೆಟ್ಟಿ ಆದ್ಯಪಾಡಿ, ಪತ್ರಕರ್ತ ದಯಾಸಾಗರ್ ಚೌಟ ಅವರು ಕಾರ್ಯಕ್ರಮ ನಿರ್ವಹಿಸಿದರು.
ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಶಾಸ್ತ್ರೀಯವಾಗಿ ಬೆಳೆದು ನಿಂತಿದೆ. ಉತ್ಕೃಷ್ಟ ಸಂಸ್ಕೃತಿ, ಸಂಸ್ಕಾರಗಳ ಜತೆಗೆ 8 ಜ್ಞಾನಪೀಠ ಪ್ರಶಸ್ತಿ, 3 ಭಾರತರತ್ನ ಪಡೆದುಕೊಂಡಿರುವ ಕನ್ನಡ ನಾಡು ನಮಗೆಲ್ಲರಿಗೂ ಹೆಮ್ಮೆ. ನಮ್ಮ ಪೂರ್ವಜರು ರಾಷ್ಟ್ರಕ್ಕೆ ನೀಡಿದ ಕೊಡುಗೆ, ಪ್ರಾಚೀನ ಪರಂಪರೆ, ಸಂಸ್ಕೃತಿ, ಸಂಪ್ರದಾಯ ಮುಂದಿನ ಪೀಳಿಗೆಯಲ್ಲಿ ಅರಳಲಿ.-ವೀರೇಶ್ ಪ್ರಭು ಐಪಿಎಸ್ ಹೆಚ್ಚುವರಿ ಪೊಲೀಸ್ ಆಯುಕ್ತರು ಮುಂಬಯಿ
ತುಳುವರು ಅನುಷ್ಠಾನದಲ್ಲಿ ಅಗ್ಯಗಣ್ಯರು. ಮಾತೃ ಸಂಸ್ಕೃತಿಯನ್ನು ಗಟ್ಟಿ ಮಾಡಿಕೊಂಡು ಸಾಂಸ್ಕೃತಿಕ, ಶೈಕ್ಷಣಿಕವಾಗಿ ಬದುಕುವವರು. ಗಡಿ ಪ್ರಾಧಿಕಾರದ ಮೂಲಕ ಸಮಸ್ತ ಕನ್ನಡಿಗರ ಚಿಂತಿಸುವ ಏಕೈಕ ಘನ ಸರಕಾರ ಕರ್ನಾಟಕ ಸರಕಾರ. ಮಹಾನಗರದ ಮಕ್ಕಳನ್ನು, ಚಿಂತಕರನ್ನು, ಗಣ್ಯರನ್ನು ಕರ್ನಾಟಕದ ವಿವಿಧ ಕಾರ್ಯಕ್ರಮಗಳಲ್ಲಿ ಸಮ್ಮಾನಿಸುವ ಬಗ್ಗೆ ಕರ್ನಾಟಕ ಸರಕಾರ ಕ್ರಮ ಕೈಗೊಳ್ಳಬೇಕು.-ಪ್ರದೀಪ ಕುಮಾರ ಕಲ್ಕೂರ, ಕಲ್ಕೂರ ಪ್ರತಿಷ್ಠಾನ ಮಂಗಳೂರು
-ಚಿತ್ರ-ವರದಿ: ರಮೇಶ್ ಉದ್ಯಾವರ